ಇದು ಮೋಸ ಎನ್ನುತ್ತ ಮನೆಯಿಂದ ಹೊರಬಂದ ಮೈಕಲ್, ಸುದೀಪ್ ಮುಂದೆ ಕ ಣ್ಣೀರು

 | 
ರ್

ಬಿಗ್ ಬಾಸ್' ಕನ್ನಡ 10 ಶೋ ಆರಂಭವಾಗಿ ಈಗಾಗಲೇ 13 ವಾರಗಳನ್ನು ಪೂರೈಸಿದೆ. ಅಂದಹಾಗೆ, ಈ ವಾರ ಕಾರ್ತಿಕ್ ಮಹೇಶ್‌, ವರ್ತೂರು ಸಂತೋಷ್, ಮೈಕಲ್, ತುಕಾಲಿ ಸಂತು, ಡ್ರೋನ್ ಪ್ರತಾಪ್ ನಾಮಿನೇಟ್ ಆಗಿದ್ದರು. ಅಂತಿಮವಾಗಿ ಈ ಐವರಲ್ಲಿ ಮೈಕಲ್ ಅಜಯ್ ಅವರು ತಮ್ಮ ಆಟವನ್ನು ಅಂತ್ಯಗೊಳಿಸಿದ್ದಾರೆ. ಹೌದು, ವೀಕ್ಷಕರಿಂದ ಕಡಿಮೆ ವೋಟ್ ಪಡೆದುಕೊಂಡ ಕಾರಣ, ಮೈಕಲ್ ಅವರನ್ನು ಶೋನಿಂದ ಎಲಿಮಿನೇಟ್ ಮಾಡಲಾಯಿತು.

ಕಾರ್ತಿಕ್, ವರ್ತೂರು ಸಂತೋಷ್, ಮೈಕಲ್, ತುಕಾಲಿ ಸಂತು, ಡ್ರೋನ್ ಪ್ರತಾಪ್ ಈ ಐವರಲ್ಲಿ ಶನಿವಾರದ ಸಂಚಿಕೆಯಲ್ಲಿ ಕಾರ್ತಿಕ್ ಸೇಫ್ ಆಗಿದ್ದರು. ಭಾನುವಾರದ ಸಂಚಿಕೆಯಲ್ಲಿ ಮೊದಲು ಡ್ರೋನ್ ಪ್ರತಾಪ್ ಸೇಫ್ ಆದರು. ಆನಂತರ ತುಕಾಲಿ ಸಂತು ಸೇಫ್ ಆದರು. ಕೊನೆಗೆ ವರ್ತೂರು ಸಂತೋಷ್‌ & ಮೈಕಲ್ ಮಾತ್ರ ಉಳಿದುಕೊಂಡರು. ಇವರಿಬ್ಬರಲ್ಲಿ ಅಂತಿಮವಾಗಿ ಮೈಕಲ್‌ ಕಡಿಮೆ ವೋಟ್ ಪಡೆದ ಕಾರಣ, ಅವರು ಶೋನಿಂದ ಎಲಿಮಿನೇಟ್ ಆದರು.

ಬಿಗ್ ಬಾಸ್' ಶೋನಲ್ಲಿ ಆರಂಭದಿಂದಲೂ ಮೈಕಲ್‌ಗೆ ಹೆಚ್ಚು ಪ್ರೀತಿ ಸಿಗಲು ಕಾರಣವಾಗಿದ್ದು, ಅವರ ಭಾಷೆ. ಹೌದು, ವಿದೇಶಿ ಪ್ರಜೆ ಆಗಿರುವ ಮೈಕಲ್, ಬಿಗ್ ಬಾಸ್ ಮನೆಯೊಳಗೆ ಸಾಧ್ಯವಾದಷ್ಟು ಕನ್ನಡ ಮಾತಾಡಲು ಪ್ರಯತ್ನಿಸುತ್ತಿದ್ದರು. ಹಾಗಾಗಿ, ಅವರನ್ನು ಕನ್ನಡದ ಕಂದ ಅಂತಲೇ ಕರೆಯುತ್ತಿದ್ದರು. ಆದರೆ ಅದ್ಯಾಕೋ ದಿನ ಕಳೆದಂತೆ ಅವರ ವರ್ತನೆ ಬದಲಾಗಿತ್ತು.

ಈಚೆಗೆ ಅವರ ಮಾತುಗಳಲ್ಲಿ ಧಿಮಾಕು ಕಾಣಿಸುತ್ತಿತ್ತು. ಬಿಗ್ ಬಾಸ್‌ ಶೋ ಹಾಗೂ ಕ್ಯಾಪ್ಟನ್‌ಗೂ ಗೌರವ ಕೊಡುತ್ತಿರುಲಿಲ್ಲ, ಡೋಂಟ್‌ ಕೇರ್ ಮನೋಭಾವವನ್ನು ಹೆಚ್ಚು ಬೆಳಸಿಕೊಂಡಿದ್ದರು. ಅಲ್ಲದೆ, ಟಾಸ್ಕ್‌ನಲ್ಲಿ ಡಲ್ ಆಗಿದ್ದ ಅವರಿಗೆ ಈ ವಾರ ಕಳಪೆ ಪಟ್ಟ ಬೇರೆ ಸಿಕ್ಕಿತ್ತು. ಇನ್ನು ಎಲಿಮಿನೇಟ್ ಆಗಿ ಮನೆಯಿಂದ ಆಚೆ ಹೋಗುವಾಗ ಮೈಕಲ್‌ಗೆ ಬಿಗ್ ಬಾಸ್ ಒಂದು ಅಧಿಕಾರ ನೀಡಿದರು.

 ಮುಂದಿನ ವಾರ ಟಾಸ್ಕ್‌ಗಳಲ್ಲಿ ಒಬ್ಬರಿಗೆ ಅಡ್ವಾಂಟೇಜ್‌ ನೀಡಬಹುದು ಎಂದು ಹೇಳಿದರು. ಅದಕ್ಕೆ ಮೈಕಲ್ ಅವರು ವಿನಯ್ ಹೆಸರನ್ನು ತೆಗೆದುಕೊಂಡರು. ಇನ್ನೊಮ್ಮೆ ವಿನಯ್ ಕ್ಯಾಪ್ಟನ್ ಆಗಬೇಕು ಎಂಬ ಆಸೆ ನನಗೆ ಇದೆ. ಅವರು ನನಗೆ ಈ ಹಿಂದೆ ಸಹಾಯ ಮಾಡಿದ್ದರು. ಈ ಮೂಲಕ ಅದನ್ನು ನಾನು ವಾಪಸ್ ನೀಡಿದ್ದೇನೆ ಎಂದು ಹೇಳಿ ಮೈಕಲ್ ಬಿಗ್ಬಾಸ್ ಮನೆಯಿಂದ ಹೊರ ನಡೆದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.