ಸ್ನೇಹಿತ್ ತಂದೆಯ ಬಗ್ಗೆ ನಮ್ರತಾ ಸಿಡಿಮಿಡಿ, ಮೀಡಿಯಾ ಮುಂದೆ ರಣರಂಗ

 | 
H

ನಮ್ರತಾ ಗೌಡ ಕಳೆದ ವಾರ ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಗೆಲ್ಲುವ ಸ್ಪರ್ಧಿ ಎಂದೇ ನಮ್ರತಾ ಬಿಂಬಿತರಾಗಿದ್ದರು. ಆದರೆ ಮನೆಯಲ್ಲಿರುವವರು, ಹಾಗೂ ಮನೆಯಿಂದ ಹೊರಗೆ ಹೋದ ಕೆಲವರು ಅವರನ್ನು ಹಾದಿ ತಪ್ಪಿಸಿದರಾ ಎಂಬ ಅನುಮಾನ ಪ್ರೇಕ್ಷಕರದ್ದು. ಏನೇ ಇರಲಿ ಈಗ ನಮ್ರತಾ ಮನೆಯಿಂದ ಹೊರಗೆ ಬಂದಿದ್ದಾರೆ. ಇದೀಗ ಹೊರಗೆ ಬಂದ ಬಳಿಕ ಕೆಲವರ ಬಗ್ಗೆ ನಮ್ರತಾರ ಅಭಿಪ್ರಾಯ ಬದಲಾಗಿರಬಹುದು. 

ಹೌದು ಸ್ನೇಹಿತ್ ಹಾಗೂ ನಮ್ರತಾ ನಡುವೆ ಒಂದು ಸ್ನೇಹವಿತ್ತು. ಆದರೆ ಸ್ನೇಹಿತ್ ಮನೆಯಿಂದ ಹೊರಗಡೆ ಹೋದ ಮೇಲೆ ನಮ್ರತಾ‌ ತಮ್ಮ ಆಟವನ್ನು ಬದಲಾಯಿಸಿದರು ಎಲ್ಲರೊಂದಿಗೆ ಕೂಡ ಬೆರೆಯಲು ಶುರು ಮಾಡಿದರು. ಕಾರ್ತಿಕನ್ನು ಗೋಳಾಡಿಸುವುದು ಡೇಟ್‌ಗೆ ಕರೆಯುವುದು ಎಲ್ಲವನ್ನು ಕೂಡ ಮಾಡಿದ್ದರು ಈ ಒಂದು ವರ್ತನೆ ಸ್ನೇಹಿತರಿಗೆ ಇಷ್ಟವಾದಂತೆ ಕಾಣಿಸುತ್ತಿಲ್ಲ. ಇದಕ್ಕಾಗಿ ಬಿಗ್ ಬಾಸ್ ಮನೆಗೆ ಬಂದ ಮೇಲೆ ಸ್ನೇಹಿತ್ ನಮ್ರತಾ ಮೇಲೆ ಕೋಪ ತೋರಿಸುತ್ತಿದ್ದಾರೆ.

ಸ್ನೇಹಿತ್ ಅವರು ಬಿಗ್ ಬಾಸ್ ಶೋನಲ್ಲಿ ಯಾರೂ ಗೆಲ್ಲಬೇಕು ಎಂದು ಕೇಳಿದರೆ ನನ್ನ ಆಯ್ಕೆ ವಿನಯ್ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇತ್ತೀಚಿಗೆ ನಮ್ರತಾ‌ ಡಿಮೋಟಿವ್ ಆಗಿದ್ದಾರೆ ಅವರು ಗೆದ್ದರೆ ನನ್ನಷ್ಟು ಖುಷಿಪಡುವವನು ಯಾರು ಇಲ್ಲ ಎಂಬ ಮಾತನ್ನು ಕೂಡ ಹೇಳಿದ್ದಾರೆ. ಈ ವೇಳೆ ನಮ್ರತಾ ಎಷ್ಟು ಜನರನ್ನ ಗೆಲ್ಲಿಸುತ್ತೀರಾ ಸ್ನೇಹಿತ್ ಎಂದು ಪ್ರಶ್ನೆ ಮಾಡಿದ್ದಾರೆ.

ಅಲ್ಲದೆ ನನ್ನ ಒಪ್ಪಿಗೆಯಿಲ್ಲದೆ ಸ್ನೇಹಿತ್ ಅವರ ತಂದೆ ನಾನು ಅವರ ಮನೆಯ ಸೊಸೆ ಆಗುವೆ ಎಂದಿದ್ದು ಸರಿಯಲ್ಲ. ನನಗೆ ಮದುವೆಯ ಬಗ್ಗೆ ನಂಬಿಕೆಯೇ ಹೊರಟು ಹೋಗಿದೆ. ಹಾಗಾಗಿ ಮದುವೆಗೆ ಎಂದು ಉಳಿಸಿದ್ದ ಹಣದಲ್ಲಿ ಮನೆ ಕಟ್ಟಿಸಿದ್ದೇನೆ. ಅಲ್ಲದೆ ಸ್ನೇಹಿತ್ ಕೂಡ ಈಗ ನನಗೆ ಸ್ನೇಹಿತ ಮಾತ್ರ ಅದರ ಹೊರತಾಗಿ ಬೇರೇನೂ ಇಲ್ಲ ಎಂದು ಕಡ್ಡಿ ಮುರಿದಂತೆ ನುಡಿದಿದ್ದಾರೆ ನಮೃತಾ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.