ಕೆ.ಮಿಕಲ್ ನೀರಿನಿಂದ ಸಂಗೀತ ಕಣ್ಣಿಗೆ ಮತ್ತಷ್ಟು ಸಮಸ್ಯೆ, ಚುರುಕಿನ ಚಿಕಿತ್ಸೆ ಆರಂಭ

 | 
D

ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವಿನ ತಿಕ್ಕಾಟ ತಾರಕ್ಕೇರುತ್ತಲೇ ಇದೆ. ಈ ವಾರ ಸ್ಪರ್ಧಿಗಳನ್ನು ಗಂಧರ್ವರು ಹಾಗೂ ರಾಕ್ಷಸರು ಎಂದು ಎರಡು ಗುಂಪುಗಳಾಗಿ ವಿಂಗಡಿಸಿ ಟಾಸ್ಕ್‌ಗಳನ್ನು ನೀಡಲಾಗಿತ್ತು. ಆದರೆ ಟಾಸ್ಕ್‌ ವೇಲೆ ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಈ ಬಗ್ಗೆ ಸಂಗೀತಾ ಸಹೋದರ ಬೇಸರ ವ್ಯಕ್ತಪಡಿಸಿದ್ದಾರೆ.

ದಿಢೀರನೇ ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗ್ತಿದೆ. ಟಾಸ್ಕ್‌ ವೇಳೆ ಸೋಪು ನೊರೆಯ ನೀರನ್ನು ಇಬ್ಬರ ಮುಖಕ್ಕೆ ಎರಚಿದ್ದರಿಂದ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗ್ತಿದೆ. ಚೇರ್ ಮೇಲೆ ಕೂರಿಸಿ ನೀರು ಎರಚಿದ ವೇಳೆ ಸಂಗೀತಾ, ಪ್ರತಾಪ್ ಮೂಗು, ಕಣ್ಣು ಹಾಗೂ ಮೂಗು, ಬಾಯಿಗೆ ನೀರು ಬಿದ್ದು ನೋವಿನಿಂದ ಒದ್ದಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಿದೆ.

ಸದ್ಯ ಇಬ್ಬರೂ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಇದೆಲ್ಲದರ ನಡುವೆ ಸಂಗೀತಾ ಶೃಂಗೇರಿ ಸಹೋದರ ಸಂತೋಷ್ ಕುಮಾರ್ ಇನ್‌ಸ್ಟಾಗ್ರಾಮ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ನಟ ಸುದೀಪ್ ಹಾಗೂ ಕಲರ್ಸ್ ಕನ್ನಡ ಕುರಿತು ಬೇಸರಗೊಂಡಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಪೋಸ್ಟ್‌ ಮಾಡಿದ್ದು ಅದರ ಸ್ಕ್ರೀನ್‌ಶಾಟ್ ವೈರಲ್ ಆಗುತ್ತಿದೆ. ಸುದೀಪ್ ಸರ್, ನೀವು ಹೇಳಿದ್ದಿರಿ. ಬಿಗ್‌ಬಾಸ್ ಮನೆ ಸುರಕ್ಷಿತ. ಏನು ಆಗಲ್ಲ ಅಂತ. ಆದರೆ ಈಗ ನೋಡಿದ್ರೆ, ಇದು ಹಾಗಿಲ್ಲ. ಇದು ಕುಟುಂಬದ ಶೋ ಅಂತ ಕಾಣಲ್ಲ. ಕೇವಲ ಹಿಂಸೆಯೇ ಕಾಣ್ತಿದೆ. ಕುಟುಂಬದವರು ಈ ರೀತಿಯ ಆಕ್ರಮಕಣಕಾರಿ ವರ್ತನೆಯನ್ನು ಹೇಗೆ ನೋಡ್ತಾರೆ ಎಂದು ಪ್ರಶ್ನಿಸಿದ್ದಾರೆ.

ಕಲರ್ಸ್ ಕನ್ನಡ.. ನಾವ್ ಸುದೀಪ್ ಸರ್ ಬಗ್ಗೆ ಸರಿ ಮಾಡುವವರೆಗೂ ನಾವು ಯಾಕೆ ಕಾಯಬೇಕು. ಬಿಗ್‌ ಬಾಸ್ ಇರೋದು ಜನರ ತಪ್ಪುಗಳನ್ನು ತಕ್ಷಣ ಅವರಿಗೆ ಅರ್ಥ ಮಾಡಿಸಲು ಅಲ್ಲವೇ? ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೀಕ್ಷಕರು ಕೂಡ ಈ ಬಗ್ಗೆ ಬೇಸರ ಹೊರ ಹಾಕುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.