'ನನ್ನ ಜೊತೆ ಸಹ ಕೈದಿಗಳು ಮಾತನಾಡಲ್ಲ; ಪವಿತ್ರ ಗೌಡ ದೂರು

 | 
Yy

ಪವಿತ್ರಾ ಗೌಡ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದಾರೆ. ಅವರು ಈ ಪ್ರಕರಣದಲ್ಲಿ ಎ1 ಆರೋಪಿ ಆಗಿದ್ದಾರೆ. ಕುಟುಂಬದ ಯಾರೂ ಅವರನ್ನು ನೋಡೋಕೆ ಬಂದಿಲ್ಲ. ಈ ವಿಚಾರದಲ್ಲಿ ಅವರಿಗೆ ಬೇಸರ ಆಗಿದೆ. ಕೊನೆಗೂ ಅವರನ್ನು ನೋಡೋಕೆ ಮನೆಯವರು ಬಂದಿದ್ದಾರೆ.

ಸದ್ಯ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಅವರು ಜೈಲಿನಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಆರಂಭದಲ್ಲಿ ಪವಿತ್ರಾ ಅವರನ್ನು ನೋಡಲು ಯಾರೂ ಬಂದಿರಲಿಲ್ಲ. ಇದರಿಂದ ಅವರಿಗೆ ಬೇಸರ ಆಗಿದೆ. ಹೀಗಾಗಿ, ಮನೆಯವರ ಜೊತೆ ಕಿರಿಕ್ ಮಾಡಿದ್ದಾರೆ. ನನ್ನನ್ನು ನೋಡಲು ಯಾರೂ ಬರುವುದಿಲ್ಲ. ನನ್ನನ್ನು ಯಾರೂ ಮಾತನಾಡಿಸುವುದಿಲ್ಲ ಎಂದು ಪವಿತ್ರಾ ಬೇಸರ ಮಾಡಿಕೊಂಡಿದ್ದರು. 

ಇದೀಗ ಅಮ್ಮ, ತಮ್ಮ ಮಗಳು ಎಲ್ಲರೂ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪವಿತ್ರಾ ಗೌಡ ಅವರ ದಿಮಾಕು ಇನ್ನೂ ಕಡಿಮೆಯಾಗಿಲ್ಲ. ಜೈಲಿನಿಂದ ಪೋಷಕರಿಗೆ ಕರೆ ಮಾಡಿ ಕೋಪಗೊಂಡಿದ್ದಾರೆಂದು ತಿಳಿದು ಬಂದಿದೆ.

ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪವಿತ್ರಾ ಗೌಡ ಮನೆಯವರಿಗೆ ಕರೆ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ದಿನವಷ್ಟೇ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನೋಡಲು ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ತೆರಳಿದ್ದರು. ಆದರೆ ಪವಿತ್ರಾ ಗೌಡ ಅವರನ್ನು ಕಾಣಲು ಯಾರೂ ಕೂಡ ಆಗಮಿಸದೇ ಇರುವುದಿಂದ ಕೋಪಗೊಂಡು ಪೋಷಕರಿಗೆ ಕರೆ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದರಿಂದಾಗಿ ಇಂದು ಪೋಷಕರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಮಗಳ ಆರೋಗ್ಯ ವಿಚಾರಿಸಿದ್ದಾರೆ. ಜೈಲಿನಲ್ಲಿರುವ ಪವಿತ್ರಾ ಗೌಡ ಅವರಿಗೆ ಆತಂಕ ಶುರುವಾಗಿದೆ. ಯಾರೂ ಕೂಡ ತಮ್ಮನ್ನ ಮಾತನಾಡಿಸಲು ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಪೋಷಕರಿಗೆ ಕರೆ ಮಾಡಿ ಬೈದಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.