ಮದುವೆಯಾದ ಒಂದೇ ತಿಂಗಳಿಗೆ ನಾಗಚೈತನ್ಯ ದಂಪತಿಗಳ ವಿಚ್ಛೇದನ? ಸಮಂತಾ ಗೇಲಿ

 | 
Hj
ನಾಗಚೈತನ್ಯ ಹಾಗೂ ಶೋಭಿತಾ ನಡುವೆ ಇದೀಗ ಬಿರುಗಳಿ ಎದ್ದಿದೆ ಎಂಬ ಹೊಸ ವಿಚಾರ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಹೌದು, ನಾಗ ಚೈತನ್ಯ ಹಾಗೂ ಶೋಭಿತಾ ಅವರು ಇತ್ತಿಚೆಗೆ ಮದುವೆಯಾದ‌‌‌ ಜೋಡಿ, ಈ ಜೋಡಿಯೂ ಪ್ರೀತಿಸಿ‌ ಮದುವೆಯಾದವರು. 
ಇನ್ನು ನಾಗಚೈತನ್ಯ ಬಹುವರ್ಷಗಳ ಹಿಂದೆ ಸಮಂತಾ ಜೊತೆ ಕೂಡ ಪ್ರೀತಿಯಲ್ಲಿ‌‌ ಬಿದ್ದು ಆಕೆಯನ್ನು ಮದುವೆಯಾಗಲು ಮುಂದಾಗಿದ್ದರು. ತದನಂತರ ಈ ಜೋಡಿಯ ಪ್ರೀತಿಗೆ ಕುಟುಂಬದ ಸದಸ್ಯರು ಒಪ್ಪಿಕೊಂಡು ಅದ್ದೂರಿಯಾಗಿ ಮದುವೆಯಾಗಿದರು.‌
ಇ‌‌ನ್ನು‌ ನಾಗಚೈತನ್ಯ ಹಾಗೂ ಸಮಂತಾ ನಡುವೆ ದಿನಕಳೆದಂತೆ ಜಗಳ‌ ಶುರುವಾಯಿತು. ಈ ಇಬ್ಬರ ಜಗಳ ಮುಂದೆ ಡಿವೋರ್ಸ್ ಹಂತಕ್ಕೆ ತಲುಪಿ ಬೇರೆಬೇರೆಯಾಗಬೇಕಾಯಿತು. 
ಇದೀಗ ಶೋಭಿತಾ ಜೊತೆ ಎರಡನೇ ಮದುವೆಯಾಗಿದ್ದ ನಾಗ ಚೈತನ್ಯ, ಮತ್ತೆ ಡಿವೋರ್ಸ್ ಕೊಟ್ರಾ ಎಂಬ ಕುತೂಹಲ ಎದ್ದಿದೆ. ಆದರೆ, ಇದು ಶುದ್ಧ ಸುಳ್ಳು, ಈ ಜೋಡಿ ಈಗಷ್ಟೇ ಮದುವೆಯಾಗಿ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಡಿವೋರ್ಸ್ ಸುದ್ದಿ ಹಬ್ಬಿಸಿ ಗಾಸಿಪ್ ಮಾಡಲಾಗಿದೆ. ಜೊತೆಗೆ ಸಮಂತಾ ಅವರನ್ನು ಈ ಇಬ್ಬರ ಮಧ್ಯೆ ತಂದು ಟ್ರೋಲ್ ಮಾಡುತ್ತಿದ್ದಾರೆ.