'ಅಮ್ಮ ಜೈಲಿಗೆ ಹೋಗುಬೇಡ; ನನಿಗೆ ಯಾರೂ ಇಲ್ಲ ಅಮ್ಮ ಎಂದು ಕಣ್ಣೀ ರು ಸುರಿಸಿದ ಪವಿತ್ರ ಮಗಳು
ಕರುಳ ಬಳ್ಳಿ ಸಂಬಂಧ ಅಂದರೆ ಹಾಗೇ. ತನ್ನವರಿಗೆ ಏನಾದ್ರೂ ಆದರೆ ಅದು ಸಹಿಸುವುದೇ ಇಲ್ಲ. ಅದರಲ್ಲೂ ತಾಯಿ ಮಕ್ಕಳ ಸಂಬಂಧ ಎಲ್ಲಾ ಸಂಬಂಧಗಳಿಗಿಂತ ಮಿಗಿಲಾದದ್ದು. ಮಕ್ಕಳಿಗೆ ಏನಾದ್ರು ಆದರೆ ತಾಯಿ ಹೃದಯ ಹೇಗೆ ಚಡಿಪಡಿಸುತ್ತೋ ಹಾಗೇ ತಾಯಿಗೆ ಸಣ್ಣ ಬೇಸರವಾದರೂ ಮಕ್ಕಳ ಮನಸ್ಸು ತಳಮಳಗೊಳ್ಳುತ್ತೆ.
ಜೈಲುಪಾಲಾಗುತ್ತಿರುವ ತಾಯಿಯನ್ನು ಕಂಡು ಮಗಳು ಬಿಕ್ಕಿ ಬಿಕ್ಕಿ ಅತ್ತ ಕರುಳು ಹಿಂಡುವ ದೃಶ್ಯ ಕಳೆದ ದಿನ ನ್ಯಾಯಾಲಯದ ಮುಂದೆ ನಡೆದಿದೆ.ಹೌದು... ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಜೈಲು ಪಾಲಾಗುತ್ತಿರುವ ದೃಶ್ಯವನ್ನು ಕಂಡು ಮಗಳ ಮನಸ್ಸು ನೊಂದು ಹೋಯಿತು. ಅಮ್ಮಾ.ಬಾ... ಮಾ.. ಮನೆಗೆ ಹೋಗೋಣ... ಅಂತ ಪವಿತ್ರಾ ಗೌಡ ಮಗಳು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಕಲ್ಲು ಮನಸ್ಸನ್ನೂ ಕರಗಿಸುವಂತಿತ್ತು.
ತನ್ನ ಅಜ್ಜಿಯೊಂದಿಗೆ ತಾಯಿ ಪವಿತ್ರಾ ಗೌಡ ಅವರನ್ನ ನೋಡಲು ಬಂದಿದ್ದ ಮಗಳು ಖುಷಿ, ತಾಯಿಯನ್ನು ಪೊಲೀಸ್ ವಾಹನದಲ್ಲಿ ಕೂರಿಸುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಅಮ್ಮಾ ಬಾ.ಮಾ.ಅಂತ ಅಮ್ಮನನ್ನು ಕೈ ಚಾಚಿ ಕರೆದಿದ್ದಾಳೆ. ಈ ದೃಶ್ಯ ನಿಜಕ್ಕೂ ಅಲ್ಲಿದ್ದವರ ಕಣ್ಣಲ್ಲಿ ನೀರು ತರಿಸಿದೆ. ತಾಯಿ ಮಗಳ ನೋವನ್ನು ಕಂಡು ಸ್ಥಳದಲ್ಲಿವರ ಕಣ್ಣು ತುಂಬಿ ಬಂದಿವೆ. ತಾಯಿ ಮಕ್ಕಳು ದೂರವಾಗುವ ಸನ್ನಿವೇಶ ನಿಜಕ್ಕೂ ಯಾರಿಗೂ ಬೇಡ.
ಚಿತ್ರದುರ್ಗಾದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ನಟಿ ಪವಿತ್ರಾ ಗೌಡ ಅವರನ್ನು ಗುರುವಾರ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ವಾದ ವಿವಾದಗಳನ್ನು ಆಲಿಸಿದ ಕೋರ್ಟ್ ದರ್ಶನ್ ಸಹಿತ 4 ಮಂದಿಯನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿದರೆ, ಪವಿತ್ರಾ ಗೌಡ ಸಹಿತ 9 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.