ಹೊಸ ಜೀವನಕ್ಕೆ ಕಾಲಿಟ್ಟ ನಾಗ ಚೈತನ್ಯ; ಸಮಂತಾ ಕಣ್ಣೀ ರು

 | 
Hs
ನಟಿ ಸಮಂತಾ ಅವರ ಜೊತೆ 4 ವರ್ಷಗಳ ಕಾಲ ದಾಂಪತ್ಯ ನಡೆಸಿ ಡಿವೋರ್ಸ್ ಪಡೆದಿದ್ದ ನಾಗ ಚೈತನ್ಯ ಅವರು ಎರಡನೇ ಮದುವೆಗೆ ರೆಡಿಯಾಗಿದ್ದಾರೆ. ಹೌದು, ಕಳೆದ ಒಂದು ವರ್ಷದಿಂದ ನಾಗ ಚೈತನ್ಯ ಹಾಗೂ ಶೋಭೀತಾ ದುಲಿಪಾಲಾ ಅವರು ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಇಂದು ಈ ಜೋಡಿಯ ನಿಶ್ಚಿತಾರ್ಥ ನಡೆದಿದೆ.
ಕಳೆದ ಒಂದು ವರ್ಷದಿಂದ ನಟ ನಾಗ ಚೈತನ್ಯ, ಶೋಭಿತ ದುಲಿಪಾಲಾ ಅವರು ಡೇಟ್ ಮಾಡುತ್ತಿದ್ದಾರೆ, ಒಟ್ಟಿಗೆ ಟ್ರಿಪ್ ಮಾಡುತ್ತಿದ್ದಾರೆ, ಆದಷ್ಟು ಬೇಗ ಮದುವೆ ಆಗಲಿದ್ದಾರೆ ಎನ್ನಲಾಗಿತ್ತು. ಇಂದು ಇವರಿಬ್ಬರ ನಿಶ್ಚಿತಾರ್ಥ ನಡೆದಿದೆಯಂತೆ.ಹೌದು, 37 ವರ್ಷದ ನಟ ನಾಗ ಚೈತನ್ಯ ಅವರು ತಮ್ಮ ಹೈದರಾಬಾದ್‌ನ ಮನೆಯಲ್ಲಿ ಶೋಭಿತಾರಿಗೆ ಉಂಗುರ ತೊಡಿಸಿದ್ದಾರೆ. 
ಈ ಸಮಾರಂಭದಲ್ಲಿ ಕೆಲವೇ ಕೆಲವು ಜನರು ಭಾಗಿಯಾಗಿದ್ದಾರೆ. ಇಷ್ಟುದಿನವಾದ್ರೂ ಈ ಜೋಡಿ ತಮ್ಮ ಲವ್‌ ಬಗ್ಗೆ ಹೇಳಿಕೊಂಡಿರಲಿಲ್ಲ. ನಿಶ್ಚಿತಾರ್ಥದ ಬಳಿಕ ನಾಗ ಚೈತನ್ಯ, ಶೋಭಿತಾ ಅವರೇ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮೊದಲು ಮಾಹಿತಿ ಕೊಡಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಈಗ ನಿಶ್ಚಿತಾರ್ಥದ ಫೋಟೋ ವೈರಲ್ ಆಗ್ತಿದೆ. ಒಟ್ಟಿನಲ್ಲಿ ಟಾಲಿವುಡ್‌ನಲ್ಲಿ ಇನ್ನೊಂದು ಮದುವೆ ಸಂಭ್ರಮ ಶುರುವಾಗಿದೆ.
ಕಳೆದ ವರ್ಷವೇ ಶೋಭಿತಾ-ನಾಗ ಚೈತನ್ಯ ಡೇಟಿಂಗ್ ಬಗ್ಗೆ ಪರೋಕ್ಷವಾಗಿ ಕಾಮೆಂಟ್ ಮಾಡಿದ್ದ ಸಮಂತಾ, ಯಾರು, ಯಾರು ಡೇಟಿಂಗ್ ಮಾಡುತ್ತಾರೆ ಅಂತ ನಾನು ತಲೆಕೆಡಿಸಿಕೊಳ್ಳಲ್ಲ. ಪ್ರೀತಿಗೆ ಬೆಲೆ ಕೊಡದವರು ಎಷ್ಟು ಜನರ ಜೊತೆ ಡೇಟಿಂಗ್ ಮಾಡಿದರೂ ಕಣ್ಣೀರು ಹಾಕಿಸ್ತಾರೆ ಅನ್ನೋದು ಪಕ್ಕಾ. ಕನಿಷ್ಠ ಆ ಹುಡುಗಿಯಾದರೂ ಖುಷಿ ಆಗಿರಬೇಕು. ಅವರು ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಂಡರೆ, ಹುಡುಗಿಯನ್ನು ನೋಯಿಸದಿದ್ರೆ ಎಲ್ಲರಿಗೂ ಒಳ್ಳೆಯದು ಎಂದು ಹೇಳಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.