ಶೂಟಿಂಗ್ ಸೆಟ್ ನಲ್ಲಿ ಆತನಿಂದ ನನ್ನ ಜೀವನ ಹಾಳಾಯಿತು, ಗಿಣಿರಾಮ ನಟಿ ನವ್ಯಾ ನಾರಾಯಣ್
Feb 1, 2025, 13:51 IST
|

ಸಿನಿಮಾ, ಸೀರಿಯಲ್ಗಳಂಥ ಬಣ್ಣದ ಪ್ರಪಂಚ ಹೊರಗಡೆಯಿಂದ ತುಂಬಾ ಸುಂದರ. ಆದರೆ ಇದರ ಒಳಹೊಕ್ಕು ನೋಡಿದರೆ ಹಲವರದ್ದು ಹಲವು ಬಗೆಯ ಕಥೆ. ಎಲ್ಲಾ ಟ್ಯಾಲೆಂಟ್ ಇದ್ದರೂ ಈ ಕ್ಷೇತ್ರದಲ್ಲಿ ಕೆಲಸ ಸಿಗುವುದು ಎಷ್ಟು ಕಷ್ಟವೋ, ಯಾವುದೇ ಟ್ಯಾಲೆಂಟ್ ಇಲ್ಲದಿದ್ದರೂ ಇನ್ಫ್ಲುಯೆನ್ಸ್ ಮೇಲೆ ಬರುತ್ತಿರುವವರ ದಂಡೇ ಇರುವುದೂ ಅಷ್ಟೇ ಸತ್ಯ. ಇವುಗಳ ಹೊರತಾಗಿಯೂ, ಇಲ್ಲಿರುವ ಹುಳುಕುಗಳು ಹಲವಾರು. ಅದರಲ್ಲಿಯೂ ನಟಿಯರ ಬದುಕು ಕೂಡ ಇಲ್ಲಿ ಕಷ್ಟವೇ.
ಈಗ ಕಾಲ ಬದಲಾಗಿದ್ದು, ಸಿನಿಮಾ ಮತ್ತು ಕಿರುತೆರೆ ಕ್ಷೇತ್ರಗಳಿಗೆ ಅದರದ್ದೇ ಆದ ಗಾಂಭೀರ್ಯತೆ ಇದ್ದರು ಕೂಡ, ಕೆಲವು ನಟ-ನಟಿಯರಿಗೆ ಆಗುತ್ತಿರುವ ಅನುಭವಗಳು ಭಯಾನಕ ಎನ್ನಿಸುವಂಥದ್ದು ಇರುತ್ತವೆ. ಕೆಲವರು ಅನಿವಾರ್ಯವಾಗಿ ಅದನ್ನೆಲ್ಲಾ ಸಹಿಸಿಕೊಂಡು ಹೋದರೆ, ಮತ್ತೆ ಕೆಲವರಿಗೆ ಮಾತೇ ಶಾಪವಾಗುವುದೂ ಉಂಟು. ಈ ಎರಡನೆಯ ಸಾಲಿಗೆ ಸೇರಿರುವವರು ಪಾಪ ಪಾಂಡು, ಗಿಣಿರಾಮದಂಥ ಹಿಟ್ ಸೀರಿಯಲ್ಗಳನ್ನು ಕೊಟ್ಟಿರುವ ನಟಿ ನಯನಾ ನಾಗರಾಜ್. ಇವರನ್ನು ಕಳೆದ ವರ್ಷ ಧಾರಾವಾಹಿಗಳಿಂದ ಬ್ಯಾನ್ ಮಾಡಿರುವ ವಿಷಯ ಹಲವರಿಗೆ ತಿಳಿದಿರಲಿಕ್ಕಿಲ್ಲ. ಪಾಪ ಪಾಂಡು ಸೀರಿಯಲ್ನಲ್ಲಿ ಎಲ್ಲರನ್ನೂ ನಕ್ಕು ನಗಿಸಿ, ಕೊನೆಗೆ ಸುಮಾರು ಮೂರು ವರ್ಷ ಗಿಣಿರಾಮ ಸೀರಿಯಲ್ನಲ್ಲಿ ನಾಯಕಿಯ ಪಾತ್ರ ಮಾಡಿದ್ದ ನಯನಾ ಸೀರಿಯಲ್ ಪಯಣದಲ್ಲಿ ಅಷ್ಟಕ್ಕೂ ಆಗಿದ್ದೇನು? ಸೀರಿಯಲ್ನವರು ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಈ ಕುರಿತು ನಯನಾ ಅವರು ಕಲಾ ಮಾಧ್ಯಮ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ತಮ್ಮ ಹಲ್ಲು ಸರಿಯಿಲ್ಲದ್ದರಿಂದ ಪಾಪ ಪಾಂಡು ರೋಲ್ಗೆ ತಮ್ಮನ್ನು ತೆಗೆದುಕೊಳ್ಳಲು ಏನೆಲ್ಲಾ ನಡೆಯಿತು ಎಂಬ ಬಗ್ಗೆ ಮಾತನಾಡಿದ ನಟಿ ನಯನಾ, ಕೊನೆಗೆ ಈ ಸೀರಿಯಲ್ನ ನನ್ನ ನಟನೆ ನೋಡಿ, ಬೇಡ ಅಂದವರೇ ಗಿಣಿರಾಮ ಸೀರಿಯಲ್ಗೆ ನಾಯಕಿಯಾಗಿ ಮಾಡಿದ್ರು. ಸುಮಾರು ಮೂರು ವರ್ಷ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ನಟಿಯರ ವಿಷಯಕ್ಕೆ ಬಂದಾಗ, ಕ್ಯಾಮೆರಾ ಹಿಂದುಗಡೆ ಮಾತನಾಡುವವರ ದೊಡ್ಡ ದಂಡೇ ಕೆಲವೊಮ್ಮೆ ಸೃಷ್ಟಿಯಾಗುತ್ತದೆ. ಅದು ಕ್ಯಾರೆಕ್ಟರ್ ಬಗ್ಗೆಯೂ ಹೋಗಿ ಬಿಡುತ್ತದೆ. ಅಂಥದ್ದೇ ಒಂದು ಸನ್ನಿವೇಶ ನನಗೆ ಎದುರಾಯಿತು. ಸೆಟ್ನಲ್ಲಿ ಇದ್ದವರು ಒಬ್ಬರು ಎಲ್ಲರ ಎದುರು ನನಗೆ ಕೆಟ್ಟದ್ದಾಗಿ ಮಾತನಾಡಿದರು. ನಾನು ಹಾಗೆಲ್ಲಾ ನೋಡಿ ಸುಮ್ಮನೇ ಕುಳಿತುಕೊಳ್ಳುವವಳು ಅಲ್ಲ. ಅಲ್ಲೇ ತಿರುಗಿ ಕೊಟ್ಟೆ. ಅಲ್ಲಿಂದಲೇ ಆತನ ಟಾರ್ಚರ್ ಶುರುವಾಯಿತು ಎಂದಿರುವ ನಟಿ ಅವರು ಯಾರು ಎಂದು ಹೇಳಲಿಲ್ಲ.
ಒಂದು ವರ್ಷ ಆತ ನನ್ನ ಬದುಕನ್ನು ನರಕ ಮಾಡಿದ. ಶೂಟಿಂಗ್ಗೆ ಬಂದಾಗ ಪ್ರತಿದಿನ ಹಿಂಸೆ ಕೊಡುತ್ತಿದ್ದ. ಇದನ್ನು ಸಹಿಸಿಕೊಳ್ಳಲು ನನಗೆ ಆಗಲಿಲ್ಲ. ನೇರವಾಗಿ ಚಾನೆಲ್ ಅವರಿಗೆ ದೂರಿದೆ. ಅವರು ಪ್ರೊಡಕ್ಷನ್ ಅವರಿಗೆ ಮಾಹಿತಿ ನೀಡಿದರು. ಪ್ರೊಡಕ್ಷನ್ ಅವರ ಎದುರು ಆತ ನಾನು ಹಾಗೆ ಏನೂ ಮಾಡುತ್ತಿಲ್ಲ ಎಂದು ಹೇಳಿ, ಮತ್ತದೇ ಶುರು ಮಾಡಿಕೊಂಡ. ನನಗೆ ಸಹಿಸಿಕೊಳ್ಳಲು ಆಗಲಿಲ್ಲ. ಸೀರಿಯಲ್ ಬಿಡುವ ನಿರ್ಧಾರ ಮಾಡಿದೆ. ಇದನ್ನು ಚಾನೆಲ್ನವರಿಗೂ ತಿಳಿಸಿದೆ. ನನಗೇ ತುಂಬಾ ಕನ್ವಿನ್ಸ್ ಮಾಡಲು ನೋಡಿದರು. ಆದರೆ ಆತನ ಟಾರ್ಚರ್ ತಡೆದುಕೊಳ್ಳಲು ಆಗ್ತಿರಲಿಲ್ಲ. ಕೊನೆಗೆ ಆರು ತಿಂಗಳು ಕಾಲಾವಕಾಶವನ್ನೂ ಕೊಟ್ಟೆ. ಆಮೇಲೆ ಸೀರಿಯಲ್ ಬಿಟ್ಟೆ.
ಇದರಿಂದ ತಮ್ಮ ಸೀರಿಯಲ್ಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಹೇಳಿ, ನನ್ನ ವಿರುದ್ಧ ದೂರು ಕೊಟ್ಟರು. ಅಲ್ಲಿಂದ ನಾನು ಸೀರಿಯಲ್ ಮಾಡದಂತೆ ನಿಷೇಧ ವಿಧಿಸಲಾಯಿತು ಎಂದು ನಟಿ ನಯನಾ ಹೇಳಿದ್ದಾರೆ. ತೆಲಗುವಿನಿಂದ ಆಫರ್ ಬಂದರೂ ನಾನು ಸೀರಿಯಲ್ ಮಾಡಬಾರದು ಎಂದು ನಿರ್ಧರಿಸಿಬಿಟ್ಟಿದ್ದೆ. ಈಗ ನೆಮ್ಮದಿಯಿಂದ ಇದ್ದೇನೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.