ವಿನಯ್ ಅವತಾರಕ್ಕೆ ಮೈಕೆಲ್ ಶಾ.ಕ್, ಬಿಗ್ ಬಾಸ್ ಮನೆಯಲ್ಲಿ ಏನಾಗುತ್ತಿದೆ ಗೊತ್ತಾ

 | 
ಕಪಪ

ಬಿಗ್ ಬಾಸ್ ಕನ್ನಡ ಸೀಸನ್ 10 ಹಿಂದಿನ 9 ಸೀಸನ್‌ಗಿಂತಲೂ ಸ್ವಲ್ಪ ಬೋಲ್ಡ್ ಆಗಿದೆ. ಹ್ಯಾಪಿ ಬಿಗ್ ಬಾಸ್ ಅಂತ ಶುರುವಾಗಿದ್ದ ಈ ಬಾರಿಯ ಸೀಸನ್ ನಾಲ್ಕನೇ ವಾರಕ್ಕೆ ರಣರಂಗವಾಗುತ್ತಿದೆ. ಅದರಲ್ಲೂ ವಿನಯ್ ಹಾಗೂ ಸಂಗೀತಾ ಶೃಂಗೇರಿ ನಡುವೆ ಕಿತ್ತಾಟ ಜೋರಾಗಿಯೇ ನಡೆಯುತ್ತಿದೆ.

ಬಿಗ್ ಬಾಸ್ ಮನೆಗೆ ಬಂದ ಪ್ರತಿಯೊಬ್ಬ ಸ್ಪರ್ಧಿಗೂ ಕ್ಯಾಪ್ಟನ್ ಆಗೋದು ಹೆಮ್ಮೆಯ ವಿಷಯ. ಅದಕ್ಕಾಗಿಯೇ ಹರಸಾಹಸ ಮಾಡುತ್ತಲೇ ಇರುತ್ತಾರೆ. ಬಿಗ್ ಬಾಸ್‌ನ ಪ್ರಬಲ ಸ್ಪರ್ಧಿ ಎನಿಸಿಕೊಂಡಿರುವ ವಿನಯ್ ನಾಲ್ಕು ವಾರಗಳಿಂದ ಕ್ಯಾಪ್ಟನ್ ಆಗುವುದಕ್ಕೆ ಪ್ರಯತ್ನ ಪಡುತ್ತಲೇ ಇದ್ದರು. ಕೊನೆಗೂ ಅವರ ಆಸೆ ಈಡೇರಿದೆ.

ಪ್ರಬಲ ಹೋರಾಟದ ಬಳಿಕ ವಿನಯ್ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಮನೆಗೆ ಕ್ಯಾಪ್ಟನ್ ಆಗಲೇಬೇಕು ಅಂತ ಪ್ರಯತ್ನ ಪಡುತ್ತಲೇ ಇದ್ದ ವಿನಯ್‌ಗೆ ಕೊನೆಗೂ ಆ ಅವಕಾಶ ಕೂಡಿ ಬಂದಿದೆ. ವಿನಯ್ ಬಿಗ್ ಬಾಸ್‌ ಮನೆಯ ಕ್ಯಾಪ್ಟನ್ ಅಂತ ಅನೌನ್ಸ್ ಮಾಡುತ್ತಿದ್ದಂತೆ ಮನೆಯ ಸದಸ್ಯರು ಮೌನಕ್ಕೆ ಜಾರಿದ್ದಾರೆ. ವಿನಯ್‌ಗೆ ಸಿಕ್ಕಿರೋ ಯಶಸ್ಸು ಇಡೀ ಮನೆಯ ಸದಸ್ಯರ ಲೆಕ್ಕಾಚಾರವನ್ನೇ ಬದಲಿಸುವ ಹಾಗಿದೆ.

ಹಳ್ಳಿ ಟಾಸ್ಕ್ ಕೊನೆಯಲ್ಲಿ ವಿನಯ್ ಹಾಗೂ ತುಕಾಲಿ ಸಂತೋಷ್ ಇಬ್ಬರೇ ಉಳಿದುಕೊಂಡಿದ್ದರು. ಇಲ್ಲಿ ತುಕಾಲಿ ಸಂತೋಷ್‌ಗೆ ಕ್ಯಾಪ್ಟನ್ಸಿ ರೇಸ್‌ನಿಂದ ವಿನಯ್‌ರನ್ನು ಹೊರಹಾಕುವ ಅವಕಾಶವಿತ್ತು. ಆದರೆ, ಅದನ್ನು ತುಕಾಲಿ ಸಂತೋಷ್ ಬಳಸಿಕೊಳ್ಳದೆ ಸಿರಿಯನ್ನು ಹೊರಗೆ ಹಾಕಿದ್ದರು. ಈ ಕಾರಣಕ್ಕೆ ತುಕಾಲಿ ಸಂತೋಷ್ ಕ್ಯಾಪ್ಟನ್ಸಿ ರೇಸ್‌ನಿಂದ ಹೊರಗೆ ಉಳಿಯಬೇಕಾದ ಅನಿವಾರ್ಯತೆ ಎದುರಾಗಿತ್ತು.

ಇನ್ನು ವಿನಯ್ ಸ್ಪರ್ಧೆಯೊಂದಕ್ಕೆ ತನ್ನ ಕಡೆಯಿಂದ ಇಬ್ಬರೂ ಹುಡುಗಿಯರು ಬರ್ತಾರೆ ಎಂದಿದ್ದರು ಅದನ್ನು ಕ್ಯಾರೇ ಮಾಡದೆ ಸಂಗೀತಾ ಆಟ ಆಡಿದ್ದರು ಇನ್ನು ಈ ಕುರಿತಾಗಿ ವಿನಯ್ ಮಾಖೈಲ್ ಬಳಿ ಹೇಳಿಕೊಂಡು ಸಂಗೀತಾ ಬಗ್ಗೆ ಆಡಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.