ಅವತ್ತು ಮನೆಬಿಟ್ಟು ಓಡಿಹೋಗಿದ್ದ ನಯನಾ; ಮದುವೆ ಮುನ್ನ ಗಂಡ ಕೇಳಿದ್ದ ಆ ಅನುಮಾನ
Sep 2, 2024, 20:10 IST
|
ಇತ್ತೀಚಿಗೆ ನಟಿ ನಯನಾ ತಮ್ಮ ಜೀವನದ ಪ್ರತಿಯೊಂದು ಕ್ಷಣದ ಬಗ್ಗೆ ತಾವು ಬದುಕಿನಲ್ಲಿ ಕಂಡ ಏರಿಳಿತಗಳು..ನೋವು ನಲಿವುಗಳ ಬಗ್ಗೆ ರಾಜೇಶ್ ಗೌಡ ಯುಟ್ಯೂಬ್ ಚಾನೆಲ್‌ನ ಸಂದರ್ಶನಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಈ ಸಂದರ್ಶನಲ್ಲಿ ನಟಿ ನಯನಾ ತಮ್ಮ ತಂದೆ ಬಗ್ಗೆ ಮಾತನಾಡಿದ್ದು, ಅವರನ್ನು ನೆನಪಿಸಿಕೊಂಡರೆ ಹಿಟ್ಲರ್ ನೆನಪಿಗೆ ಬರುತ್ತಾರೆ ಎಂದಿದ್ದಾರೆ.
ನಿಮ್ಮ ಜೀವನದಲ್ಲಿ ವಿಲನ್‌ಗಳು ಯಾರಿಲ್ವಾ ಎನ್ನುವ ರಾಜೇಶ್ ಗೌಡ ಅವರ ಪ್ರಶ್ನೆಗೆ ನಟಿ ನಯನಾ ನೇರವಾಗಿ 'ನಮ್ಮ ಡ್ಯಾಡಿ' ಎಂದು ಉತ್ತರಿಸಿದ್ದಾರೆ. ನಾನು ನನ್ನ ತಮ್ಮ ಇಬ್ಬರು ಮಕ್ಕಳು. ಆದರೆ ನಾವು ಜಾಯಿಂಟ್ ಫ್ಯಾಮಿಲಿ. ನಮ್ಮ ಅಪ್ಪನ ಜೊತೆ ನಾವು ಒಂದು ಒಳ್ಳೆ ದಿನಗಳು ಅಂತಾ ಕಳೆದಿಲ್ಲ. ಶಾಲೆಯಲ್ಲಿ ನಾನು ಮಾಡದ ತಪ್ಪಿಗೆ ತುಂಬಾ ಜೋರಾಗಿ ಒದೆ ತಿಂದಿದ್ದೇನೆ. ಬಾಲ್ಯದ ಬಗ್ಗೆ ತುಂಬಾ ನೋವಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ನನ್ನ ತಮ್ಮ ಇವತ್ತಿಗೂ ಫೋನ್ ಮಾಡಿದ್ರೆ ಇದೇ ವಿಷಯಗಳನ್ನು ಮಾತನಾಡುತ್ತೇವೆ. ತುಂಬಾ ಮಿಸ್ ಮಾಡಿಕೊಳ್ತೇನೆ ಕಣೋ ನಾನು ನಿನ್ನ ಅಂತಾ ನಾನು ಹೇಳ್ತೀನಿ. ಅವನು ಹೇಳ್ತಾನೆ. ನಮ್ಮ ಇಬ್ಬರಿಗೂ ಇವತ್ತಿಗೂ ಆ ಕೊರಗಿದೆ. ಎಲ್ಲಾರೂ ಅಪ್ಪ- ಅಮ್ಮನು ಅವರು ಮಕ್ಕಳನ್ನು ಎಷ್ಟು ಚೆನ್ನಾಗಿ ಮಾತನಾಡಿಸುತ್ತಾರೆ. ಎಷ್ಟು ಚೆನ್ನಾಗಿ ಹುರಿದುಂಬಿಸುತ್ತಾರೆ. ನಮಗೆ ಯಾಕೆ ಈ ತರ ಎಂದು ನಯನಾ ಕಣ್ಣೀರಿಟ್ಟಿದ್ದಾರೆ.
ಆಮೇಲೆ ನಂಗೆ ಎಲ್ಲಾರೂ ಹೇಳುತ್ತಿದ್ದರು. ನಿನ್ನ ತಮ್ಮಾ ಎಷ್ಟು ಚೆನ್ನಾಗಿ ಓದುತ್ತಾನೆ. ನೀನು ಓದಲ್ಲ..ನೀನು ಬರೆಯಲ್ಲಾ.. ಅಂತೆಲ್ಲಾ ಅನ್ನೋರು. ಆದರೆ ನಂಗೆ ಖುಷಿ ಆಗೋದು. ನಾನು ಮನೆ ಬಿಟ್ಟು ಹೋಗಬೇಕಾದರೆ, ನನ್ನ ತಮ್ಮ ನನ್ನನ್ನು ಕೇಳಿದ್ದು ಒಂದೇ ಪ್ರಶ್ನೆ ಅವರ ಮನೆಯಲ್ಲಿ ಸುಖವಾಗಿ ಇರುತ್ತೀಯಾ..? ಚೆನ್ನಾಗಿ ನೋಡಿಕೊಳ್ಳುತ್ತಾರಾ ನಿನ್ನನ್ನ..?
ಅವನು ಅಪ್ಪನ ತರ ಅಲ್ವಾ ಎಂದು ಕೇಳಿದ್ದ.. ಆ ಸಮಯದಲ್ಲಿ ನನಗೆ ಏನು ಉತ್ತರ ಕೊಡಬೇಕೋ ಗೊತ್ತಾಗಿಲ್ಲ ಎಂದು ನಟಿ ನಯನಾ ಕಣ್ಣೀರು ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.