ಕ್ರಿಸ್ಮಸ್ ಮುಗಿದ ತಕ್ಷಣ ಗುಡ್ ನ್ಯೂಸ್ ಕೊಟ್ಟ ಮೇಘನಾ ರಾಜ್, ಒಂಟಿ ಜೀವನಕ್ಕೆ ಗುಡ್ ಬೈ

 | 
Hh

ಸದಾ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಂಡು ನೋವನ್ನು ಮರೆಯುತ್ತಿರುವ ಮೇಘನಾ ರಾಜ್ ಇದೀಗ ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಚಿರು ಸರ್ಜಾ ಮತ್ತು ಮೇಘನಾ ರಾಜ್ ದಂಪತಿ ಪುತ್ರ ರಾಯನ್ ರಾಜ್ ಸರ್ಜಾ ಸಮಸ್ತ ಜನತೆಗೆ ಕಿಸ್ಮಸ್ ಹಬ್ಬದ ಶುಭಾಶಯಗಳು. ನಿನ್ನೆ ಮಧ್ಯರಾತ್ರಿ ತಾಯಿ ಮತ್ತು ಅಜ್ಜ ಅಜ್ಜಿಯೊಂದಿಗೆ ಕೋರಮಂಗಲ ಸಂತ ಫ್ರಾಯರಿ ಚರ್ಚ್ ಆಗಮಿಸಿದ್ದ ರಾಯನ್, ತಾಯಿಯ ಜೊತೆಗೆ ಎಲ್ಲರಿಗೂ ಮೇರಿ ಕ್ರಿಸ್ಮಸ್ ಎಂದು ಶುಭಾಶಯಗಳನ್ನು ಕೋರಿದ್ದಾನೆ.

ಚರ್ಚ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ನಟಿ ಮೇಘನಾ ರಾಜ್, ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು. ಹೊಸ ವರ್ಷಕ್ಕೆ ಮತ್ತೆ ಕಾಲಿಟ್ಟಿದ್ದೀವಿ.  ಈ ಕ್ರಿಸ್ ಮಸ್ ಎಲ್ಲರಿಗೂ ಮಿರಾಕಲ್ ತರಲಿ. ಎಲ್ಲರೂ ಸೇಫ್ ಆಗಿರಲಿ, ಎಲ್ಲರಿಗೂ ಒಳ್ಳೆಯದಾಗಲಿ.  ನಾನೆಲ್ಲಿದ್ದರೂ ನನ್ನ ಮಗ ಇರಲೇಬೇಕು. ನಾವಿಬ್ರು ಒಂಥರಾ ಬೆಸ್ಟ್ ಫ್ರೆಂಡ್ಸ್ ಇದ್ದಂಗೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ರಾಯನ್ ರಾಜ್ ಸರ್ಜಾ ಮೇರಿ ಕ್ರಿಸ್ ಮಸ್ ಹೇಳಿದರು. ಅದನ್ನು ಕಂಡ ಮೇಘನಾ, ಇವನು ಸಿಂಗಲ್ ಟೇಕ್ ಆರ್ಟಿಸ್ಟ್ ಎಂದು ಹಾಸ್ಯ ಚಟಾಕಿ ಹಾರಿಸಿದರು. ಕ್ರಿಸ್ ಮಸ್ ಹಬ್ಬ ಕ್ರಿಶ್ಚಿಯನ್ನರು ಮಾತ್ರ ಆಚರಿಸೋದಲ್ಲ. ಡಿಸಂಬರ್ ಬರ್ತಿದ್ದಂತೆ ಎಲ್ಲರಲ್ಲೂ ಕ್ರಿಸ್ ಮಸ್ ಸಡಗರ ಶುರುವಾಗುತ್ತೆ. ಕ್ರಿಸ್ ಮಸ್ ಹಬ್ಬ ಎಂದರೆ ಖುಷಿ ಹಂಚೋದು. ಒಳ್ಳೆಯದನ್ನ ಬಯಸೋದು ಎಂದು ಹೇಳಿದ್ದಾರೆ.

ಇನ್ನು ಇದೆ ಸಂದರ್ಭದಲ್ಲಿ ಎಲ್ಲರಿಗೂ ಸಿಹಿ ಸುದ್ದಿ ನೀಡಿದ ಮೇಘನಾ ರಾಜ್ ಮುಂದಿನ ದಿನಗಳಲ್ಲಿ ಅಮರನಾಥ ಸಿನೆಮಾದ ಜೊತೆಗೆ ಮತ್ತೊಂದು ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ಅಭಿನಯಿಸಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಅದರ ಹೆಸರನ್ನು ಕೂಡ ಹೇಳುತ್ತೇನೆ ಎಂದಿದ್ದಾರೆ. ಹಾಗಾಗಿ ಅಭಿಮಾನಿಗಳಲ್ಲಿ ಸಂತೋಷ ಮನೆ ಮಾಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.