ಕ್ರಿಶ್ಚಿಯನ್ ಹುಡುಗಿಯನ್ನ ನನ್ನ ಮಗ ಮದುವೆ ಆಗ್ತಾ ಇದ್ದಾನೆ; ತುಂಬಾ ಸಂತೋಷ

 | 
Gg

ಖ್ಯಾತ ನಿರ್ದೇಶಕ ತರುಣ್​ ಸುಧೀರ್​ ಅವರು ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಇದೆ. ಅವರ ಮದುವೆ ಕುರಿತಂತೆ ಕೆಲವು ದಿನಗಳಿಂದ ಸುದ್ದಿ ಹಬ್ಬಿದೆ. ಆ ಬಗ್ಗೆ ಇದೇ ಮೊದಲ ಬಾರಿಗೆ ತರುಣ್​ ತಾಯಿ ಮಾಲತಿ ಸುಧೀರ್​ ಮಾತನಾಡಿದ್ದಾರೆ. ಹೌದು ಸುಮ್ಮನೆ ಸುದ್ದಿ ಪ್ರಸಾರ ಮಾಡಬೇಡಿ ಎಂದಿದ್ದಾರೆ.

ರಾಬರ್ಟ್​ ಸಿನಿಮಾದಲ್ಲಿ ನಿರ್ದೇಶಕ ತರುಣ್​ ಸುಧೀರ್​ ಮತ್ತು ನಟಿ ಸೋನಲ್​ ಮಾಂಥೆರೋ ಅವರು ಒಟ್ಟಾಗಿ ಕೆಲಸ ಮಾಡಿದ್ದರು. ಈಗ ಅವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಕೇಳಿಬಂದಿತ್ತು. ಈ ವಿಷಯದ ಬಗ್ಗೆ ತರುಣ್​ ಅವರ ತಾಯಿ ಮಾಲತಿ ಸುಧೀರ್​ ಅವರು ಮಾತನಾಡಿದ್ದಾರೆ. 

ಮಗನ ಮದುವೆ ಕುರಿತ ಕೇಳಿಬಂದ ವಿಷಯಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ. ನಟಿ ಸೋನಲ್​ ಮಾಂತೆರೋ  ಜೊತೆ ತರುಣ್​ ಸುಧೀರ್​ ಅವರು ಮದುವೆ ಆಗಲಿದ್ದಾರೆ ಎಂಬ ಮಾಹಿತಿ ಹರಿದಾಡಿದೆ. ಮದುವೆ ವಿಚಾರ ಇನ್ನೂ ಖಚಿತ ಆಗಿಲ್ಲ. ಖಚಿತ ಆದ ತಕ್ಷಣ ತರುಣ್​ ಎಲ್ಲರನ್ನೂ ಕರೆಯುತ್ತಾನೆ. ಹುಡುಗಿ ಹುಡುಕುತ್ತಿದ್ದೇವೆ ಎಂದು ಮಾಲತಿ ಸುಧೀರ್​ ಹೇಳಿದ್ದಾರೆ. 

ಸೋನಲ್​ ಹೆಸರು ಪ್ರಸ್ತಾಪಿಸಿದ್ದಕ್ಕೆ ಇನ್ನೂ ಕನ್ಫರ್ಮ್​ ಆಗಿಲ್ಲ. ಈಗ ಆಷಾಡ ಬಂತಲ್ಲ. ಆ ಬಳಿಕ ಒಂದು ದಿನದಲ್ಲಿ ಮದುವೆ ಆಗಿಬಿಡುತ್ತದೆ. ಅವನಿಗೆ ಇನ್ನೂ ಟೈಮ್ ಕೂಡಿ ಬಂದಿಲ್ಲ. ಆಗಸ್ಟ್ 4, 5, 6ಕ್ಕೆ ದಿನಾಂಕ ಫಿಕ್ಸ್​ ಆಗಿದೆ ಎಂಬುದು ಸುಳ್ಳು. ತರುಣ್​ ಯಾರನ್ನು ಬೇಕಾದರೂ ಕರೆದುಕೊಂಡು ಬಂದರೂ ನಾವು ಮದುವೆ ಮಾಡುತ್ತೇವೆ ಎಂದು ಮಾಲತಿ ಸುಧೀರ್​ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.