ಬಾಲಿವುಡ್ ಚಿತ್ರರಂಗಕ್ಕೆ ಮೊನಾಲಿಸಾ ಗ್ರಾಂಡ್ ಎಂಟ್ರಿ, ದೇವಲೋಕದ ಅಪ್ಸರೆ ‌ಎಂದ ಫ್ಯಾನ್ಸ್

 | 
Hhh
ಯಾವತ್ತು, ಎಲ್ಲಿ, ಯಾರಿಗೆ, ಹೇಗೆ ಅದೃಷ್ಟ ಒಲಿಯುತ್ತೆ ಎನ್ನುವುದನ್ನು ಯಾರಿಂದ ಕೂಡ ಊಹಿಸಲು ಸಾಧ್ಯವಾಗುವುದಿಲ್ಲ. ಕುರಿ ಕಾಯುತ್ತಾ ತನಗೆ ಇಷ್ಟಬಂದಂತೆ ಹಾಡುತ್ತಿದ್ದ ಹನುಮಂತ ಸರಿಪಮಪ ಸೀಸನ್ 15ರ ರನ್ನರ್ ಅಪ್ ಆಗುವುದಲ್ಲದೇ ಬಿಗ್ ಬಾಸ್ ಮನೆಯನ್ನು ಕೂಡ ಪ್ರವೇಶ ಮಾಡುತ್ತಾರೆ ಅಂದರೆ ತಮಾಷೆನಾ ಹೇಳಿ.
ಇನ್ನು ಮಲಯಾಳಂ ಚಿತ್ರದಲ್ಲಿ ಕಣ್ಸನ್ನೆಯಿಂದನೇ ರಾತ್ರೋ ರಾತ್ರಿ ನ್ಯಾಷನಲ್ ಕ್ರಶ್ ಆಗಿ ಬೇಡಿಕೆ ಸೃಷ್ಟಿಸಿಕೊಂಡ ಪ್ರಿಯಾ ಪ್ರಕಾಶ್ ವಾರಿಯರ್ ಅವರದ್ದು ಕೂಡ ಅದೃಷ್ಟನೇ. ಇಷ್ಟೇ ಯಾಕೆ ರೇಲ್ವೆ ಸ್ಟೇಷನ್‌ನಲ್ಲಿ ಲತಾ ಮಂಗೇಶ್ಕರ್ ಹಾಡನ್ನು ಹಾಡುತ್ತಿದ್ದ ರಾಣು ಮಂಡಾಲ್ ಅವರದ್ದು ಕೂಡ ಅದೃಷ್ಟವಲ್ಲದೇ ಮತ್ತೇನು ? ಈ ಸಾಲಿಗೆ ಈಗ ಮಹಾಕುಂಭ ಮೇಳದ ಮೊನಾಲಿಸಾ ಕೂಡ ಸೇರಿಕೊಂಡಿದ್ದಾರೆ. 
ಕುಂಭ ಮೇಳಕ್ಕೆ ಬಂದವರನ್ನೆಲ್ಲ ತನ್ನ ಕಣ್ಣುಗಳ ಮೂಲಕವೇ ಸೆಳೆದ ಮೊನಾಲಿಸಾ ಸದ್ಯ ಸೆಲ್ಫಿ, ಜನರ ಕಿರಿಕಿರಿ ಮತ್ತು ಸಂದರ್ಶನಗಳಿಂದ ಬೇಸತ್ತು ಪ್ರಯಾಗ್ ರಾಜ್‌ದಿಂದ ಮರಳಿ ಇಂಧೋರ್‌ಗೆ ಬಂದಿದ್ದಾರೆ. ಆದರೆ ಹೀಗೆ ಬಂದ ಮೊನಾಲಿಸಾ ಈಗ ಮಣಿ ಮಾರುವ ಹುಡುಗಿಯಾಗಿ ಉಳಿದಿಲ್ಲ. ಬದಲಿಗೆ ಮಾಡೆಲ್ ಆಗಿದ್ದಾರೆ. ಬಣ್ಣದ ಮೋಹಕ್ಕೆ ಸಿಲುಕಿದ್ದಾರೆ.
ಇನ್ನು ಮೊನಾಲಿಸಾಗೆ ಬಾಲಿವುಡ್‌ನಲ್ಲಿ ಮಿಂಚುವ ಆಸೆ ಬೇರೆ ಇದೆ. ಯಾರಾದರೂ ನಿಮ್ಮನ್ನು ಚಿತ್ರದ ನಾಯಕಿಯನ್ನಾಗಿ ಮಾಡುವುದಾಗಿ ಹೇಳಿ ಅವಕಾಶವನ್ನು ನೀಡಿದರೆ ನೀವೇನು ಮಾಡ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರವನ್ನು ನೀಡಿರುವ ಮೊನಾಲಿಸಾ ಕಣ್ಮುಚ್ಚಿಕೊಂಡು ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. ಐಶ್ವರ್ಯ ರೈ ಅವರಂತೆ ಮಿಂಚುವ ಆಸೆ ಇದೆ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.