ಇಡೀ ರಾಜ್ಯಕ್ಕೆ ಬ.ರಸಿಡಿಲು, ಸಂಗೀತ ನಿರ್ದೇಶಕನ ಮಗಳು ಕೊನೆಯುಸಿರು

 | 
H

ಸಾವು ಯಾರಿಗೆ ಯಾವಾಗ ಬರುತ್ತದೆ ಎಂಬುದನ್ನು ಯಾರೂ ಸಹ ಹೇಳಲಾಗದು. ಹೌದು ಇಳಯರಾಜ ಪುತ್ರಿ ಭವತಾರಿಣಿ ಕೂಡ ಅದ್ಭುತ ಗಾಯಕಿ ಆಗಿದ್ದರು. ತಂದೆಯ ರೀತಿಯಲ್ಲಿಯೇ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ಭಾರತಿ ಚಿತ್ರದ ಗಾಯನಕ್ಕೆ ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ತಮ್ಮ ಸುಮಧುರ ಕಂಠಸಿರಿಯ ಗಾಯನಕ್ಕಾಗಿ ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು.

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ಪುತ್ರಿ, ಗಾಯಕಿ ಭವತಾರಿಣಿ ಇಂದು ಸಂಜೆ ಶ್ರೀಲಂಕಾದಲ್ಲಿ ನಿಧನರಾಗಿದ್ದಾರೆ. ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಗಾಯಕಿ ಕೊನೆಯುಸಿರೆಳೆದಿದ್ದಾಳೆ. ಅವರನ್ನು ಆಯುರ್ವೇದ ಚಿಕಿತ್ಸೆಗಾಗಿ ಶ್ರೀಲಂಕಾಕ್ಕೆ ಕರೆದೊಯ್ಯಲಾಯಿತು.ಗಾಯಕಿ ಭವತಾರಿಣಿ ಅವರಿಗೆ ಕೇವಲ 47 ವರ್ಷ ವಯಸ್ಸಾಗಿತ್ತು. 

ಅವರ ಅಗಲಿಕೆಗೆ ಭಾರತೀಯ ಚಿತ್ರರಂಗವನ್ನು ಕಂಬನಿ ಮಿಡಿದಿದೆ. 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಲವು ಹಾಡುಗಳನ್ನು ಹಾಡಿ ಗುರುತಿಸಿಕೊಂಡಿದ್ದರು. ಇಳಯರಾಜ ಸಂಗೀತ ಸಂಯೋಜನೆಯ ರಸಯ್ಯ ಚಿತ್ರದ ಮೂಲಕ ಗಾಯಕಿಯಾಗಿ ಸಿನಿಜಗತ್ತಿಗೆ ಪಾದಾರ್ಪಣೆ ಮಾಡಿದರು ಮೇಲ್ ಬೋಲಾ ಎಂಬ ಹಾಡಿಗೆ ಭವತಾರಿಣಿ ಅತ್ಯುತ್ತಮ ಹಿನ್ನೆಲೆ ಗಾಯಕಿ ರಾಷ್ಟ್ರಪ್ರಶಸ್ತಿ ಪಡೆದರು. ಇಳಯರಾಜಾ, ಕಾರ್ತಿಕ್ ರಾಜಾ, ಯುವನ್ ಶಂಕರ್ ರಾಜಾ ಮುಂತಾದವರು ರಚಿಸಿದ ಹಾಡುಗಳನ್ನು ಹಾಡಿದ್ದಾರೆ. 

ತಮಿಳು ಮಾತ್ರವಲ್ಲದೆ, ಹಿಂದಿ, ತೆಲುಗು ಮತ್ತು ಕನ್ನಡ ಭಾಷೆಗಳ ವಿವಿಧ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಭವತಾರಿಣಿ ಎಲ್ಲರಿಗೂ ಬೇಕಾಗಿದ್ದವರು. ಇವರ ನಿಧನ ಇಡೀ ಸಿನಿಮಾರಂಗಕ್ಕೆ ಆಘಾತ ನೀಡಿದೆ. ಇದರಿಂದ ನಟಿ ಸಿಮ್ರನ್ ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ಭವತಾರಿಣಿ ಸಾವು ನೋವು ತಂದಿದೆ ಎಂದಿದ್ದಾರೆ.ಭವತಾರಿಣಿ ನಿಧನಕ್ಕೆ ತಮಿಳುನಾಡಿನ ಸಿ.ಎಂ.ಸ್ಟಾಲಿನ್ ಕೂಡ ಶೋಕ ವ್ಯಕ್ತಪಡಿಸಿದ್ದು, ಭವತಾರಿಣಿ ಸಾವಿನ ನೋವು ಯಾರೂ ತುಂಬಲಾರರು. ಅದು ಹಾಗೆ ಉಳಿಯಲಿದೆ ಎಂದು ಹೇಳಿಕೊಂಡಿದ್ದಾರೆ.

ಭವತಾರಿಣಿ ಸಂಗೀತ ಲೋಕದಲ್ಲಿ ಬಹಳ ಹೆಸರುವಾಸಿಯಾಗಿದ್ದರು. ಅವರು ಇಳಯರಾಜ ಅವರ ಮಗಳು ಮತ್ತು ಕಾರ್ತಿಕ್ ರಾಜ-ಯುವನ್ ಶಂಕರ್ ರಾಜರ ಸಹೋದರಿ. ಭವತಾರಿಣಿ ಅವರು ಭಾರತಿ ಚಿತ್ರದ ಮಾಯಿಲ್ ಪೋಲ ಪೊನ್ನು ಒಣ್ಣು ಎಂಬ ತಮಿಳು ಗೀತೆಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಹಿನ್ನೆಲೆ ಗಾಯಕಿಯಾಗುವುದರ ಜೊತೆಗೆ ಸಂಗೀತ ಸಂಯೋಜಕಿಯೂ ಆಗಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.