ಬಿಗ್ ಬಾಸ್ ಮನೆಯಿಂದ ಮೈಕಲ್ ಔಟ್, ಇಡೀ ಮನೆಯಲ್ಲಿ ದುಃಖದ ವಾತಾವರಣ

 | 
ರಾ

ಬಿಗ್​ಬಾಸ್​ ಸೀಸನ್​ 10ರಿಂದ ಅಚ್ಚರಿಯ ರೀತಿಯಲ್ಲಿ ಇಬ್ಬರು ಸ್ಪರ್ಧಿಗಳು ಆಚೆ ಬಂದಿದ್ದಾರೆ. ಬಿಗ್​ಬಾಸ್​​ ಮನೆಗೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದ ಮೈಕಲ್​ ಹಾಗೂ ಅವಿನಾಶ್​ ಶೆಟ್ಟಿ ಔಟ್​ ಆಗಿದ್ದಾರೆ. ವೈಲ್ಡ್ ಕಾರ್ಡ್ ರೀತಿಯಲ್ಲಿ ಎಂಟ್ರಿ ಕೊಟ್ಟಿದ್ದ ಅವಿನಾಶ್​​ ಅವರು ನಾಲ್ಕನೇ ವಾರಕ್ಕೆ ಆಚೆ ಬಂದಿದ್ದಾರೆ.

ಕನ್ನಡದ ಬಿಗ್​ಬಾಸ್​ ಸೀಸನ್​ 10ರಲ್ಲಿ 11ನೇ ವಾರದಿಂದ ಇಬ್ಬರು ಸ್ಪರ್ಧಿ ಆಚೆ ಬಂದಿದ್ದಾರೆ. ಈ ಬಾರಿ ಬಿಗ್​​ಬಾಸ್​​ ಮನೆಯಿಂದ ಆರು ಸ್ಪರ್ಧಿಗಳು ನಾಮಿನೇಟ್​ ಆಗಿದ್ದರು. ಬಿಗ್​ಬಾಸ್​ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದ ಸ್ಪರ್ಧಿಗಳೆಂದರೆ ಸಂಗೀತಾ, ವರ್ತೂರು ಸಂತೊಷ್, ಅವಿನಾಶ್​, ಸಿರಿ, ಪ್ರತಾಪ್​ ಹಾಗೂ ಮೈಕಲ್.

ಈ ಆರು ಜನರಲ್ಲಿ ಅವಿನಾಶ್​ ಹಾಗೂ ಮೈಕಲ್ ಆಚೆ ಬಂದಿದ್ದಾರೆ. ಇನ್ನು, ಈ ವಾರ ಡಬಲ್​ ಎಲಿಮಿನೇಷನ್​ ಇರುತ್ತೆ ಎಂದು ಯಾರು ಉಹಿಸಿರಲಿಲ್ಲ. ಆದರೆ ಬಿಗ್​ಬಾಸ್ ಮನೆಯಿಂದ ಇಬ್ಬರು ಆಚೆ ಹೋಗಿದ್ದನ್ನು ಕಂಡು ಉಳಿದ ಸ್ಪರ್ಧಿಗಳು ಶಾಕ್​ ಆಗಿದ್ದಾರೆ. ಮತ್ತೆ ಮೈಕಲ್​ ಬರಬಹುದು ಎಂದು ಕಾಯುತ್ತಿದ್ದರು.

ಆದರೆ, ಬಿಗ್ ಬಾಸ್ ಇಬ್ಬರನ್ನು ಗೇಟಿನಿಂದ ಹೊರಗೆ ಕರೆಯಿತು. ಭಾನುವಾರದ ಎಲಿಮಿನೇಷನ್ ಸಂಚಿಕೆಯಲ್ಲಿ ಹೆಚ್ಚು ಗಮನ ಸೆಳೆದಿದ್ದು ಮಾತ್ರ ಕಾರಿನ ಪ್ರಸಂಗ. ಎಲಿಮಿನೇಷನ್ ಬಗೆಗಿನ ಬಿಗ್ ಬಾಸ್ ತೀರ್ಪಿಗಾಗಿ ಕಾಯುತ್ತಿದ್ದ ಇಬ್ಬರು ಕೂಡ ಒಬ್ಬರಿಗೊಬ್ಬರು ಆಲ್ ದಿ ಬೆಸ್ಟ್ ಹೇಳಿದ್ದರು. ಆದರೆ, ಬಿಗ್ ಬಾಸ್ ಮನೆಯೊಳಗೆ ಬಂದಿದ್ದ ಎರಡು ಕಾರುಗಳಲ್ಲಿ ಒಬ್ಬೊಬ್ಬರನ್ನು ಕುರಿಸಿಕೊಂಡು ಅಲ್ಲೇ ಎರಡು ರೌಂಡ್ ಹಾಕಿಸಿ, ಹಾಗೆ ಮನೆಯಿಂದ ಹೊರಗೆ ಕಡೆದುಕೊಂಡು ಹೋಗಲಾಗಿದೆ.

ಯಾರು ಎಲಿಮಿನೇಟ್ ಆಗಿದ್ದಾರೆ ಎಂದು ಘೋಷಿಸದೆ ಇಬ್ಬರನ್ನು ಹೊರಗೆ ಕರೆದುಕೊಂಡು ಹೋದ ಬಗ್ಗೆ ಮನೆಯ ಇತರ ಸ್ಪರ್ಧಿಗಳು ತಮ್ಮದೇ ಊಹಾಪೋಹಗಳಲ್ಲಿ ಮುಳುಗಿದ್ದಾರೆ. ಅವರು ವಾಪಸ್ ಬರುತ್ತಾರೆ, ಇಲ್ಲ ಮೈಕಲ್ ವಾಪಸ್ ಬರುತ್ತಾರೆ... ಇಬ್ಬರು ಡಬಲ್ ಎಲಿಮಿನೇಷನ್ ಆಗಿದ್ದಾರೆ.. ಹೀಗೆ ಹಲವು ಮಾತುಗಳನ್ನು ಆಡುತ್ತಿದ್ದಾರೆ. ಆದರೆ, ಬಿಗ್ ಬಾಸ್ ಯಾವುದೇ ಸ್ಪಷ್ಟನೆ ನೀಡಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ