ಮಹಿಳೆಗೆ ಡಿ.ಕ್ಕಿ ಹೊಡೆದ ನಾಗಭೂಷಣ್ ಕಾರು, ಸಿಸಿಟಿವಿ ನೋಡಿ ಬೆಚ್ಚಿಬಿದ್ದ ಅಧಿಕಾರಿಗಳು

 | 
ರಬ

ಕನ್ನಡ ಚಿತ್ರರಂಗದ ನಟ ನಾಗಭೂಷಣ ಅವರಿದ್ದ ಕಾರು ಶನಿವಾರ ರಾತ್ರಿ ಡಿಕ್ಕಿಯಾಗಿ, ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರಿನ ವಸಂತನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಕೃಷ್ಣ ಹಾಗೂ ಅವರ ಪತ್ನಿ ಪ್ರೇಮಾ ಅವರು ರಾತ್ರಿ ವಾಕಿಂಗ್‌ ಮಾಡುವಾಗ ನಟ ನಾಗಭೂಷಣ ಅವರಿದ್ದ ಕಾರು ಡಿಕ್ಕಿಯಾಗಿದೆ. 

ಮೊದಲು ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿಯಾಗಿದ್ದು, ನಂತರ ಫುಟ್‌ಪಾತ್‌ ಮೇಲೆ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ಕಾರು ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಪ್ರೇಮಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ನಾಗಭೂಷಣ ಅವರ ವಿರುದ್ಧ ಪ್ರೇಮಾ ಹಾಗೂ ಕೃಷ್ಣ ದಂಪತಿ ಪುತ್ರ ಪಾರ್ಥ ಕೆ ಅವರು ದೂರು ನೀಡಿದ್ದಾರೆ. 

ಪ್ರೇಮಾ, ಕೃಷ್ಣ ಅವರು ಮನೆಯಲ್ಲಿ ಊಟ ಮಾಡಿ, ಫುಟ್‌ ಪಾತ್‌ನಲ್ಲಿ ವಾಕಿಂಗ್ ಮಾಡುತ್ತಿದ್ದರಂತೆ. ಆಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಕೃಷ್ಣ ಅವರಿಗೆ ಹೆಚ್ಚಿನ ಗಾಯ ಆಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯಂತೆ. ಸ್ವತಃ ನಾಗಭೂಷಣ ಅವರೇ ಕಾರ್ ಡ್ರೈವ್ ಮಾಡುತ್ತಿದ್ದರು. ನಾಗಭೂಷಣ ಅವರು ಖಾಸಗಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಮರಳಿ ಮನೆಗೆ ಹೋಗುವಾಗ 9.45ಕ್ಕೆ ಈ ಘಟನೆ ನಡೆದಿದೆ. ಇನ್ನು ನಾಗಭೂಷಣ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. 

ಇನ್ನು ನಾಗಭೂಷಣ ಅವರ ಕಾರ್‌ನ ಮುಂಭಾಗ ಸಂಪೂರ್ಣ ನುಜ್ಜಾಗಿದೆ. ನಾನು ಮನೆಗೆ ಹೋಗುವಾಗ ಫುಟ್‌ಪಾತ್‌ನಿಂದ ಇಬ್ಬರು ಫುಟ್‌ ಪಾತ್‌ನಿಂದ ರಸ್ತೆ ಕೆಳಗೆ ಇಳಿದು ಬಂದರು. ಆಗ ನಾನು ಗಾಬರಿ ಬಿದ್ದು ರಸ್ತೆಯಲ್ಲಿ ಇಳಿದು ಬಂದವರಿಗೆ ಡಿಕ್ಕಿ ಹೊಡೆದು ಆಮೇಲೆ ಫುಟ್‌ ಪಾತ್‌ನಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದೇನೆ. 

ನನ್ನ ಕಾರ್ ಸ್ಟಾರ್ಟ್ ಆಗದ ಕಾರಣ, ಅಲ್ಲಿನವರ ಸಹಾಯ ಪಡೆದು ಆಟೋ ಮಾಡಿಸಿಕೊಂಡು ನಾನು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದೇನೆ. ವೈದ್ಯರು ದಾರಿ ಮಧ್ಯೆ ಮಹಿಳೆ ಸಾವನ್ನಪ್ಪಿರೋದಾಗಿ ಹೇಳಿದ್ದಾರೆ ಎಂದು ನಾಗಭೂಷಣ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.