ದ್ವಾರಕೀಶ್ ದೇಹ ನೋಡಿ ಬಿಕ್ಕಿಬಿಕ್ಕಿ ಅತ್ತ ಮೇಘನಾ ರಾಜ್; ಎರಡನೇ ಪತ್ನಿಗೆ ಸಂತೈಸಿದ ಮೇಘನಾ

 | 
Hh

ಅಪುಂಡ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಮೇಘನಾ ರಾಜ್. ಹಿರಿಯ ನಟ ಸುಂದರ್ ರಾಜ್ ಹಾಗೂ ನಟಿ ಪ್ರಮೀಳಾ ಜೋಷಾಯಿ ಪುತ್ರಿಯಾಗಿರುವ ಮೇಘನಾ ರಾಜ್ ಕನ್ನಡ ಮಾತ್ರ ಅಲ್ಲ ಪಕ್ಕದ ತೆಲುಗು, ತಮಿಳು ಹಾಗೂ ಮಲೆಯಾಳಂ ಚಿತ್ರರಂಗದಲ್ಲೂ ಖ್ಯಾತಿ ಗಳಿಸಿದ್ದಾರೆ.

ರಾಜಾ ಹುಲಿ', 'ಆಟಗಾರ', 'ಬಹುಪರಾಕ್' ಚಿತ್ರಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಜನಪ್ರಿಯತೆ ಗಳಿಸಿದ ನಟಿ ಮೇಘನಾ  ರಾಜ್ ಆಟಗಾರ ಸಿನೆಮಾ ಮಾಡಿದ್ದೇ ದ್ವಾರಕೀಶ್ ಅವರು ಚಿರು ಮತ್ತು ನನ್ನ ಪ್ರೀತಿಯಲ್ಲಿ ಬಹುಪಾಲು ಅವರಿಗೆ ಸಲ್ಲಬೇಕು ಎಂದು ನಿನ್ನೆ ದ್ವಾರಕೀಶ್ ಅವರ ಅಂತಿಮದರ್ಶನಕ್ಕೆ ಹೋದಾಗ ನುಡಿದಿದ್ದಾರೆ.

ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ದ್ವಾರಕೀಶ್ ಅವರು ನಟನಾಗಿ, ನಿರ್ಮಾಪಕನಾಗಿ ಹಾಗೂ ನಿರ್ದೇಶಕನಾಗಿ ಅವರು ಹೆಸರು ಮಾಡಿದ್ದರು. ಸಾಕಷ್ಟು ಜನರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ಅವರಿಗೆ ಇದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಇನ್ನು ತಂದೆ ಸುಂದರ್ ರಾಜ್ ಅವರೊಂದಿಗೆ ದ್ವಾರಕೀಶ್ ಅವರ ಪಾರ್ಥಿವ ಶರೀರವನ್ನು ದರ್ಶನ ಮಾಡಿ ಕಣ್ಣೀರಿಟ್ಟಿದ್ದಾರೆ ಮೇಘನಾ ರಾಜ್.

ಮೇಘನಾ ರಾಜ್  ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಪತಿ ಚಿರಂಜೀವಿ ಮೃತಪಟ್ಟ ಬಳಿಕ ಅವರು ಕಣ್ಣೀರಲ್ಲಿ ಕೈ ತೊಳೆದರು. ಆ ಬಳಿಕ ರಾಯನ್ ಜನಿಸಿದ. ಈ ಸಂದರ್ಭದಲ್ಲಿ ಅವರು ಚಿತ್ರರಂಗದಿಂದ ದೂರ ಇದ್ದರು. ಈಗ ಅವರು ನಟನೆಗೆ ಕಂಬ್ಯಾಕ್ ಮಾಡಿದ್ದಾರೆ. ಅವರ ನಟನೆಯ ‘ತತ್ಸಮ ತದ್ಭವ’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿದೆ. ಇನ್ನೆರಡು ಸಿನೆಮಾ ನಟಿಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.