ಮಗುವಿಗೆ ಹಿಗ್ಗಾಮುಗ್ಗಾ ಥಳಿಸಿದ ಮಹಾತಾಯಿ; ಮಾಧ್ಯಮದ ಮುಂದೆ ಹೇಳಿದ್ದೇನು ಗೊ.ತ್ತಾ
ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದು, ಆದರೆ ಕೆಟ್ಟ ತಾಯಿ ಇರಲ್ಲ ಎಂಬ ಮಾತು ಈ ಕಲಿಯುಗದಲ್ಲಿ ಬದಲಾಗಿದೆ. ಬೆಂಗಳೂರಿನಲ್ಲಿ ತಾಯಿಯೊಬ್ಬಳು ತನ್ನ ಸ್ವಂತ ಮಗುವನ್ನು ಕೂಡಿಹಾಕಿದ್ದಳು. ಮಾತ್ರವಲ್ಲದೇ ಕಾಲಲ್ಲಿ ಒದ್ದು, ಮರ್ಮಾಂಗಕ್ಕೆ ಹಾನಿ ಮಾಡಿದ್ದಳು. ಮೊದಮೊದಲು ಮಗುವಿಗೆ ನಾನೇನು ಮಾಡಿಲ್ಲ, ಮಗುವೇ ಸುಖಾಸುಮ್ಮನೆ ಸುಳ್ಳು ಹೇಳುತ್ತಿದೆ ಎಂದಿದ್ದಳು. ಎಲ್ಲರೂ ತರಾಟೆ ತೆಗೆದುಕೊಳ್ಳುತ್ತಿದ್ದಂತೆ ಮಗುವಿಗೆ ಬುದ್ಧಿ ಕಲಿಸಲು ಹೊಡೆದಿದ್ದು ಎಂದು ಒಪ್ಪಿಕೊಂಡಿದ್ದಾಳೆ.
ಬೆಂಗಳೂರಿನ ಗಿರಿನಗರ ಸಮೀಪದ ವೀರಭದ್ರನಗರದಲ್ಲಿ ಶಾರಿನ್ ಎಂಬಾಕೆ ತನ್ನ ಮೂರು ವರ್ಷದ ಮಗು ಸ್ಟ್ಯಾಲಿನ್‌ನನ್ನು ಗೃಹಬಂಧನದಲ್ಲಿ ಇಟ್ಟಿದ್ದಳು. ಈ ಸುದ್ದಿಯನ್ನು ವಿಸ್ತಾರ ನ್ಯೂಸ್ ಬಿತ್ತರಿಸಿತ್ತು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಮಗುವಿನ ಮೇಲೆ ಹಲ್ಲೆ ಮಾಡಿದ್ದ ತಾಯಿ ಶಾರಿನ್ ಪ್ರತಿಕ್ರಿಯಿಸಿದ್ದಾಳೆ. ನಾನು ಮಗುವಿಗೆ ಹೊಡೆದಿದ್ದು ನಿಜ, ಆದರೆ ಮಗ ಬುದ್ಧಿ ಕಲಿಬೇಕು ಹಾಗೂ ಜೀವನದಲ್ಲಿ ಸ್ವಂತ ಕಾಲಿನ ಮೇಲೆ ನಿಲ್ಲಬೇಕೆಂದು ಎಂದು ಹೀಗೆ ಮಾಡಿದ್ದು ಅಷ್ಟೇ. ಮಗುವೇ ಸುಳ್ಳು ಹೇಳುತ್ತಿದೆ. ನನಗೆ ಕೆಲಸ ಇರಲಿಲ್ಲ, ಹೀಗಾಗಿ ಮಗುವನ್ನು ಕೂಡಿ ಹೊರಗೆ ಹೋಗುತ್ತಿದ್ದೆ ಎಂದಿದ್ದಾಳೆ.
ಶಾರಿನ್ ನಾಲ್ಕು ವರ್ಷದ ಹಿಂದೆ ಶಂಕರ್ ಎಂಬಾತನನ್ನು ಮದುವೆ ಆಗಿದ್ದಳು. ಆತ ಕುಡಿದು ಬಂದು ಹಲ್ಲೆ ಮಾಡುತ್ತಿದ್ದ. ಹೀಗಾಗಿ ಆತನಿಂದ ದೂರಾಗಿ ಎರಡು ವರ್ಷವೇ ಕಳೆದಿದೆ. ಹಣಕಾಸಿನ ತೊಂದರೆಯಿಂದಾಗಿ ಮಗು ಸ್ಟ್ಯಾಲಿನ್‌ನನ್ನು ಮನೆಯಲ್ಲೇ ಕೂಡಿಹಾಕಿ ಕೆಲಸ ಹುಡುಕುತ್ತಿದ್ದೆ. ಇತ್ತೀಚೆಗಷ್ಟೇ ಹೊಸ ಕೆಲಸಕ್ಕೆ ಸೇರಿದ್ದೆ, ಸಂಬಳ ಬಂದ ನಂತರ ಡೇ ಕೇರ್‌ಗೆ ಹಾಕುವ ಅಂತಿದ್ದೆ ಎಂದು ಉತ್ತರಿಸಿದ್ದಾಳೆ. ಇತ್ತ ಮಧ್ಯಾಹ್ನ ಮಗುವಿಗೆ ಊಟ ಕೊಡಲೆಂದು ನನ್ನ ಫ್ರೆಂಡ್ ಮನೆಗೆ ಬರುತ್ತಿದ್ದ ಎಂದು ಶಾರಿನ್ ತಿಳಿಸಿದ್ದಾಳೆ.
ಪೊಲೀಸರು ತಾಯಿ ಶಾರಿನ್‌ಳನ್ನು ಕರೆಸಿ ಬುದ್ಧಿವಾದ ಹೇಳಿ ಕಳಿಸಿದ್ದಾರೆ. ಈಗಾಗಲೇ ಮಗುವನ್ನು ಮಕ್ಕಳ ಆಯೋಗದ ಸುಪರ್ದಿಗೆ ಒಪ್ಪಿಸಿದ್ದಾರೆ. ಶಾರಿನ್ ಹಾಗೂ ಪತಿ ಶಂಕರ್ ಇಬ್ಬರನ್ನೂ ಕರೆಸಿ ಕೌನ್ಸೆಲಿಂಗ್‌ಗೆ ಒಳಗಾಗುವಂತೆ ಸೂಚನೆ ನೀಡಿದ್ದಾರೆ. ದಂಪತಿ ಬಂದು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿದ್ದರಷ್ಟೆ ಮಗುವನ್ನು ನೀಡುವುದಾಗಿ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನಾಗವೇಣಿ ತಿಳಿಸಿದ್ದಾರೆ. ಶಿಶು ಮಂದಿರದಲ್ಲಿ ಮಗುವಿನ ಪಾಲನೆ ಮಾಡಲಾಗುತ್ತಿದೆ. ಕೌನ್ಸಿಲಿಂಗ್ ವೇಳೆ ತಾಯಿ ಜತೆ ಹೋಗಲು ಮೂರು ವರ್ಷದ ಮಗು ನಿರಾಕರಿಸಿದೆ ಎನ್ನಲಾಗಿದೆ. ಹೀಗಾಗಿ ಸೋಮವಾರ ಮತ್ತೊಂದು ಸುತ್ತಿನ ಕೌನ್ಸಿಲಿಂಗ್‌ಗಾಗಿ ಸಿಡಬ್ಲ್ಯೂಸಿ ಕಮಿಟಿ ತಾಯಿ ಶಾರೀನ್‌ಗೆ ನೋಟೀಸ್ ನೀಡಿದೆ.
ಮನೆಗೆ ಬರುವ ಅಂಕಲ್ ಕುಕ್ಕರ್‌ನಿಂದ ಹೊಡೆದರು ಎಂದು ಮಗು ಹೇಳಿದೆ. ಪ್ರಿಯಕರನಿಗಾಗಿ ತನ್ನ ಸ್ವಂತ ಮಗುವಿಗೆ ಶಾರಿನ್ ಚಿತ್ರ ಹಿಂಸೆ ಕೊಟ್ಟಳಾ ಎಂಬ ಪ್ರಶ್ನೆಯು ಕಾಡುತ್ತದೆ. ಆತ ನನ್ನ ಸ್ನೇಹಿತ, ಮಗನಿಗೆ ಮಧ್ಯಾಹ್ನ ಊಟ ಕೊಡಲು ಬರುತ್ತಿದ್ದ ಎಂದಿದ್ದಾಳೆ. ಆದರೆ ಆಕೆ ಮೊಬೈಲ್ ಸ್ಕೀನ್‌ನಲ್ಲಿ ಪ್ರಿಯಕರನ ಕೆನ್ನೆಗೆ ಚುಂಬಿಸುವ ರೀತಿಯಲ್ಲಿ ಫೋಟೊ ಹಾಕಿಕೊಂಡಿದ್ದಾಳೆ.ಇತ್ತ ಕ್ರೂರಿ ಅಮ್ಮನಿಗೆ ಅಕ್ಕಪಕ್ಕದ ಮನೆಯ ಮಹಿಳೆಯರ ಛೀಮಾರಿ ಹಾಕಿದ್ದಾರೆ. ಆ ಮಗು ಕಿಟಕಿಯಿಂದ ಮುಖ ಹಾಕಿ ಊಟಕ್ಕಾಗಿ ಬೇಡುತ್ತಿತ್ತು ಎನ್ನಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.