ಮೊಬೈ ಬಳಕೆ ತುಂಬಾ ಅಪಾಯ, ನನ್ನ ಕಿರು ಬೆರಳು ಸವೆದು ಹೋಗಿದೆ; ಮಾಸ್ಟರ್ ಆನಂದ್
Apr 10, 2025, 10:27 IST
|

ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯೋಮಾನದವರಲ್ಲೂ ಸಾಮಾನ್ಯವಾಗಿರುವ ಚಟ ಎಂದರೆ, ಅದು ಸೆಲ್ ಫೋನ್ ಬಳಕೆ. ಇದನ್ನು ಬಳಸುತ್ತಾ ಕುಳಿತುಕೊಂಡರೆ ಸಮಯ ಕಳೆಯುವುದೇ ತಿಳಿಯುವುದಿಲ್ಲ. ಈ ಸೆಲ್ ಫೋನ್ಗಳ ಅತಿಯಾದ ಬಳಕೆ ಚಟವಾಗಿದ್ದು, ಇದು ಅನೇಕ ಆರೋಗ್ಯ ಸಮಸ್ಯೆ ಮತ್ತು ರೋಗಕ್ಕೆ ಕೂಡ ಕಾರಣವಾಗುತ್ತಿದೆ. ಈ ಬಗ್ಗೆ ವೈದ್ಯರು ಕೂಡ ಕಾಳಜಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಪ್ರಜ್ಞಾಪೂರ್ವಕವಾಗಿ ಇದರ ಬಳಕೆಯಿಂದ ದೂರಾಗುವುದು ಅಗತ್ಯವಾಗಿದೆ. ಹೌದು ಈ ಕುರಿತಾಗಿ ಮಾಸ್ಟರ್ ಆನಂದ್ ಸಿಂಪಲ್ ಟಿಪ್ ಹೇಳಿದ್ದಾರೆ.
ಕಿರುಬೆರಳು ಮೊಬೈಲ್‌ನ ಭಾರವನ್ನು ಹೊತ್ತಿರುತ್ತದೆ. ತೋರುಬೆರಳು, ಉಂಗುರದ ಬೆರಳು, ಮಧ್ಯದ ಬೆರಳುಗಳು ಮೊಬೈಲ್‌ನ ಬೆನ್ನನ್ನು ಹಿಡಿದುಕೊಂಡಿರುತ್ತದೆ. ಹೆಬ್ಬೆರಳು ಮೊಬೈಲ್ ಸ್ಕ್ರೀನ್ ಮೇಲೆ ಓಡಾಡುತ್ತಿರುತ್ತದೆ. ಬೆಡ್ ಮೇಲೆ ಮಲಗಿಯೋ, ಚೇರ್ ಮೇಲೆ ಕೂಳಿತೋ, ಬಸ್‌ನಲ್ಲಿ, ಕಾರ್‌ನಲ್ಲಿ, ಅಲ್ಲಿ ಇಲ್ಲಿ ಅಂತ ಎಲ್ಲಾ ಕಡೆ ಈ ರೀತಿ ಮೊಬೈಲ್ ಹಿಡಿದುಕೊಳ್ಳುತ್ತೇವೆ. ಮೊಬೈಲ್ ಸ್ಕ್ರೀನ್ ಕಾಣಬೇಕು ಎನ್ನುವ ಕಾರಣಕ್ಕೆ ಮುಂಗೈಯನ್ನು ಸ್ವಲ್ಪ ಬಾಗಿಸಿ ನಮ್ಮ ಮುಖಕ್ಕೆ ಹಿಡಿದುಕೊಂಡಿರುತ್ತೇವೆ ಅಲ್ವಾ? ಹೀಗೆ ಮೊಬೈಲ್ ಹಿಡಿದುಕೊಳ್ಳುವುದರಿಂದ ಕೆಲವು ಗಂಭೀರ ಆರೋಗ್ಯ ಸಮಸ್ಯೆ ಆಗುತ್ತದೆ ಎನ್ನುತ್ತದೆ ವೈದ್ಯಲೋಕ.
ಮೊಬೈಲ್ ಹಿಡಿದುಕೊಂಡಾಗ ಎಲ್ಲಾ ಭಾರ ಕಿರು ಬೆರಳಿನ ಮೇಲೆ ಬೀಳುತ್ತದೆ. ಹಾಗಾಗಿ ದಿನದಿಂದ ದಿನಕ್ಕೆ ಬೆರಳಿನ ಮೂಳೆ ಸವೆಯುತ್ತದೆ.ಮೊಬೈಲ್ ಹಿಡಿದುಕೊಂಡ ಸಂದರ್ಭದಲ್ಲಿ ಕಿರುಬೆರಳು ಮತ್ತು ಹೆಬ್ಬೆರಳುಗಳು ಹೆಚ್ಚು ನೋಯುತ್ತದೆ. ಈ ಅನುಭವ ಎಲ್ಲರಿಗೂ ಆಗಿರಲೂ ಬಹುದು. ಇದಕ್ಕೆ ಕಾರಣ, ಮೊಬೈಲ್ ಹಿಡಿದುಕೊಂಡಾಗ ಅದರ ಭಾರ ಈ ಬೆರಳುಗಳ ಮೇಲೆ ಹೆಚ್ಚು ಬೀಳುತ್ತದೆ. ಆದ್ದರಿಂದ ಬೆರಳುಗಳ ಸೆಳೆತ ಅಥವಾ ಉರಿ ಕೂಡ ಆಗಬಹುದು.
ಮೊಬೈಲ್ ಭಾರವನ್ನು ಬೆರಳುಗಳು ಹೊತ್ತು, ಮೊಬೈಲ್‌ನ ಸ್ಕ್ರೀನ್ ಕಾಣುವುದಕ್ಕೆ ಮಣಿಕಟ್ಟನ್ನು ಕೆಳಗೆ ಮಾಡಿ ನೋಡುವುದು ಅಲ್ನರ್ ನರಕ್ಕೆ ಹೆಚ್ಚು ಒತ್ತಡವನ್ನು ನೀಡುತ್ತದೆ. ಅಲ್ನರ್ ನರವು ಕೈಯ ಮೂರು ಮುಖ್ಯ ನರಗಳಲ್ಲಿ ಒಂದಾಗಿದೆ.ಮಣಿಕಟ್ಟಿನ ನೋವು ಅಥವಾ ಕೈ ಸಂಬಂಧಿ ಸಮಸ್ಯೆಗಳು ಮತ್ತು ಹೆಚ್ಚಾದ ಮೊಬೈಲ್ ಬಳಕೆಯ ಕುರಿತು ಹಾಂಗ್‌ಕಾಂಗ್‌ನಲ್ಲಿ ಅಧ್ಯಯನ ನಡೆದಿದೆ. ಅದರ ಪ್ರಕಾರ, ಕೈಯಲ್ಲಿ ಬಳಸುವ ಎಲೆಕ್ಟ್ರಾನಿಕ್ ವಸ್ತುವಿನ ಹೆಚ್ಚು ಬಳಕೆಯಿಂದ ಪಿಂಕಿ ಫಿಂಗರ್ ಕಾಡಬಹುದು ನೋವು ಆಗ್ಬಹುದು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.