ಆಳಸುಮುದ್ರದಲ್ಲಿ ಮುಳುಗಿರುವ ಶ್ರೀಕೃಷ್ಣನ ದ್ವಾರಕವನ್ನು ನೋಡಿ‌ ಬಂದ ಮೋದಿಜಿ, ಇದು 5000 ವರ್ಷದಷ್ಟು ಹಳೆಯದು

 | 
್ೂ೫

ಪ್ರಧಾನಿ ನರೇಂದ್ರ ಮೋದಿ  ಗುಜರಾತ್  ಪ್ರವಾಸದಲ್ಲಿದ್ದಾರೆ. ಭಾನುವಾರ ಗುಜರಾತ್‌ನ ಬೆಟ್ ದ್ವಾರಕಾ ಮತ್ತು ಓಖಾ ಮುಖ್ಯಭೂಮಿಯನ್ನು ಸಂಪರ್ಕಿಸುವ ಸುಮಾರು ಎರಡೂವರೆ ಕಿಲೋಮೀಟರ್ ಉದ್ದದ ಕೇಬಲ್​ ಸೇತುವೆಯನ್ನು ಪ್ರಧಾನಿ ಉದ್ಘಾಟಿಸಿದರು. ಇದಕ್ಕೂ ಮುನ್ನ ದ್ವಾರಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಅರ್ಚಕರು ಪ್ರಧಾನಿಯವರಿಗೆ ಆತ್ಮೀಯವಾಗಿ ಸ್ವಾಗತಿಸಿ ತೀರ್ಥ ಪ್ರಸಾದ ನೀಡಿದರು.

ದ್ವಾರಕಾ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೊದಲು, ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಮುಳುಗಿರುವ ಪ್ರಾಚೀನ ನಗರವಾದ ದ್ವಾರಕಾ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಮೋದಿ ತಮ್ಮೊಂದಿಗೆ ನವಿಲು ಗರಿಯನ್ನು ತೆಗೆದುಕೊಂಡು ಹೋಗಿ ಕೃಷ್ಣನಿಗೆ ಅರ್ಪಿಸಲು ಸಮುದ್ರಕ್ಕೆ ತೆಗೆದುಕೊಂಡು ಹೋಗಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಮೋದಿ ಎಕ್ಸ್ ಹಳೆಯ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಪ್ರಾರ್ಥನೆ ಸಲ್ಲಿಸಿದ ನಂತರ ಟ್ವೀಟ್ ಮಾಡಿರುವ ಅವರು, ಮುಳುಗಿದ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಮಾಡುವುದು ಅತ್ಯಂತ ದೈವಿಕ ಅನುಭವ ನೀಡುತ್ತದೆ. ಈ ಅನುಭವವು ಭಾರತದ ಆಧ್ಯಾತ್ಮಿಕ ಮತ್ತು ಐತಿಹಾಸಿಕ ಯುಗದೊಂದಿಗೆ ನನಗೆ ಅಪರೂಪದ ಮತ್ತು ಆಳವಾದ ಸಂಪರ್ಕವನ್ನು ನೀಡಿದೆ ಶ್ರೀಕೃಷ್ಣ ನಮ್ಮೆಲ್ಲರನ್ನು ಆಶೀರ್ವದಿಸಲಿ ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಮೋದಿ ದ್ವಾಕಾದೀಶ ದೇವಾಲಯಕ್ಕೆ ಭೇಟಿ ನೀಡಿದ್ದರು. ದೇವಾಲಯ ಆಡಳಿತ ಮಂಡಳಿಯಿಂದ ಶ್ರೀಕೃಷ್ಣನ ಮೂರ್ತಿಯನ್ನ ಉಡುಗೊರೆಯಾಗಿ ಸ್ವೀಕರಿಸಿದರು. 

ಶ್ರೀಕೃಷ್ಣನ ಕಾರ್ಯಕ್ಷೇತ್ರವಾದ ದ್ವಾರಕಾಧಾಮಕ್ಕೆ ಗೌರವಪೂರ್ವಕವಾಗಿ ನಮಿಸುತ್ತೇನೆ. ದೇವಭೂಮಿ ದ್ವಾರಕಾದಲ್ಲಿ ಶ್ರೀಕೃಷ್ಣ ದ್ವಾರಕಾಧೀಶನ ರೂಪದಲ್ಲಿರುತ್ತಾನೆ. ಇಲ್ಲಿ ಏನೇ ನಡೆದರೂ ದ್ವಾರಕಾಧೀಶನ ಇಚ್ಛೆಯಂತೆಯೇ ನಡೆಯುತ್ತದೆ. ನಾನು ಸಮುದ್ರದಾಳಕ್ಕೆ ಹೋಗಿ ಪ್ರಾಚೀನ ದ್ವಾರಕವನ್ನು ನೋಡಿದೆ. ದ್ವಾರಕಾ ಸಾಗರದಲ್ಲಿ ಮುಳುಗಿರುವ ಬಗ್ಗೆ ಪುರಾತತ್ವಶಾಸ್ತ್ರಜ್ಞರು ಸಾಕಷ್ಟು ಬರೆದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.