ಹಿಂದೂ ಯುವಕನ ಹಿಂದೆ ಬಿದ್ದ ಮು.ಸ್ಲಿಂ ಯುವತಿ, ಎಲ್ಲರು ಮೆಚ್ಚುವಂತೆ ತಾಳಿ ಕಟ್ಟಿದ ಯುವಕ

 | 
Bs

ಪ್ರೀತಿ ಜಾತಿ ಧರ್ಮವನ್ನು ಮೀರಿದ್ದು ಎಂಬುದನ್ನು ಇದೀಗ ಈ ಜೋಡಿ ನಿಜಮಾಡಿದೆ. ಹೌದು ಕೆಲ ದಿನಗಳ ಹಿಂದೆ ರಜಿಯಾ ರಾಮ್ ಎನ್ನುವ ಧಾರವಾಹಿ ಬರುತ್ತಿತ್ತು ಮಸ್ಲಿ ಹುಡುಗಿ ಅಪ್ಪಟ ಹಿಂದೂ ಹುಡುಗನ ನಡುವಿನ ಕಥೆ ಇದೀಗ ಅದೇ ಕಥೆ ನಿಜ ಜೀವನದಲ್ಲಿ ಕೂಡ ನಡೆದಿದೆ. ಅಚ್ಚರಿಯಾದರೂ ಸತ್ಯ.

ಬಜರಂಗದಳ ಕಾರ್ಯಕರ್ತನೋರ್ವ ಮುಸ್ಲಿಂ ಯುವತಿಯನ್ನೇ ಪ್ರೀತಿಸಿ ವಿವಾಹವಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್‌ನಲ್ಲಿ ನಡೆದಿದೆ. ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಭಂಡಾರಿ ಎಂಬುವರು ಆಯೇಷಾ ಎಂಬ ಮುಸ್ಲಿಂ ಯುವತಿಯನ್ನು ವಿವಾಹವಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಶುಕ್ರವಾರ ಹಿಂದುತ್ವ ಕಾರ್ಯಕರ್ತರು ಭಜರಂಗದಳದ ಕಾರ್ಯಕರ್ತನೊಂದಿಗೆ ಮುಸ್ಲಿಂ ಮಹಿಳೆಯ ವಿವಾಹ ಸಮಾರಂಭವನ್ನು ಆಚರಿಸಿದರು. ಕಳೆದ 3 ವರ್ಷಗಳಿಂದ ಪ್ರಶಾಂತ್ ಭಂಡಾರಿ ಹಾಗೂ ಆಯೇಷಾ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

ದಕ್ಷಿಣ ಕನ್ನಡದ ಸುರತ್ಕಲ್ ಪಟ್ಟಣದ ಹಿಂದುತ್ವ ಕಾರ್ಯಕರ್ತರ ಮುಂದೆ ಆಯೇಷಾ ಅಕ್ಷತಾ ಆಗಿದ್ದಾಳೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹಾಕಿದ್ದಾರೆ. ಪ್ರಶಾಂತ್‌ ಮತ್ತು ಆಯೇಷಾ ಫೋಟೋವನ್ನು ಹಂಚಿಕೊಂಡಿದ್ದು, ಅದರಲ್ಲಿ ನೂತನ ದಂಪತಿ ಸಂಪ್ರದಾಯಿಕ ಹಿಂದೂ ಉಡುಗೆಯನ್ನು ಧರಿಸಿರುವುದನ್ನು ಕಾಣಬಹುದು.

ನವೆಂಬರ್ 30 ರಂದು ಪ್ರಶಾಂತ್‌, ನಿಮ್ಮ ಮಗಳು-ನಾನು ಪರಸ್ಪರ ಪ್ರೀತಿಸುತ್ತಿದ್ದು, ನಮ್ಮಿಬ್ಬರ ಮದುವೆಗೆ ಅನುಮತಿ ನೀಡಬೇಕು ಎಂದು ಆಯೇಷಾಳ ತಾಯಿಗೆ ಮನವಿ ಮಾಡಿಕೊಂಡಿದ್ದರಂತೆ. ಕುಟುಂಬ ಸದಸ್ಯರೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದ್ದರು. ಅದೇ ದಿನ ಸಂಜೆ ಪ್ರಶಾಂತ್‌ ಮತ್ತು ಆಯೇಷಾ ನಾಪತ್ತೆಯಾದ ನಂತರ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. 

ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ವಿರುದ್ಧ ರೌಡಿಶೀಟರ್ ಕೇಸ್ ಕೂಡ ಇದೆ ಎನ್ನಲಾಗಿದೆ. ವಿವಾಹವಾಗಿರುವುದು ಕರಾವಳಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಸಂಚಲನ ಮೂಡಿಸುವ ಸಾಧ್ಯತೆ ಇದ್ದು, ಶುಕ್ರವಾರ ಸಂಜೆ ದಂಪತಿ ತಮಗೆ ರಕ್ಷಣೆ ಕೋರಿ ಸುರತ್ಕಲ್ ಪೊಲೀಸ್ ಠಾಣೆಗೆ ಹಾಜರಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಪ್ರೀತಿಸಿದ ಜೀವಗಳು ಒಂದಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.