ನನ್ನ ಅಣ್ಣ ದರ್ಶನ್ ಅವರನ್ನು ಯಾವತ್ತಿಗೂ ಕೈಬಿಡಲ್ಲ, ಅವರ ಬಳಿ ಕೋಟ್ಯಾಂತರ ರೂಪಾಯಿ ಆಸ್ತಿ ಇದೆ; ಧನ್ವೀರ್
Apr 5, 2025, 18:30 IST
|

ಕನ್ನಡದ ಬಹುನಿರೀಕ್ಷಿತ 2025ರ ಸಿನಿಮಾ ವಾಮನ. ನಟ ಧನ್ವೀರ್ ಅಭಿನಯದ ಈ ಸಿನಿಮಾ ಟ್ರೇಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಲೀಸ್ ಮಾಡಿದ್ರು. ಈ ಮೂಲಕ ಆಪ್ತ ಗೆಳೆಯನಿಗೆ ನಟ ದರ್ಶನ್ ಸಾಥ್ ಕೊಟ್ಟರು.ಇನ್ನು, ನಟ ಧನ್ವೀರ್ ಸಿನಿಮಾ ಬಗ್ಗೆ ಮಾತಾಡಿದ ದರ್ಶನ್ ಅವರು ಶುಭ ಹಾರೈಸಿದ್ದಾರೆ.
ಕನ್ನಡ ಸಿನಿಮಾಗಳ ಹರಸಿ. ನಾವು ಯಾವಾಗಲೂ ಕನ್ನಡ ಸಿನಿಮಾಗಳೇ ಮಾಡೋದು. ಈ ಸಿನಿಮಾ ದೊಡ್ಡ ಹಿಟ್ ಮಾಡಿ ಎಂದರು.ಬಜಾರ್, ಬೈ ಟು ಲವ್ ಮತ್ತು ಕೈವ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದವರು ಧನ್ವೀರ್. ಇವರು ಚಾಲೆಂಜಿಂಗ್ ಸ್ಟಾರ್ನ ಬೆಸ್ಟ್ ಫ್ರೆಂಡ್ ಕೂಡ ಹೌದು. ದರ್ಶನ್ ಕಷ್ಟದಲ್ಲಿದ್ದಾಗ ಕೈ ಹಿಡಿದವರು ಧನ್ವೀರ್.ನಟ ಧನ್ವೀರ್ ಗೌಡ ಅವರು ದರ್ಶನ್ ಜೊತೆ ಬೆಂಬಲವಾಗಿ ನಿಂತಿದ್ದಾರೆ.
ಇನ್ನು ದರ್ಶನ್ ಜೊತೆ ಆಪ್ತತೆ ಬೆಳೆದಿದ್ದರ ಬಗ್ಗೆ ಧನ್ವೀರ್ ಅವರು ಮಾತನಾಡಿದ್ದಾರೆ. ನಾನು ಒಬ್ಬ ವ್ಯಕ್ತಿಯನ್ನು ಇಷ್ಟಪಟ್ಟರೆ ಅವರನ್ನು ಉಳಿಸಿಕೊಳ್ಳಲು ನೋಡುತ್ತೇನೆ. ಸುಖದಲ್ಲಿ ಇಷ್ಟು ಇರುತ್ತೇವೋ ಕಷ್ಟದಲ್ಲೂ ಅಷ್ಟೇ ಭಾಗಿ ಆಗಬೇಕು. ಅದು ನನ್ನ ವ್ಯಕ್ತಿತ್ವ. ದರ್ಶನ್ ಅವರು ದೊಡ್ಡ ಆಲದ ಮರ. ಅವರ ಕೆಳಗೆ ಬೆಳೆಯುತ್ತಿರುವವರು ನಾವು ಎಂದು ಧನ್ವೀರ್ ಅವರು ಹೇಳಿದ್ದಾರೆ.
ಟೀಸರ್ ಹಾಗೂ ಹಾಡುಗಳಿಂದ ಗಮನ ಸೆಳೆದಿದ್ದ ವಾಮನ ಟೀಮ್ಗೆ ದರ್ಶನ್ ಸಾಥ್ ನೀಡಿದ್ದು, ಸಿನಿಮಾ ಏಪ್ರಿಲ್ 10ಕ್ಕೆ ರಿಲೀಸ್ ಆಗಲಿದೆ. ರೀಷ್ಮಾ ನಾಣಯ್ಯ ಸಿನಿಮಾದ ನಾಯಕಿ. ವಾಮನ ಚಿತ್ರಕ್ಕೆ ಶಂಕರ್ ರಾಮನ್ ಆ್ಯಕ್ಷನ್ ಕಟ್ ಹೇಳಿದ್ದು, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಜವಾಬ್ದಾರಿ ಕೂಡ ಇವರದ್ದೇ ಆಗಿದೆ. ಚೇತನ್ ಗೌಡ ನಿರ್ಮಾಣದ ಈ ಸಿನಿಮಾಗೆ ಅಜನೀಶ್ ಬಿ. ಲೋಕನಾಥ್ ಸಂಗೀತ ಇದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.