ಬಿಗ್ ಬಾಸ್ ಮನೆ ರೂಲ್ಸ್ ಬ್ರೇಕ್ ಮಾಡಿದ ಸಂಗೀತ, ಯಾಕೆ ಏ ನಾಯಿತು ಗೊ.ತ್ತಾ

 | 
Bg

ಬಿಗ್ ಬಾಸ್ ಮನೆಯಲ್ಲಿ ಆರಂಭದಲ್ಲಿಯೇ ಕಿಚ್ಚ ಸುದೀಪ್ ಅವರು ವೀಕೆಂಡ್ ಎಪಿಸೋಡ್‌ನಲ್ಲಿ ಸ್ನೇಹಿತ್‌ಗೆ ಫೂಟೇಜ್, ಕಂಟೆಂಟ್ ಅಂತೆಲ್ಲ ಮಾತನಾಡಬೇಡಿ ಅಂತ ಎಚ್ಚರಿಕೆ ಕೊಟ್ಟಿದ್ದರು. ಇದು ಅಲ್ಲಿಯೇ ಪಕ್ಕದಲ್ಲಿದ್ದ ಸಂಗೀತಾ ತಲೆಗೆ ಹೋದಂತಿಲ್ಲ. ಸುದೀಪ್ ವಾರ್ನಿಂಗ್ ಮಾಡಿದ್ದರೂ ಕೂಡ ಅವರು ಸ್ಕ್ರೀನ್ ಸ್ಪೇಸ್ ಬಗ್ಗೆ ಮಾತನಾಡಿದ್ದಾರೆ.

ಈ ವಾರ ಬಿಗ್ ಬಾಸ್ ಶೋನಲ್ಲಿ ಸಂಗೀತಾ ಅವರು ತಂಡದ ಮಾಲೀಕರಾಗಿದ್ದರು. ಆಗ ಅವರು ಮೈಕಲ್‌ ಚೆನ್ನಾಗಿ ಆಡಿದ್ರೂ ಕೂಡ ಜಾಸ್ತಿ ಹಣ ನೀಡಿಲ್ಲ. ಉತ್ತಮ ಪ್ರದರ್ಶನ ತೋರಿದವರಿಗೆ ಹಣ ಕೊಡಬೇಕು ಅಂತ ಬಿಗ್ ಬಾಸ್ ಹೇಳಿದ್ದರು. ಆದರೆ ಸಂಗೀತಾ ಕಡಿಮೆ ಹಣ ಕೊಟ್ಟು, ನಾನು ಆಟ ಆಡಿಲ್ಲ, ನೀವು ಆಟ ಆಡಿದ್ದೀರಾ. ನೀವು Display ಅಲ್ಲಿ ಕಾಣಿಸಿಕೊಂಡ್ರಿ. ನಾನು ಮೂಲೆಯಲ್ಲಿ ಕೂತಿದ್ದೆ ಅಂತ ಹೇಳಿದ್ದರು.

ಸಂಗೀತಾ ಅವರು ಸ್ಕ್ರೀನ್‌ಸ್ಪೇಸ್ ಬಗ್ಗೆ ಮಾತನಾಡಿರೋದು ಕಾರ್ತಿಕ್, ವಿನಯ್‌ಗೂ ಶಾಕ್ ಆಗಿದೆ. ವಿನಯ್ ಅವರು ಇದನ್ನು ನಾನ್ ಸೆನ್ಸ್ ಅಂತ ಕರೆದಿದ್ದಾರೆ. ಸ್ಕ್ರೀನ್ ಸ್ಪೇಸ್ ಬಗ್ಗೆ ಕಿಚ್ಚ ಸುದೀಪ್ ಈ ವಾರ ಮಾತನಾಡಬಹುದು, ಸಂಗೀತಾಗೆ ಕ್ಲಾಸ್ ತಗೋಬಹುದು. ನಾನು ಸ್ಕ್ರೀನ್ ಸ್ಪೇಸ್ ಬಗ್ಗೆ ಮಾತನಾಡಿಲ್ಲ, ನೀವು ಆಟ ಆಡಿದ್ರಿ, ಕಾಣಿಸಿದ್ರಿ ಅಂತ ಸಂಗೀತಾ ಸ್ಪಷ್ಟನೆ ಕೊಟ್ಟರೂ ಕೂಡ ಅವರು ಸ್ಕ್ರೀನ್ ಸ್ಪೇಸ್ ಬಗ್ಗೆಯೇ ಮಾತನಾಡಿದ್ದಾರೆ.

ಡ್ರೋನ್ ಪ್ರತಾಪ್‌ಗೆ ಆರಂಭದಲ್ಲಿ ನಿಂದಿಸಿದ್ದಕ್ಕೆ, ಅವರು ಕಣ್ಣೀರು ಹಾಕಿದ್ದಕ್ಕೆ ವೀಕ್ಷಕರು ಸಿಂಪಥಿ ತೋರಿಸಿದರು. ಹಾಗಾಗಿ ಅವನು ಹೀರೋ ಆದ. ಕಾರ್ತಿಕ್ ಹೆಡ್ ಶೇವ್ ಮಾಡಿಕೊಂಡಿದ್ದಾನೆ. ಅವನಿಗೆ ನಾವು ಉತ್ತಮ ಕೊಟ್ಟಿಲ್ಲ ಅಂದರೆ ಮತ್ತೆ ನಾವೇ ಜನರ ಕಣ್ಣಲ್ಲಿ ಅವರನ್ನು ಹೀರೋ ಮಾಡ್ತೀವಿ.

ಫುಟೇಜ್ ಎಲ್ಲ ಅಲ್ಲಿಯೇ ಹೋಗುತ್ತದೆ ಎಂದು ಸ್ನೇಹಿತ್ ಅವರು ವಿನಯ್, ನಮ್ರತಾ ಮುಂದೆ ಮಾತನಾಡಿದ್ದರು. ಇನ್ನು ಕೆಲ ಬಾರಿ ಸ್ನೇಹಿತ್ ಬಾಯಲ್ಲಿ ಫೂಟೇಜ್, ಕಂಟೆಂಟ್ ಎನ್ನುವ ಪದ ಬಂದಿತ್ತು. ಈಗ ಸಂಗೀತಾ ಸರದಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.