ನಾನು ಪ್ರಚಾರಕ್ಕೆ ಬಂದಿದ್ದು ಬಿಜೆಪಿಗೆ ನಡುಕ ಉಂಟಾಗಿದೆ; ಅವರ ಮುಖದಲ್ಲಿ ಸೋಲು ಕಾಣುತಿದೆ' ಗೀತಾ ಶಿವರಾಜ್ ಕುಮಾರ್

 | 
Ye

ಶಿವಮೊಗ್ಗ ಕ್ಷೇತ್ರಕ್ಕೆ ದೊಡ್ಮನೆಯಿಂದ ಚುನಾವಣೆಯಲ್ಲಿ ಭಾಗವಹಿಸುತ್ತಿರುವ ಗೀತಾ ಶಿವರಾಜ್ ಕುಮಾರ್ ಗೆ ಚಿತ್ರರಂಗದ ಹಾಗೂ ಅಪ್ಪನ ರಾಜಕೀಯ ಬೆಂಬಲ ಕೂಡ ಇದೆ. ಇದೀಗ ಅದೇ ಧೈರ್ಯದಲ್ಲಿ ಪ್ರಚಾರದ ವೇಳೆ ಮೋದಿಯನ್ನು ಲೇವಡಿ ಮಾಡಿದ್ದಾರೆ.

ಈ ಬಾರಿ ನಮ್ಮ ಕ್ಷೇತ್ರದಲ್ಲಿ ಎಲ್ಲೂ ಮೋದಿ ಹವಾ ಕಾಣುತ್ತಿಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್  ಹೇಳಿದ್ದಾರೆ.ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಯ ಚುನಾವಣೆಗೂ ಈಗಿನ ಚುನಾವಣೆಗೂ ಬಹಳ ವ್ಯತ್ಯಾಸ ಕಾಣುತ್ತಿದೆ.

 ಚುನಾವಣಾ ಪ್ರಚಾರದ ವೇಳೆ ನಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಕಳೆದ ಬಾರಿ ಬೇರೆ ಪಕ್ಷದಿಂದ ಸ್ಪರ್ಧೆ ಮಾಡಿದ್ದೆ. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದೇನೆ. ಕಾಂಗ್ರೆಸ್‍ನ ಗ್ಯಾರಂಟಿ ಯೋಜನೆಗಳು ನನಗೆ ಬಹಳ ಸಹಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಈಗ ನಾವು ಏನು ಕೆಲಸ ಮಾಡಬೇಕು, ಯಾವ ರೀತಿ ಪ್ರಚಾರ ಮಾಡಬೇಕು ಆ ರೀತಿ ಮಾಡುತ್ತಿದ್ದೇವೆ. ನನಗೆ ಜನರ ಜೊತೆ ಇರಲು ಇಷ್ಟ. ನನ್ನ ಎದುರಾಳಿ ಯಾರು ಎಂದು ಯೋಚನೆ ಮಾಡಲ್ಲ. ನಾನು ನನ್ನ ಪ್ರಚಾರ ಅಷ್ಟೇ ಮಾಡ್ತಿದ್ದೇನೆ. ನಾನು ವೀಕ್ ಅಭ್ಯರ್ಥಿ ಅಲ್ಲ, ನನ್ನ ಸ್ಪರ್ಧೆಯಿಂದ ಅವರಿಗೆ ಭಯ ಆಗಿದೆ. 

ಶಿವರಾಜ್‍ಕುಮಾರ್ ಅಭಿಮಾನಿಗಳು ನನಗೆ ಬೆಂಬಲ ಕೊಡುತ್ತಿದ್ದಾರೆ. ಫಿಲಂ ಛೇಂಬರ್‍ನವರು ಪ್ರಚಾರಕ್ಕೆ ಬರುತ್ತಿದ್ದಾರೆ. ಶಿವರಾಜ್ ಕುಮಾರ್  ಅವರಿಗೆ ನಾನು ತಪ್ಪು ಮಾಡಲ್ಲ ಎಂದು ಗೊತ್ತು. ಹೀಗಾಗಿಯೇ ಅವರು ಯಾವಾಗಲೂ ನನಗೆ ಬೆಂಬಲ ಕೊಡುತ್ತಾರೆ ಎಂದಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.