ಧ್ರುವ ಸರ್ಜಾ ಮಗಳು ಮೊಟ್ಟಮೊದಲ ಬಾರಿಗೆ ರೀಲ್ಸ್ ಮಾಡುವುದನ್ನು ನೋಡಿ ಎದ್ದು ಬಿದ್ದು ನಕ್ಕ ಮೇಘನಾ ರಾಜ್

 | 
Ggu

ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಹಾವಳಿ ಜೋರಾಗಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಯಾವುದೇ ಪೇಜ್ ತೆಗೆದರೂ ಲಕ್ಷ ಲಕ್ಷ ರೀಲ್ಸ್ ಕಣ್ಣಿಗೆ ರಾಚುತ್ತವೆ. ಕೆಲವೇ ಕ್ಷಣಗಳಲ್ಲಿ ಸಖತ್ ಮಜಾ ಕೊಡುವ ಸಾಕಷ್ಟು ರೀಲ್ಸ್ ಸಿಗುತ್ತವೆ. ನೋಡ್ತಾ ನೋಡ್ತಾ ಕೆಲವರಿಗೆ ಟೈಂ ಹೋಗೋದೇ ಗೊತ್ತಾಗಲ್ಲ.

ಚಿಕ್ಕ ಮಕ್ಕಳಿಂದ ಮುದುಕರವರೆಗೆ ರೀಲ್ಸ್ ಮಾಯೆಗೆ ಮರುಳಾಗಿರುವವರಿಗೆ ಲೆಕ್ಕವಿಲ್ಲ. ಸಿನಿಮಾ, ಕಿರುತೆರೆ ನಟ-ನಟಿಯರು ಕೂಡ ರೀಲ್ಸ್ ಮಾಡುತ್ತಿರುತ್ತಾರೆ. ಸಾಮಾನ್ಯವಾಗಿ ನಟಿಯರೇ ಹೆಚ್ಚು ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ ನಟ ಧ್ರುವ ಸರ್ಜಾ ಮಾಡಿರುವ ಸ್ಪೆಷಲ್ ಇನ್‌ಸ್ಟಾ ರೀಲ್ಸ್ ಸಖತ್ ವೈರಲ್ ಆಗಿದೆ.

ಮಗಳು ರುದ್ರಾಕ್ಷಿ ಜೊತೆ ಧ್ರುವ ಸರ್ಜಾ ರೀಲ್ಸ್ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕ್ಯೂಟ್ ವೀಡಿಯೋಗೆ ಸಖತ್ ಲೈಕ್ಸ್, ಕಾಮೆಂಟ್ಸ್ ಸಿಕ್ಕಿದೆ. ದಿಯಾ ಚಿತ್ರದಲ್ಲಿ ನಾಯಕ ರೋಹಿತ್‌ ನಾಯಕಿ ದಿಯಾಗೆ ಹೇಳುವ ಡೈಲಾಗ್‌ ಝಲಕ್‌ ಇದು. ಮಗಳನ್ನು ನೋಡುತ್ತಾ ಧ್ರುವ ಸರ್ಜಾ ಡೈಲಾಗ್‌ಗೆ ಲಿಪ್‌ಸಿಂಕ್ ಮಾಡಿದ್ದು ಸೊಗಸಾಗಿದೆ. ಧ್ರುವ ಸಿನಿಮಾ ಸೂಪರ್ ಹಿಟ್ ಡೈಲಾಗ್‌ಗಳ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ಸ್ವತಃ ಧ್ರುವ ಮಾಡಿರುವ ರೀಲ್ಸ್ ಸದ್ದು ಮಾಡುತ್ತಿರುವುದು ವಿಶೇಷ.

ಇತ್ತೀಚೆಗೆ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ದಿನವೇ ಧ್ರುವ ಸರ್ಜಾ ತಮ್ಮ ಮಕ್ಕಳ ನಾಮಕರಣ ಮಾಡಿದ್ದರು. ಮಗಳಿಗೆ ರುದ್ರಾಕ್ಷಿ ಡಿ ಸರ್ಜಾ ಎಂದು ಮಗನಿಗೆ ಹಯಗ್ರೀವ ಡಿ ಸರ್ಜಾ ಎಂದು ಹೆಸರಿಟ್ಟಿದ್ದರು. ದೇವರಿಗೆ ಸಂಬಂಧಿಸಿದ ಹೆಸರುಗಳನ್ನೇ ಆಕ್ಷನ್ ಪ್ರಿನ್ಸ್ ಮಕ್ಕಳಿಗೆ ಆಯ್ಕೆ ಮಾಡಿಕೊಂಡಿದ್ದರು. ಶಿವನಿಗೆ ಪ್ರಿಯವಾದದ್ದರು ರುದ್ರಾಕ್ಷಿ. ಇನ್ನು ವಿಷ್ಣುವಿನ ಒಂದು ಅವತಾರದ ಹೆಸರು ಹಯಗ್ರೀವ. ಇನ್ನು ಈ ರೀಲ್ಸ್ ನೋಡಿದ ಮೇಘನಾ ರಾಜ್ ಅಬ್ಬಾ ಇಷ್ಟು ಪುಟ್ಟ ಹುಡುಗಿ ಅದೆಷ್ಟು ಅಭಿನಯ ಅಂತ. ಶಾಕ್ ಆಗಿ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.