ತಕ್ಷಣ ಬಂಪರ್ ಆಫರ್ ಕೊಟ್ಟ ಮೋದಿಜಿ, ಗ್ಯಾಸ್ ಸಿಲಿಂಡರ್ ಬೆಲೆ ಪಾತಾಳಕ್ಕೆ

 | 
Hs

ಇಂದು ಹಿಂದುಗಳ ಪಾಲಿನ ಮಹತ್ವದ ಹಬ್ಬವಾದ ರಕ್ಷಾ ಹಬ್ಬ ಈ ಹಬ್ಬಕ್ಕೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ನೀಡುತ್ತಿದೆ. ಆಗಸ್ಟ್ 30 ರಿಂದ 14 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮೂಲಗಳ ಪ್ರಕಾರ ಆಗಸ್ಟ್ 30 ರಿಂದ 200 ರೂಪಾಯಿ ಇಳಿಕೆಯಾಗಲಿದೆ. ಕೇಂದ್ರ ಕ್ಯಾಬಿನೆಟ್ ಸಿಲಿಂಡರ್ ಇಳಿಕೆಗೆ ಅನುಮತಿ ನೀಡಿದೆ. 

ನಾಳೆಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. ಸಿಎನ್‌ಬಿಸಿಟಿ ವರದಿ ಪ್ರಕಾರ ಅಡುಗೆ ಅನಿಲ ಬೆಲೆಯಲ್ಲಿ 200 ರೂಪಾಯಿ ಇಳಿಕೆಯಾಗಲಿದೆ ಎಂದಿದೆ. ಸದ್ಯ 14.2 ಕೆಜಿ ಅಡುಗೆ ಗ್ಯಾಸ್ ಸಿಲಿಂಡರ್ ಬೆಲೆ ಕರ್ನಾಟಕದಲ್ಲಿ 1,105.50 ರೂಪಾಯಿ ಇದ್ದರೆ, ದೆಹಲಿಯಲ್ಲಿ 1053 ಹಾಗೂ ಮುಂಬೈನಲ್ಲಿ 1052.50 ರೂಪಾಯಿ, ಚೆನ್ನೈನಲ್ಲಿ 1079 ರೂಪಾಯಿ ದರವಿದೆ. ಈ ಬೆಲೆಯಲ್ಲಿ 200 ರೂಪಾಯಿ ಕಡಿತಗೊಳ್ಳಲಿದೆ ಎಂದು ವರದಿಯಾಗಿದೆ. 

ಜುಲೈ ತಿಂಗಳಲ್ಲಿ 50 ರೂಪಾಯಿ ಏರಿಕೆ ಕಂಡಿದ್ದರೆ, ಮೇ ತಿಂಗಳಲ್ಲಿ 2 ಬಾರಿ ದರ ಏರಿಕೆಯಾಗಿತ್ತು. ಚತ್ತೀಸಘಡ, ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ ಹಾಗೂ ಮಿಜೋರಾಂನ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಮಾಡಲಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ.
ಸಾಮಾನ್ಯವಾಗಿ ಅಡುಗೆ ಅನಿಲ ಹಾಗೂ ವಾಣಿಜ್ಯ ಗ್ಯಾಸ್ ಬೆಲೆ ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕರಣೆಗೊಳ್ಳಲಿದೆ. 

ಆಯಿಲ್ ಮಾರ್ಕೆಟಿಂಗ್ ಕಂಪನಿಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ ಆಧರಿಸಿ ಬೆಲೆ ಪರಿಷ್ಕರಿಸಲಿದೆ. ಇದರ ಭಾಗವಾಗಿ OMC ಅನಿಲ ಬೆಲೆ ಇಳಿಕೆ ಮಾಡಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ ಇಳಿಸಲು ಮುಂದಾಗಿದೆ. ವಿಧಾನಸಭೆ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ದೃಷ್ಟಿಯಿಂದ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯಾಗಿದೆ.ಎಂದು ಕೆಲವರು ನುಡಿಯುತ್ತಿದ್ದಾರೆ. ಆದರೆ ಅದೇನೇ ಇರಲಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಮುಖವಾಗಿರುವುದು ಜನರಿಗೆ ಸಂತೋಷ ನೀಡಿದೆ.