ಸಂಗೀತ ಶೃಂಗೇರಿ ಮದುವೆ ಫಿಕ್ಸ್; ಡ್ರೋನ್ ಪ್ರತಾಪ್ ಕಣ್ಣೀ ರು

 | 
U

ಸಂಗೀತ ಶೃಂಗೇರಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ, ಬಿಗ್‌ಬಾಸ್ ಮನೆಯಲ್ಲಿ ಇದ್ದಾಗಲೂ ಈ ನಟಿ ಸಖತ್ ಸದ್ದು ಮಾಡಿದ್ದರು. ಇದೀಗ ಬಿಗ್‌ಬಾಸ್ ಮನೆಯಿಂದ ಹೊರಗಡೆ ಬಂದರೂ, ಸಂಗೀತ ವಿಚಾರ ಸಖತ್ ಸದ್ದು ಮಾಡುತ್ತಿದೆ. ಅದರಲ್ಲೂ ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದೇ ತಡ ಹೊಸ ಸಿನಿಮಾ ಟ್ರೇಲರ್ ರಿಲೀಸ್ ಮಾಡಿದ್ದಾರೆ ಸಂಗೀತಾ ಶೃಂಗೇರಿ. ಇದೇ ವೇಳೆ ತಮ್ಮ ಕ್ರಷ್ ಬಗ್ಗೆಯೂ ಸಂಗೀತ ಮುಕ್ತವಾಗಿ ಮಾತನಾಡಿದ್ದಾರೆ.

ಹೌದು ಸಂಗೀತಾ ಶೃಂಗೇರಿ ಧಾರಾವಾಹಿಗಳ ಮೂಲಕ ಸದ್ದು ಮಾಡುತ್ತಾ ಕೊನೆಗೆ ಕನ್ನಡ ಬೆಳ್ಳಿತೆರೆ ಮೇಲೆ ಕೂಡ ಮಿಂಚಿದ್ದರು. ಅದರಲ್ಲೂ ಕೆಲವು ವರ್ಷದ ಹಿಂದೆ ರಿಲೀಸ್ ಆಗಿದ್ದ ಸಂಗೀತಾ ಶೃಂಗೇರಿ ಅವರ ಸಿನಿಮಾ '777 ಚಾರ್ಲಿ' ಸಖತ್ ಸೌಂಡ್ ಮಾಡಿತ್ತು. ಹಾಗೂ ಬಾಕ್ಸ್ ಆಫಿಸ್‌ನಲ್ಲಿ ಕೂಡ ನೂರಾರು ಕೋಟಿ ಕಮಾಯಿ ಮಾಡಿತ್ತು. ಇದೀಗ ಮತ್ತೊಂದು ಸಿನಿಮಾ ಮೂಲಕ ಸದ್ದು ಮಾಡಲು ಸಂಗೀತಾ ಬಂದಿದ್ದಾರೆ. 

ಸಂಗೀತಾ ಶೃಂಗೇರಿ ಹಾಗೂ ದೂದ್ ಪೇಡ ದಿಗಂತ್ ಕಾಂಬಿನೇಷನ್ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಇದೇ ವೇಳೆ ನಟಿ ಸಂಗೀತಾ ದಿಗಂತ್ ಅವರು ನನ್ನ ಕ್ರಷ್ ಎಂದಿದ್ದಾರೆ. ಹೌದು ಬಿಗ್‌ ಬಾಸ್‌ ಶೋನಲ್ಲಿ ಭಾಗವಹಿಸಿ ಟಾಪ್‌ 3 ಕಂಟೆಸ್ಟಂಟ್‌ ಆಗಿದ್ದರು. ಆ ದೊಡ್ಮನೆಯಲ್ಲಿ ಸಿಂಹಿಣಿ ಅಂತಾನೇ ಫೇಮ್‌ ಪಡೆದುಕೊಂಡು ಎಷ್ಟೋ ಹೆಣ್ಣು ಮಕ್ಕಳಿಗೆ ಮಾದರಿಯಾಗಿ ನಿಂತಿದ್ದರು.   

ಬಿಗ್‌ ಬಾಸ್‌ ಮನೆಯಲ್ಲಿ ವಿನ್ನರ್‌ ಕಾರ್ತಿಕ್‌ ಹಾಗೂ ಸಂಗೀತಾ ಆರಂಭದಲ್ಲಿ ಒಳ್ಳೆಯ ಸ್ನೇಹಿತರಾಗಿದ್ದರು. ಇವರಿಬ್ಬರೂ ಮನೆಯಿಂದ ಹೊರಬರುವಷ್ಟರಲ್ಲಿ ಜೋಡಿಗಳಾಗಿರುತ್ತಾರೆ ಎಂದು ಅಭಿಮಾನಿಗಳು ಊಹಿಸಿದ್ದರು. ಆದರೆ ಆಗಿದ್ದೆ ಬೇರೆ. ಇಬ್ಬರ ಮದ್ಯ ಮನಸ್ಥಾಪಗಳು ಹೆಚ್ಚಾಗಿ ಮಾತೇ ಬಿಟ್ಟಿದ್ದರು. ಇನ್ನು ಇತ್ತೀಚೆಗೆ ನಟಿ ಸಂಗೀತಾ ಮಾರಿ ಗೋಲ್ಡ್‌ ಚಿತ್ರದ ಪ್ರಮೋಷನ್‌ಗೆ ಹೋದಾಗ ತಮ್ಮ ಬಾಯ್‌ಫ್ರೆಂಡ್‌ ಯಾರು ಎಂದು ಹೇಳಿಕೊಂಡಿದ್ದಾರೆ.

ಆ ವಿಡಿಯೋ ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಹೌದು ನಟಿ ಸಂಗೀತಾ ಶೃಂಗೇರಿ ವೇದಿಕೆ ಮೇಲೆ ತಮ್ಮೊಂದಿಗೆ ಪೋಟೋ ತೆಗೆಸಿಕೊಳ್ಳಲು ಬಂದಿದ್ದ ಪುಟ್ಟ ಬಾಲಕನ್ನು ತೋರಿಸಿ ನೀವು ನಾನು ಯಾರನ್ನ ಮದುವೆ ಆಗ್ತೀನಿ ಕೇಳುತ್ತಾ ಇದ್ರಿ ಈಗ ನೋಡಿ ಇವರನ್ನೇ ನಾನು ಮದುವೆ ಆಗೋದು ಎಂದು ಹೇಳಿ ಕಾಮಿಡಿ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.