ಕಾಟೇರ ನೋಡಿ ಸಿನಿಮಾ ಮಂದಿರದಿಂದ ಕ ಣ್ಣೀರು ಹಾಕುತ್ತಾ ಹೊರಬಂದ ಮೇಘನಾ ರಾಜ್
ಕಾಟೇರ ಸಿನಿಮಾ ವರ್ಷದ ಕೊನೆಯಲ್ಲಿ ಬಂದ್ರೂ ಧೂಳೆಬ್ಬಿಸಿದೆ, ಈಗಾಗಲೇ ಮೊದಲನೇ ದಿನವೇ ಬಾಕ್ಸ್ ಆಫಿಸ್‌ನಲ್ಲಿ ಭರ್ಜರಿ ಕಲೆಕ್ಷನ್ ಕೂಡ ಮಾಡಿದೆ. ಇದರ ಜೊತೆಗೆ ಎಲ್ಲೆಲ್ಲೂ ಕಾಟೇರ ಸಿನಿಮಾಗೆ ಗುಡ್ ರೆಸ್ಪಾನ್ಸ್ ಕೂಡ ವ್ಯಕ್ತವಾಗುತ್ತಿದೆ. ಇದರ ಜೊತೆಗೆ ಕನ್ನಡ ಸೇರಿ, ವಿವಿಧ ಚಿತ್ರರಂಗದವರು ಕಾಟೇರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ನಟಿ ಮೇಘನಾ ರಾಜ್ ಕೂಡ ಕಾಟೇರ ಬಗ್ಗೆ ಮಾತನಾಡಿದ್ದಾರೆ.
ದರ್ಶನ್ ಸರ್ ಕರ್ಮಷಿಯಲ್ ಸಿನಿಮಾಗಳಲ್ಲೂ ಒಂದು ಹೆಜ್ಜೆ ಮೀರಿದ ನಟನೆ ಮಾಡುವಲ್ಲಿ ಎತ್ತಿದ ಕೈ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕಮರ್ಷಿಯಲ್ ಸಿನಿಮಾದಲ್ಲು ಒಂದೊಳ್ಳೆ ಸಂದೇಶ ನೀಡುವ ಜವಾಬ್ದಾರಿಯನ್ನು ಅವರು ತುಂಬಾ ಅಚ್ಚುಕಟ್ಟಾಗಿ ಹಾಗೆಯೇ ತುಂಬಾ ಶ್ರದ್ಧೆಯಿಂದ ನಿರ್ವಹಿಸಿದ್ದಾರೆ. Rockline Productions ಇಂತಹ ಒಂದು ಕಥೆಯನ್ನು ಒಪ್ಪಿಕೊಂಡು ತೆರೆಮೇಲೆ ಮನಮುಟ್ಟುವಂತೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ತರುಣ್ ಅವರ ನಿರ್ದೇಶನ ಹರಿಕೃಷ್ಣ ಅವರ ಸಂಗೀತ ಮತ್ತು background score ಅದ್ಬುತವಾಗಿದೆ. ಸುಧಾಕರ್ ಅವರ ಚಾತುರ್ಯದ ಛಾಯಾಗ್ರಹಣ, ನಮ್ಮ ಕನ್ನಡದ ಆಸ್ತಿ ಮಾಸ್ತಿಯವರ ಹರಿತವಾದ ಸಂಭಾಷಣೆಗಳು, ಕೆ ಎಂ ಪ್ರಕಾಶ್ ರವರ ಸಂಕಲನ, ಜಡೇಶ್ ಹಾಗೂ ಇಡೀ ತಂಡದ ಪರಿಶ್ರಮ ತೆರೆಯ ಮೇಲೆ ಎದ್ದು ಕಾಣಿಸುತ್ತಿದೆ.
ಇನ್ನು ತಾರಾಗಣ ಅನನ್ಯ! ಪ್ರತಿಭಾವಂತರ ಸಮ್ಮಿಲನ. ನಮ್ಮ ಶೃತಿ ಇರಬಹುದು, ಅವಿನಾಶ್ ರವರು, ಅಚ್ಯುತ್ ರವರು ನೆನಪಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ಮಿನುಗುತ್ತಾರೆ. ಅದರಲ್ಲೂ ನಮ್ಮ ಬಿರಾದಾರ್ ಅವರ ಪಾತ್ರ ಬಹಳ ಮೆಚ್ಚುಗೆಯಾಗುವಂತಹದ್ದು ಎಂದು ಮೇಘನಾ ರಾಜ್ ಕೊಂಡಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.