ಮಣ್ಣಲ್ಲಿ ಮಣ್ಣಾದ ನೇಹ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

 | 
ಬಬ

ಪ್ರೀತಿಯ ಮಾಯೆಯೋ ಇಲ್ಲ ಲವ್ ಜಿಹಾದ್ ವಿಷ ಸಂಕೋಲೆಯೋ ಅರಿಯದೆ ಹೆಣವಾಗಿ ಮಲಗಿದ ನೇಹಾ ಮಾತ್ರ ನಿಜಕ್ಕೂ ಅಮಾಯಕಳು.ಇಲ್ಲಿನ ಬಿವಿಬಿಕಾಲೇಜು‌ ಕ್ಯಾಂಪಸ್​‌ನಲ್ಲಿ ಗುರುವಾರ ಸಂಜೆ ದುಷ್ಕರ್ಮಿಯಿಂದ ಬರ್ಬರವಾಗಿ ಕೊಲೆಯಾದ ನೇಹಾ ಹಿರೇಮಠ ಮೃತದೇಹದ ಅಂತ್ಯಸಂಸ್ಕಾರ ಸಾವಿರಾರು ಜನರ ಸಮ್ಮುಖದಲ್ಲಿ ನೆರವೇರಿತು.‌ 

ನಗರದ ಮಂಟೂರು ರೋಡ್​​ನಲ್ಲಿರುವ ರುದ್ರಭೂಮಿಯಲ್ಲಿ ವೀರಶೈವ ಜಂಗಮ ವಿಧಿವಿಧಾನಗಳಂತೆ ಕುಟುಂಬಸ್ಥರು ಅಂತ್ಯಸಂಸ್ಕಾರ ನಡೆಸಿದರು.ಇದಕ್ಕೂ ಮುನ್ನ ಮೃತದೇಹದ ಅಂತಿಯ ಯಾತ್ರೆ ನಡೆಯಿತು. ಬಸವ ನಗರದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಅಂತಿಮ ಯಾತ್ರೆ, ಮಂಟೂರು ರಸ್ತೆಯಲ್ಲಿರುವ ಸ್ಮಶಾನಕ್ಕೆ ಆಗಮಿಸಿತು.

 ಮೂರುಸಾವಿರ ಮಠದ ಗುರು ಸಿದ್ದರಾಜಯೋಗೀಂದ್ರ ಸ್ವಾಮೀಜಿ, ಫಕೀರ ದಿಂಗಾಲೇಶ್ವರ ಸ್ವಾಮೀಜಿ‌ ಸೇರಿದಂತೆ ಸಾವಿರಾರು ಜನರು ಅಂತಿಮ ದರ್ಶನ ಪಡೆದರು.‌ಮತ್ತೊಂದೆಡೆ, ಎಬಿವಿಪಿ ಕಾರ್ಯಕರ್ತರು ಬಿವಿಬಿ ಕಾಲೇಜು ಎದುರು ಮುಖ್ಯರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ನೇಹಾ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

 ಜಸ್ಟಿಸ್ ಫಾರ್ ನೇಹಾ ಎಂದು ಘೋಷಣೆ ಕೂಗಿದರು. ಹಂತಕ ಫಯಾಜ್‌ನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು. ಆದರೆ ಒಂದಿಷ್ಟು ತಪ್ಪು ಮಾಡದ ನೇಹಾ ಮಾತ್ರ ಮಣ್ಣಲ್ಲಿ ಮಣ್ಣಾಗಿ ಹೋದಳು. ಈಗಲೂ ತಪ್ಪಿಗೆ ಶಿಕ್ಷೆ ನೀಡದೆ ಹೋದರೆ ಮುಂದಿನ ದಿನಗಳಲ್ಲಿ ಭದ್ರತೆ ಇಲ್ಲದೆ ಹಲವಾರು ಮಹಿಳೆಯರ ಜೀವನ ಕೊನೆಯಾಗುವುದರಲ್ಲಿ ಅನುಮಾನವಿಲ್ಲ .

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.