ಬಿಗ್ ಬಾಸ್ ಮನೆಯಲ್ಲಿ ಅತಿಯಾಯಿತು ನಮ್ರತಾ ಕಾರ್ತಿಕ್ ತುಂಟಾಟ, ವೀಕ್ಷಕರಿಂದ ಅಸಮಾಧಾನ

 | 
B

ಬಿಗ್ಬಾಸ್ 10 ರ ಮನೆಯಲ್ಲಿ ನಾಯಕನನ್ನು ಆಯ್ಕೆ ಮಾಡುವ ವಿಷಯದಲ್ಲಿ ಕಾರ್ತಿಕ್ ಮತ್ತು ಸಂಗೀತಾ ನಡುವೆ ಭಿನ್ನಾಭಿಪ್ರಾಯ ಹುಟ್ಟಿದೆ. ಸಂಗೀತಾ, ನೀನು ಫೇಕ್‌ ಎಂದು ಹೇಳಿದ್ದು ಕಾರ್ತಿಕ್ ಅವರನ್ನು ಘಾಸಿಗೊಳಿಸಿದೆ. ಅಲ್ಲದೆ ಮನೆ ಎರಡು ತಂಡಗಳಾಗಿ ವಿಂಗಡಣೆಯಾಗಿ, ಕಾರ್ತಿಕ್ ಮತ್ತು ಸಂಗೀತಾ ಇಬ್ಬರೂ ನಮ್ರತಾ ಅವರ ನಾಯಕತ್ವದ ಉಗ್ರಂ ತಂಡ ಸೇರಿಕೊಂಡಿದ್ದಾರೆ. 

ನಮ್ರತಾ ತಂಡ ಸೇರಿಕೊಂಡಾಗಿನಿಂದಲೂ ಕಾರ್ತಿಕ್‌ ನಮ್ರತಾ ಜೊತೆಗೆ ತುಸು ಹೆಚ್ಚೆ ಸಲಿಗೆಯಿಂದ ಇರಲು ಶುರುಮಾಡಿದ್ದಾರೆ. ಅಲ್ಲದೆ, ಅವರೊಂದಿಗೆ ಡಾನ್ಸ್‌ ಕೂಡ ಮಾಡಿದ್ದರು.ಇದೀಗ ಕಾರ್ತಿಕ್ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಇಂದು ಬೆಳಿಗ್ಗೆ ಬಿಗ್‌ಬಾಸ್‌ ಮನೆಯ ಕಿಚನ್‌ನಲ್ಲಿ ಎಲ್ಲರೂ ಅಡುಗೆ ಮಾಡುವುದರಲ್ಲಿ ನಿರತರಾಗಿದ್ದರೆ, ಕಾರ್ತಿಕ್, ನಮ್ರತಾ ಜೊತೆಗೆ ಫ್ಲರ್ಟ್‌ ಮಾಡುವುದರಲ್ಲಿ ಮುಳುಗಿದ್ದರು.

 ತಮಾಷೆ ತಮಾಷೆಯಾಗಿಯೇ ಶುರುವಾದ ಮಾತು, ನಮ್ರತಾ ಜೊತೆಗೆ ಡೇಟ್ ಮಾಡುವುದರವರೆಗೂ ಮುಂದುವರಿದಿದೆ. ಅಂದಹಾಗೆ ಅವರು ಡೇಟ್‌ ಮಾಡಲು ಪ್ಲ್ಯಾನ್ ಮಾಡಿರುವುದು ಬೇರೆ ಎಲ್ಲೂ ಅಲ್ಲ, ಬಿಗ್‌ಬಾಸ್‌ ಮನೆಯ ಬಾಲ್ಕನಿಯಲ್ಲಿ ಎಲ್ಲರೂ ಮಲಗಿದ ಮೇಲೆ ಅವರಿಬ್ಬರೂ ಬಹಳ ಸಮಯದ ತನಕ ಮಾತಾಡುತ್ತಾ ಕೂರುತ್ತಾರೆ. ಒಂದಿಷ್ಟು ಮಾತಲ್ಲೇ ಮನೆ ಕಟ್ಟುತ್ತಾರೆ.

ನಿಂಗೆ ಏನ್ ಮಾಡ್ಕೊಡ್ಬೇಕು ಹೇಳು. ನಾನು ಮಾಡ್ಕೊಡ್ತೀನಿ ಎಂದೂ ಕಾರ್ತಿಕ ಕೇಳಿದ್ದಾರೆ. ನಮ್ರತಾ ಅವರೂ ನಗುತ್ತಲೇ ಸ್ಟೈಲಿಶ್ ಆಗಿ, ಟೂ ಡಿಶ್‌ ಲಂಚ್ ಮಾಡೋಣ. ಒನ್ ಇಟಾಲಿಯನ್ ಆಮ್ಲೆಟ್ ಬೇಕು. ಐಸ್‌ಕ್ರೀಮ್ ಕೂಡ ಬೇಕು. ಜೊತೆಗೆ ಒಂದು ಡ್ರಿಂಕ್ ಎಂದು ಹೇಳಿದ್ದಾರೆ. ಆಗ ಕಾರ್ತಿಕ್ ಓ ಐಸ್‌ ಕ್ರೀಮ್ ಆರಾಮಾಗಿ ಮಾಡ್ಬೋದು. ನಾನು ಇಲ್ಲೇ ಮಾಡ್ಕೊಡ್ತೀನಿ.

ಈ ಎಲ್ಲ ಮಾತುಗಳನ್ನು ಕೇಳಿಸಿಕೊಳ್ಳಲು ಸಂಗೀತಾ ಅಲ್ಲಿರಲಿಲ್ಲ ಎನ್ನುವುದು ಬೇರೆ ಮಾತು! ಒಟ್ಟಿನಲ್ಲಿ ಎಲ್ಲರೂ ಮಲಗಿದ ಮೇಲೆ ಇಬ್ಬರು ಮಾತಾಡುತ್ತಾ ಕೂರುವುದರಿಂದ ಇವರು ಹಲವಾರು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.