ಮುದ್ದಾದ ಹುಡುಗನ ಜೊತೆ ಮೇಘಮಾ ರಾಜ್, ಇಬ್ಬರ ಒಡನಾಟ ‌ನೋಡಿ ಪೋಷಕರು ಫಿದಾ

 | 
Njo
ಎಂಟು ವರ್ಷಗಳ ಲಾಂಗ್ ಗ್ಯಾಪ್ ನಂತರ ಮೇಘನಾ ರಾಜ್ ಸರ್ಜಾ ಮತ್ತೆ ಮಾಲಿವುಡ್​ಗೆ ಮರಳಲು ಸಜ್ಜಾಗಿದ್ದಾರೆ. ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮದುವೆಯಾಗಿ ತಾಯಿಯಾದ ನಟಿ ಮಲಯಾಳಂನಲ್ಲಿ 2016 ರಲ್ಲಿ ತಮ್ಮ ಕೊನೆಯ ಪ್ರಾಜೆಕ್ಟ್​ನಲ್ಲಿ ಕಾಣಿಸಿಕೊಂಡರು.ಪ್ರಸ್ತುತ ನಟಿ ತಮ್ಮ ಮುಂದಿನ ಯೋಜನೆಯ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. 
ಇತ್ತೀಚೆಗೆ, ನಟಿ ತಮ್ಮ ತಾಯ್ತನದ ಕರ್ತವ್ಯಗಳ ಜೊತೆಗೆ ಕೆಲಸವನ್ನು ಹೇಗೆ ನಿರ್ವಹಿಸುತ್ತಿದ್ದಾರೆ ಎಂಬುದನ್ನು ವಿವರಿಸುತ್ತಾ ತಮ್ಮ ಕಮ್ ಬ್ಯಾಕ್ ಬಗ್ಗೆ ಮಾತನಾಡಿದರು. ಸಂದರ್ಶನ ಒಂದರಲ್ಲಿ ಮಾತನಾಡಿದ ಮೇಘನಾ ರಾಜ್ ಅವರು ಸುರೇಶ್ ಗೋಪಿ ನಾಯಕನಾಗಿ ನಟಿಸಿರುವ ಮುಂಬರುವ ಪೊಲಿಟಿಕಲ್ ಥ್ರಿಲ್ಲಿಂಗ್ ಸಿನಿಮಾದ ಶೂಟಿಂಗ್ ಮಾಡಿದ್ದು ವಾಪಸ್ ಮನೆಗೆ ಹಿಂತಿರುಗಿದಂತೆ ಭಾಸವಾಯಿತು ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ಅವರು ತಮ್ಮ ಕಮ್ ಬ್ಯಾಕ್ ಅನಿವಾರ್ಯ ನಡೆ ಎಂದು ಹೇಳಿದ್ದಾರೆ. ಸೆಟ್‌ಗೆ ಕಾಲಿಟ್ಟ ಕ್ಷಣದಲ್ಲಿ ತಮಗೆ ದೊರೆತ ಆತ್ಮೀಯ ಸ್ವಾಗತಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಅನಿವಾರ್ಯವಾಗಿ ಇದು ಸಂಭವಿಸಿದೆ ಎಂದಿದ್ದಾರೆ ನಟಿ.ನಾನು ನನ್ನ ಹೊಸ ಚಿತ್ರದ ಸೆಟ್‌ಗೆ ಮರಳಿ ಬಂದಿದ್ದೇನೆ. ಈ ಚಿತ್ರದಲ್ಲಿ ನಾನು ಮೊದಲು ಕೆಲಸ ಮಾಡಿದ ನಟ ಇಂದ್ರಜಿತ್ ಸುಕುಮಾರನ್ ಕೂಡ ನಟಿಸಿದ್ದಾರೆ.
 ಹಲವು ವರ್ಷಗಳ ನಂತರ ನಾನು ಸೆಟ್‌ಗೆ ಕಾಲಿಟ್ಟಾಗ, ಎಲ್ಲರೂ ನಂಬಲಾಗದಷ್ಟು ಆತ್ಮೀಯತೆ ಮತ್ತು ಪ್ರೀತಿಯಿಂದ ಸ್ವಾಗತಿಸಿದರು. ಆದ್ದರಿಂದ, ನಿಜವಾಗಿಯೂ ಮನೆಗೆ ಬಂದಂತೆ ಭಾಸವಾಯಿತು ಎಂದು ಮೇಘನಾ ಹೇಳಿದ್ದಾರೆ.ಮೇಘನಾ ಅವರು ಸಿನಿಮಾಗೆ ಮತ್ತೆ ಬಂದರೂ ಕೂಡಾ ಅವರ ಕುಟುಂಬ, ವಿಶೇಷವಾಗಿ ಅವರ ಮಗ, ಯಾವಾಗಲೂ ಅವರ ಪ್ರಮುಖ ಆದ್ಯತೆಯಾಗಿರುತ್ತಾರೆ ಎಂದು ಹೇಳಿದರು. ನಟಿ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಬ್ಯಾಲೆನ್ಸ್ ಮಾಡಲು ಕಲಿಯುತ್ತಿರುವುದಾಗಿ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು‌ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.