ಮದುವೆ ಆಗಿ ದೇಶ ಉದ್ಧಾರ ಮಾಡಿ, ಜನರಿಗೆ ಅಚ್ಚರಿ ತಂದ ಮೋದಿ ಮದುವೆ ಫಾಮು೯ಲಾ

 | 
ಪಪಬ

ಇನ್ನೇನು ಚುನಾವಣೆ ಹತ್ತಿರ ಬರುತ್ತಿದ್ದಂತೆ ಇತ್ತೀಚಿಗಷ್ಟೇ ಕಾಶ್ಮೀರಕ್ಕೆ ಭೇಟಿ ನೀಡುವ ಮೂಲಕ ಪ್ರಧಾನಿ ಮೋದಿ ಅವರು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇನ್ನು ಅಲ್ಲಿ ಭಾಷಣ ಮಾಡಿ ವಿದೇಶಗಳಲ್ಲಿ ಮದುವೆ ಸಮಾರಂಭಗಳನ್ನು ಆಯೋಜಿಸಬೇಡಿ ಎಂದು ಭಾರತೀಯ ಜೋಡಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದ್ದಾರೆ.

ಈ ಹಿಂದೆ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ  ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ಮದುವೆಗಳಿಗೆ ಶಾಪಿಂಗ್ ಮಾಡುವಾಗ, ಜನರು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಬೇಕು ಎಂದು ಒತ್ತಿ ಹೇಳಿದ್ದಾರೆ. ಶ್ರೀಮಂತ ಕುಟುಂಬಗಳು ವಿದೇಶದಲ್ಲಿ ಮದುವೆಗಳನ್ನು ನಡೆಸುವ ಪ್ರವೃತ್ತಿಯಿಂದ ದೇಶಕ್ಕೆ ತುಂಬಾ ಸಮಸ್ಯೆಯಾಗುತ್ತಿದೆ. ದೇಶದ ಹಣ ಹೊರಗಡೆ ಹೋಗದಂತೆ ಭಾರತದ ನೆಲದಲ್ಲಿ ಇಂತಹ ಸಮಾರಂಭಗಳನ್ನು ನಡೆಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

ಈಗ ಮದುವೆ ಸೀಸನ್ ಕೂಡ ಶುರುವಾಗಿದೆ. ಈ ಮದುವೆ ಸೀಸನ್‌ನಲ್ಲಿ ಸುಮಾರು 5 ಲಕ್ಷ ಕೋಟಿ ರೂ. ವ್ಯಾಪಾರ ಆಗಬಹುದು ಎಂದು ಕೆಲವು ವ್ಯಾಪಾರ ಸಂಸ್ಥೆಗಳು ಅಂದಾಜಿಸುತ್ತವೆ. ಮದುವೆಗೆ ಶಾಪಿಂಗ್ ಮಾಡುವಾಗ ನೀವೆಲ್ಲರೂ ಭಾರತದಲ್ಲಿ ತಯಾರಾದ ಉತ್ಪನ್ನಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ. 


ಹೌದು, ಮದುವೆಯ ವಿಷಯ ಬಂದಾಗಿನಿಂದ ಒಂದು ವಿಷಯವು ನನ್ನನ್ನು ಬಹಳ ಸಮಯದಿಂದ ಕಾಡುತ್ತಿದೆ. ಮನಸ್ಸಿನ ನೋವನ್ನು ನನ್ನ ಕುಟುಂಬದವರನ್ನು ಬಿಟ್ಟು ಬೇರೆ ಯಾರ ಹತ್ತಿರ ಹೇಳಿಕೊಳ್ಳಲಿ? ಸುಮ್ಮನೆ ಯೋಚಿಸಿ.. ಇತ್ತೀಚಿನ ದಿನಗಳಲ್ಲಿ ಕೆಲವು ಕುಟುಂಬಗಳು ವಿದೇಶಕ್ಕೆ ಹೋಗಿ ಮದುವೆಗಳನ್ನು ನಡೆಸುವ ಹೊಸ ಪರಿಪಾಠ ಶುರುಮಾಡಿಕೊಂಡಿವೆ. ಇದು ಅಗತ್ಯವೇ ಎಂದು ಪ್ರಶ್ನಿಸಿದ್ದಾರೆ.ಭಾರತದ ನೆಲದಲ್ಲಿ ಜನರು ಮದುವೆ ಸಮಾರಂಭ ಆಯೋಜಿಸಿದರೆ, ದೇಶದ ಹಣವು ದೇಶದಲ್ಲೇ ಉಳಿಯುತ್ತದೆ. ಇಂತಹ ಮದುವೆಗಳಲ್ಲಿ ದೇಶದ ಜನರಿಗೆ ಒಂದಿಷ್ಟು ಸೇವೆ ಸಲ್ಲಿಸಲು ಅವಕಾಶ ಸಿಗುತ್ತದೆ ಎಂದು ಒತ್ತಿ ಹೇಳಿದ್ದಾರೆ. 

ಬಡವರು ಕೂಡ ತಮ್ಮ ಮಕ್ಕಳಿಗೆ ಅವರ ಮದುವೆಯ ಬಗ್ಗೆ ಹೇಳುತ್ತಾರೆ. ‘ವೋಕಲ್ ಫಾರ್ ಲೋಕಲ್’ನ ಈ ಮಿಷನ್ ಅನ್ನು ನೀವು ವಿಸ್ತರಿಸಬಹುದೇ? ನಮ್ಮ ದೇಶದಲ್ಲಿಯೇ ಇಂತಹ ಮದುವೆ ಸಮಾರಂಭಗಳನ್ನು ಏಕೆ ನಡೆಸಬಾರದು? ನೀವು ಬಯಸಿದಂತಹ ವ್ಯವಸ್ಥೆ ಎಲ್ಲಾ ಕಡೆ ಇಲ್ಲದಿರಬಹುದು. ಆದರೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದರೆ ವ್ಯವಸ್ಥೆಗಳೂ ಅಭಿವೃದ್ಧಿ ಹೊಂದುತ್ತವೆ. ಇದು ಬಹಳ ದೊಡ್ಡ ಕುಟುಂಬಗಳಿಗೆ ಸಂಬಂಧಿಸಿದ ವಿಷಯವಾಗಿದೆ. ನನ್ನ ಈ ನೋವು ಖಂಡಿತವಾಗಿಯೂ ಆ ದೊಡ್ಡ ಕುಟುಂಬಗಳನ್ನು ತಲುಪುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ಪ್ರಧಾನಿ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.