ತನಿಷಾಗೆ ಹಿಗ್ಗಾಮುಗ್ಗಾ ಕೊಟ್ಟ ನಮ್ರತಾ ಗೌಡ, ಕಿಚ್ಚನ‌ ವಾರದ ಕಥೆಯಲ್ಲಿ ದೂರು ನೀಡಲು ಮುಂದಾದ ತ.ನಿಷಾ

 | 
ಸಿ

ಈ ವಾರ ಬಿಗ್‌ಬಾಸ್  ಮನೆಯಲ್ಲಿ ವ್ಯವಹಾರದ್ದೇ ಮೇನಿಯಾ. ಖರೀದಿ ಮಾರಾಟದ ವ್ಯವಹಾರವೀಗ ಹೊಸದೊಂದು ಮಜಲು ತಲುಪಿದೆ. ಅದೇನು ಎಂಬುದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ. ಇಷ್ಟು ದಿನ ವ್ಯಕ್ತಿಗಳನ್ನು ಖರೀದಿಸುವ, ಟಾಸ್ಕ್‌ಗಳ ಮೂಲಕ ಹಣ ಸಂಪಾದಿಸುವ ಚಟುವಟಿಕೆಯಲ್ಲಿ ಮುಳುಗಿಹೋಗಿದ್ದ ಸದಸ್ಯರಿಗೆ ಬಿಗ್‌ಬಾಸ್‌ ಹೊಸದೊಂದು ಅವಕಾಶ ನೀಡಿದ್ದಾರೆ.

 ಅದು ಲಕ್ಷುರಿ ಖರೀದಿಸುವ ಅವಕಾಶ ನೀಡಿದೆ.ಮನೆಯ ಸದಸ್ಯರು ಅವರ ಬಳಿ ಇರುವ ಹಣದಿಂದ ದಿನಸಿಗಳನ್ನು ಖರೀದಿಸಬೇಕು. ಯಾರ ಬಳಿ ಇರುವ ಹಣವನ್ನು ದಿನಸಿಗೆ ವ್ಯವಿಸಬೇಕು ಎಂಬಲ್ಲಿ ಮನೆಯ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಲೀಡರ್‌ಗಳ ಬಳಿ ಜಾಸ್ತಿ ಹಣವಿದೆ ಎಂದು ವಿನಯ್‌ ಹೇಳಿದ್ದಾರೆ. ಸಂಗೀತಾ, ಅರ್ಧ ಅರ್ಧ ಶೇರ್ ಮಾಡಿಕೊಳ್ಳೋಣ ಎಂದೂ ಹೇಳಿದ್ದಾರೆ. ಆದರೆ ತನಿಷಾ ಅದಕ್ಕೆ ಒಪ್ಪಿಲ್ಲ.
 
ದಿನಸಿ ಬೇಕಾಗಿರುವುದು ಮನೆಯ ಎಲ್ಲ ಸದಸ್ಯರಿಗೆ. ಹಾಗಾಗಿ ಎಲ್ಲರೂ ಹಣ ವ್ಯಯಿಸಬೇಕು ಎಂಬುದು ಅವರ ವಾದ. ಈ ಹೊತ್ತಿನಲ್ಲಿ ಮಧ್ಯಪ್ರವೇಶಿಸಿದ ನಮ್ರತಾ ವಿರುದ್ಧವೂ ತನಿಷಾ ಹರಿಹಾಯ್ದಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ನಮ್ರತಾ ಹಾಗೂ ತನಿಷಾ ಏಕವನದಲ್ಲಿಯೇ ಕೂಗಾಡಿದ್ದಾರೆ. ಕಿರುಚುತ್ತೀನೇ ಏನೀವಾಗ? ಎಂದು ನಮ್ರತಾ ಅವರು ತನಿಷಾ ಮೈ ಮೇಲೆ ಎರಗಿದ್ದಾರೆ. ಉಳಿದ ಸ್ಪರ್ಧಿಗಳು ಜಗಳವನ್ನು ತಪ್ಪಿಸಲು ಪ್ರಯತ್ನಿಸಿದ್ದಾರೆ.

ನಮ್ರತಾ ಅವರಿಗೆ ತನಿಷಾ ಅವರನ್ನು ಕಂಡರೆ ಅಷ್ಟಕಷ್ಟೆ ಆಗಿತ್ತು. ಕೊಳೆ ಒಳ್ಳೇದಲ್ಲ ಟಾಸ್ಕ್‌ನಲ್ಲಿಯೂ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಎದುರಾಳಿ ತಂಡದ ಮಾಲೀಕರಾದ ತನಿಷಾ ವಿರುದ್ಧ ಸಿಟ್ಟಾದ ನಮ್ರತಾ ಐ ಆಮ್ ಗೋಯಿಂಗ್ ಟು ಸ್ಲಾಪ್ ಹರ್‌. ಎ ಟೈಟ್‌ ಸ್ಲಾಪ್ ಆನ್ ಹರ್ ಫೇಸ್‌ ಎಂದು ಕಿಡಿಕಾರಿದ್ದರು. ಪ್ರತಿ ಬಾರಿ ತನಿಷಾ ಅವರು ಮಾಡಿದ ಆರೋಪ ಹಾಗೂ ಈ ಮಾತುಗಳನ್ನು ಕೇಳುತ್ತಿದ್ದಂತೆ ನಮ್ರತಾ ಅವರು ತಾಳ್ಮೆಯನ್ನು ಕಳೆದುಕೊಳ್ಳುತ್ತಲೇ ಇದ್ದರು.

ನಿಮ್ಮ ವ್ಯಾಲಿಡೇಶನ್‌ ನನಗೆ ಬೇಕಿಲ್ಲ. ನನ್ನ ಹೆಸರು ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಕಂಪೇರ್‌ ಮಾಡಬೇಡಿ. ಮೂರು ವಾರಗಳಿಂದ ಬಾಯಲ್ಲಿ ಆಟ ಆಡೋದಲ್ಲ. ಅಲ್ಲಿ ಇಳಿದು ಆಟವಾಡಬೇಕು. ಮೂರು ವಾರಗಳಿಂದ ಆಡಿ ಪ್ರೂವ್ ಮಾಡೋಕೆ ಆಗಲಿಲ್ಲ. ಮಾತಾಡಿ ಪ್ರೂವ್ ಮಾಡೋದು ಅಂದ್ರೆ ಇದೇ ಎಂದು ಅಬ್ಬರಿಸಿದ್ದರು. ಅತ್ತ ತನಿಷಾ ಕೂಡ ಪ್ರೂವ್‌ ಮಾಡ್ತೀನಿ ಎಂದು ಕೂಗಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.