ಪೊಲೀಸರ್ ರುದ್ರನರ್ತನ ನೋಡಿ‌‌ ನನ್ನ ತಾಯಿ ಕುಸಿದು ಬಿದ್ರು, ಸಮೀರ್ ಮನೆಯ ಪರಿಸ್ಥಿತಿ ಯಾರಿಗೂ ಬೇಡ

 | 
Hu
ದಕ್ಷಿಣ ಕನ್ನಡ ಸೌಜನ್ಯ ಪ್ರಕರಣದ ಕುರಿತು ವಿಡಿಯೋ ಮಾಡಿದ್ದ ಧೂತ ಸಮೀರ್ ಎಂಡಿ ವಿರುದ್ಧ ಬಳ್ಳಾರಿಯ ಕೌಲ್ ಬಜಾರ್ ಪೊಲೀಸರು ಎಫ್ಐಆರ್ ದಾಖಲಾಗಿದೆ. ಧರ್ಮಸ್ಥಳ ಕ್ಷೇತ್ರ ಹಾಗೂ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಕೌಲ್ ಬಜಾರ್ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಇನ್ನು ಗೌರೀಶ್ ಮಟ್ಟಣವರ್ ಜೊತೆ ಕಾಣಿಸಿಕೊಂಡ ಅವರು ನನಗೆ ನಿನ್ನೆ ರಾತ್ರಿಯೇ ಪೋಲಿಸರು ಬಂಧಿಸಲು ಬಂದಿದ್ದರು. ನಾನ್ಯಾವ ತಪ್ಪು ಕೂಡ ಮಾಡಿಲ್ಲ. ಯಾರಿಗೂ ನೋವನ್ನು ಕೂಡ ನೀಡಿಲ್ಲ. ನನ್ನ ಬಳಿ ನಾನು ಪಾರಾಗಲು ಬೇಕಾಗಿರುವ ಎಲ್ಲ ಸಾಕ್ಷಿಗಳಿದೆ. ಕೆಲವರು ನನ್ನ ಹಿಂದೆ ಪಿತೂರಿ ಮಾಡ್ತಿದ್ದಾರೆ ಅದರಿಂದ ಹೊರಬರುವ ಮಾರ್ಗಗಳು ನನಗೂ ಇವೆ ಎಂದಿದ್ದಾರೆ.
ಇನ್ನು ಎಫ್‌ಐಆರ್‌ ಪ್ರತಿ ನೀಡದೆಯೇ ವಿಚಾರಣೆ ಹಾಜರಾಗುವಂತೆ ಜಾರಿ ಮಾಡಿದ್ದ ನೋಟಿಸ್‌ ಪ್ರಶ್ನಿಸಿ ಸಮೀರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿ ವಿಚಾರಣೆ ಮುಂದೂಡಿದೆ.
ಅರ್ಜಿದಾರರ ಪರ ವಕೀಲರು ಇಡೀ ವಿಡಿಯೋದಲ್ಲಿ ಯಾವುದೇ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಮಾತುಗಳನ್ನು ಆಡಿಲ್ಲ. ಆದರೂ, ಎಫ್‌ಐಆರ್‌ ಪ್ರತಿ ಇಲ್ಲದೆ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ, ಎಂದು ನ್ಯಾಯಪೀಠಕ್ಕೆ ವಿವರಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.