ನಮ್ರತಾ ಹಾಗೂ ಸ್ನೇಹಿತ್ ಗೌಡ ಮುಖಾಮುಖಿ, ಮುಖ ತಿರುಗಿಸಿಕೊಂಡು ಹೋದ ನಮ್ರತಾ!

 | 
೬೬

ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಬೆಂಕಿ ಅಂತಲೇ ಜನಪ್ರಿಯತೆ ಗಳಿಸಿದ್ದರು ತನಿಷಾ ಕುಪ್ಪಂಡ. ಬಿಗ್‌ಬಾಸ್ ಮನೆಯೊಳಗೆ ತಮ್ಮ ನೇರ ನುಡಿಗಳಿಂದ ವೀಕ್ಷಕರ ಮನಸ್ಸು ಗೆದ್ದಿದ್ದರು. ಇದೀಗ ಬಿಗ್‌ಬಾಸ್ ಮನೆಯಿಂದ ಹೊರ ಬಂದ್ಮೇಲೆ ತಮ್ಮ ಬಹುದಿನದ ಕನಸುಗಳನ್ನು ನನಸು ಮಾಡಿಕೊಳ್ಳುತ್ತಿದ್ದಾರೆ.

ಇದೂವರೆಗೂ ಸಿನಿಮಾ ನಟಿಯಾಗಿ, ಬಿಗ್‌ಬಾಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ತನಿಷಾ ಕುಪ್ಪಂಡ ಈಗ ಉದ್ಯಮಿಯೂ ಆಗಿ ಬಡ್ತಿ ಪಡೆದಿದ್ದಾರೆ. ಕುಪ್ಪಂಡ ಅನ್ನುವ ಹೆಸರಿನಲ್ಲಿ ದೊಡ್ಡ ಮಟ್ಟಕ್ಕೆ ಸಾಧನೆ ಮಾಡಬೇಕು ಅಂತ ಆಸೆ ಪಟ್ಟಿದ್ದ ನಟಿ ಈಗ ಮೊದಲ ಹೆಜ್ಜೆ ಇಟ್ಟಿದ್ದಾರೆ.

ತನಿಷಾ ಕುಪ್ಪಂಡ ಈಗ ಬೆಂಗಳೂರಿನಲ್ಲಿ ಸಿಲ್ವರ್ ಜ್ಯುವೆಲರಿ ಶಾಪ್ ಅನ್ನು ಆರಂಭ ಮಾಡಿದ್ದಾರೆ. ಈ ಮೂಲಕ ಮಹಿಳಾ ಉದ್ಯಮಿಗಳ ಸಾಲಿಗೆ ಸೇರಿಕೊಂಡಿದ್ದಾರೆ. ಈ ಶಾಪ್ ಉದ್ಘಾಟನೆ ಮಾಡುವುದಕ್ಕೆ ಬಿಗ್‌ಬಾಸ್ ಖ್ಯಾತಿಯ ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಅಂದ ಹಾಗೆ ನಟಿಯಾಗಬೇಕು. ಜ್ಯುವೆಲರಿ ಶಾಪ್ ಮುಂದೆ ತನ್ನದೇ ದೊಡ್ಡ ದೊಡ್ಡ ಬ್ಯಾನರ್‌ಗಳು ನಿಲ್ಲಬೇಕು ಅಂತ ಆಸೆ ಪಟ್ಟಿದ್ದರಂತೆ. ಇದು ತನಿಷಾ ಕುಪ್ಪಂಡಗೆ ಸಾಧ್ಯ ಆಗಿರಲಿಲ್ಲವಂತೆ. ಈಗ ಅವರದ್ದೇ ಜ್ಯುವೆಲರಿ ಶಾಪ್‌ ಮುಂದೆ ಆ ಬ್ಯಾನರ್‌ ನಿಂತಿದ್ದು ಆಸೆ ಈಡೇರಿದೆ ಎಂದು ಸಂತಸ ಪಟ್ಟಿದ್ದಾರೆ.

ಈ ಹೊಸ ಜ್ಯುವೆಲರಿ ಶಾಪ್‌ ಬಗ್ಗೆ ಮಿಸ್ಟರ್ ಡಿ ಪಿಕ್ಚರ್ಸ್ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸಂತಸ ಹಂಚಿಕೊಂಡಿದ್ದಾರೆ.ಕುಪ್ಪಂಡ ಅನ್ನೋ ಹೆಸರಲ್ಲಿ ಏನಾದರೂ ದೊಡ್ಡದಾಗಿ ಸಾಧನೆ ಮಾಡಬೇಕು ಅಂತಿದ್ದೆ. ಅದು ತುಂಬಾ ದಿನದ ದೊಡ್ಡ ಕನಸು ಅದು. ಆ ಕನಸು ಇಂದು ನನಸಾಗುತ್ತಿದೆ. ಕುಪ್ಪಂಡ ಸಿಲ್ವರ್ ಜ್ಯುವೆಲರಿಯನ್ನು ನಾವು ಮೊದಲ ಔಟ್‌ಲೆಟ್ ಅನ್ನು ಇವತ್ತು ವಿಜಯ ನಗರದಲ್ಲಿ ಲಾಂಚ್ ಮಾಡುತ್ತಿದ್ದೇವೆ ಎಂದಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕೆ ಆಗಮಿಸಿದ ಸ್ನೇಹಿತ್ ಹಾಗೂ ನಮೃತಾ ಮುಗುಳ್ನಗೆ ಬೀರಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.