25 ಕೋಟಿ ಲಾಟರಿ ಪಡೆದ ಮುಸ್ಲಿಂ ಯುವಕ, ಆದರೆ ಹಣ ಕೈ ಸೇರುವ ಮುನ್ನ ದೊಡ್ಡ ಶಾ ಕ್

 | 
Bji
 ಇಂದಲ್ಲ ನಾಳೆ ನಾನು ಲಾಟರಿಯಲ್ಲಿ ಕೋಟಿ ಕೋಟಿ ಬಹುಮಾನ ಗೆಲ್ತಿನಿ ಅಂತ ಕನಸು ಕಂಡಿದ್ದ ವ್ಯಕ್ತಿಯ ಕನಸು ಕೊನೆಗೂ ನನಸಾಗಿದೆ. ಕಡೆಗೂ ಅದೃಷ್ಟಲಕ್ಷ್ಮಿ ಆತನ ಕೈ ಹಿಡಿದಿದ್ದು, ಆತ ಈಗ ಕೋಟಿ ಕೋಟಿ ಒಡೆಯನಾಗಿದ್ದಾನೆ. ಅಷ್ಟಕ್ಕೂ ಆತ ಯಾರು? ಆತನಿಗೆ ಒಲಿದು ಬಂದ ಭಾಗ್ಯ ಏನು ಅಂತಿದ್ದೀರಾ.? ಈ ಸ್ಟೋರಿ ನೋಡಿ. ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಬೈಕ್‌ ಮೆಕ್ಯಾನಿಕ್ ಅಲ್ತಾಫ್‌ ಎಂಬವರು ಕೇರಳದ ತಿರುವೋಣಂ ಹಬ್ಬದ ಪ್ರಯುಕ್ತ ನಡೆದ 25 ಕೋಟಿ ರೂ. ಮೌಲ್ಯದ ಬಂಪರ್ ಲಾಟರಿ ಗೆದ್ದಿದ್ದಾರೆ.
 ಪರಿಚಯಸ್ಥರ ಮೂಲಕ ಖರೀದಿಸಿದ್ದ ಲಾಟರಿ ಟಿಕೆಟ್ ಇವರ ಬದುಕು ಬದಲಿಸಿದೆ. ತೆರಿಗೆ ಮೊತ್ತ ಕಡಿತವಾಗಿ 12 ಕೋಟಿ ರೂ. ಲಾಟರಿ ಹಣವನ್ನು ಅಲ್ತಾಫ್ ಪಡೆಯಲಿದ್ದಾರೆ.ಲಾಟರಿ ಗೆದ್ದ ವಿಚಾರ ತಿಳಿಯುತ್ತಿದ್ದಂತೆ ಅಲ್ತಾಫ್ ಕೇರಳದ ತಿರುವೋಣಂ ಕಚೇರಿ ತಲುಪಿದ್ದಾರೆ. ಲಾಟರಿ ಹಣ ಪಡೆಯುವ ಪ್ರಕ್ರಿಯೆ ಪೂರೈಸಿ ಹಣ ಪಡೆದುಕೊಳ್ಳಲಿದ್ದಾರೆ.
ಕುರಿತು ಕೇರಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಸ್ನೇಹಿತನ ಮನೆಗೆ ಚಿಕ್ಕವಯಸ್ಸಿನಿಂದಲೂ ಬರುತ್ತಿದ್ದೆ. ಹೀಗೆ ಬಂದಾಗಲೆಲ್ಲ ಲಾಟರಿ ಟಿಕೆಟ್​ ತೆಗೆದುಕೊಳ್ಳುತ್ತಿದ್ದೆ. ನಾನು 10 ವರ್ಷದಿಂದ ಬಂಪರ್ ಟಿಕೆಟ್ ಖರೀದಿಸುತ್ತಿದ್ದೇನೆ. ಲಾಟರಿ ಗೆಲ್ಲವು ಬಗ್ಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಅಲ್ಲಾಹುವಿನ ಕೃಪೆಯಿಂದ ಅದೃಷ್ಟ ಕುಲಾಯಿಸಿದೆ ಎಂದಿದ್ದಾರೆ.
ಬುಧವಾರ ತಿರುವೋಣಂ ಬಂಪರ್ ಲಾಟರಿ ಡ್ರಾ ನಡೆಯಿತು. 71 ಲಕ್ಷ ಟಿಕೆಟ್‌ಗಳು ಮಾರಾಟವಾದ ಓಣಂ ಬಂಪರ್‌ನಲ್ಲಿ 25 ಕೋಟಿ ರೂ ಮೊದಲ ಬಹುಮಾನವಾಗಿತ್ತು. ಅಂತಿಮವಾಗಿ, ಅದು ಕರ್ನಾಟಕದ ಪಾಂಡವಪುರದ ಮೂಲದ ಅಲ್ತಾಫ್ ಪಾಲಾಗಿದೆ. 
ಆದರೆ ಬೇಸರವೆಂದರೆ  ಕೋಟಿ ರೂ ಲಾಟರಿ ಹೊಡೆದವರಿಗೆ ಆ ಮೊತ್ತ ಪೂರ್ತಿ ಕೈಗೆ ಸಿಗುವುದಿಲ್ಲ. ತೆರಿಗೆ ಕಡಿತಗೊಳಿಸಿ ಉಳಿದ ಮೊತ್ತವನ್ನು ವಿಜೇತರಿಗೆ ನೀಡಲಾಗುತ್ತದೆ. ಹಾಗಾಗಿ, 12.88 ಕೋಟಿ ರೂ. ಮಾತ್ರ ಅದೃಷ್ಟವಂತರಿಗೆ ಸಿಗುತ್ತದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.