ಬಹು ಅಪರೂಪದ ಮಗುವಿಗೆ ಜಗತ್ತಿನ ಅತ್ಯಂತ ಸುಂದರವಾದ ಹೆಸರಿಟ್ಟ‌‌ ನೇಹಾ ಗೌಡ ದಂಪತಿ

 | 
Hs
ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ನಟಿ ನೇಹಾ ಗೌಡ ಮನೆಮಗಳಿದ್ದಂತೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಾಯಕಿ ಗೊಂಬೆ ಉರುಫ್ ಶ್ರುತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನೇಹಾ ಗೌಡ ಸಹಜ ನಟನೆಯ ಮೂಲಕ ಜನಮನ ಗೆದ್ದ ಬೆಡಗಿ‌. ಇಂದು ಈಕೆ ಕಿರುತೆರೆಯಿಂದ ದೂರವಿದ್ದರೂ ಪ್ರೇಕ್ಷಕರಿಗೆ ಮಾತ್ರ ಅಚ್ಚುಮೆಚ್ಚು ಎಂದರೆ ತಪ್ಪಾಗಲಾರದು.
ಎರಡು ವರ್ಷದ ಹಿಂದೆ ತನ್ನ ಬಾಲ್ಯ ಗೆಳೆಯನಾದ ಚಂದನ್ ಗೌಡ ಅವರನ್ನು ವರಿಸಿದ ನಟಿ ನೇಹಾ ಗೌಡ ಬಿಗ್ ಬಾಸ್, ರಾಜ ರಾಣಿ ಸೇರಿದಂತೆ ಒಂದೆರಡು ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡರು. ಇದೀಗ ಮುದ್ದಾದ ಹೆಣ್ಣು ಮಗುವಿಗೆ ತಾಯಿಯಾಗಿರುವ ನಟಿ ಇತ್ತೀಚೆಗಷ್ಟೇ ಮಗುವಿಗೆ ನಾಮಕರಣ ಮಾಡಿದ್ದಾರೆ.ನೇಹಾ ಗೌಡ - ಚಂದನ್ ದಂಪತಿಗೆ ಅವರ ಇಚ್ಛೆಯಂತೆ ಹೆಣ್ಣು ಮಗು ಆಗಿರುವುದು ಬಹಳ ಸಂತಸ ತಂದಿದೆ.
 2024 ನವೆಂಬರ್ ನಲ್ಲಿ ಹುಟ್ಟಿದ ಇವರ ಮಗುವಿಗೆ ಇದೀಗ ನಾಮಕರಣ ಮಾಡಿದ್ದು ಬಹಳ ಸಾಂಪ್ರದಾಯಿಕ ಹೆಸರನ್ನು ಇಟ್ಟಿದ್ದಾರೆ ನಟಿ ನೇಹಾ ಗೌಡ. ಹೌದು, ತನ್ನ ಮಗುವಿನ ನಾಮಕರಣದ ವಿಚಾರವಾಗಿ ಒಂದಷ್ಟು ಮಾಹಿತಿ ಹಾಗೂ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ನೇಹಾ ಹಾಗೂ ಚಂದನ್ ಗೌಡ ದಂಪತಿ.
ತಮ್ಮ ಮುದ್ದಾದ ಹೆಣ್ಣು ಮಗುವಿಗೆ ಶಾರದಾ ಎಂದು ನಾಮಕರಣ ಮಾಡಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ತಿಳಿಯುತ್ತಿದ್ದಂತೆ ಫ್ಯಾನ್ಸ್ ಬಹಳ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈಗಂತೂ ಎಲ್ಲರೂ ತಮ್ಮ ಮಕ್ಕಳಿಗೆ ಬಹಳ ನವ ನವೀನ ಹಾಗೂ ವಿಭಿನ್ನ ಹೆಸರನ್ನು ಇಡುವ ಟ್ರೆಂಡ್‌ನಲ್ಲಿದ್ದಾರೆ. ಬಹಳ ಚಿಕ್ಕದಾಗಿ ಯಾರೂ ಕೇಳಿರದ ಹೆಸರುಗಳೇ ಇಂದು ಟ್ರೆಂಡ್‌ನಲ್ಲಿದೆ. ಹೀಗಿರುವಾಗ ನಟಿ ನೇಹಾ ಗೌಡ ಅವರು ತಮ್ಮ ಮಗುವಿಗೆ ಶಾರದಾ ಎಂಬ ಬಹಳ ಸಾಂಪ್ರದಾಯಿಕ ಹೆಸರನ್ನು ಇಟ್ಟು ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.