ಚಂದನ್ ಗೆ ಕೈಕೊಟ್ಟ ಬಳಿಕ ನಿವೇದಿತಾ ಅವತಾರಕ್ಕೆ ನೆಟ್ಟಿಗರ ಬಗೆಬಗೆಯ ಕಾ ಮೆಂಟ್

 | 
Js

ಚಂದನ್ ಶೆಟ್ಟಿ ಜೊತೆ ಡೈವೋರ್ಸ್ ಆದ ದಿನದಿಂದ ನಿವೇದಿತಾ ಮೇಲೆ ಅಭಿಮಾನಿಗಳು ಕೆಂಡ ಕಾರುತ್ತಿದ್ದಾರೆ. ನಟಿ ನಿವೇದಿತಾ ಗೌಡ ಅವರು ಸಿನಿಮಾಗಾಗಿ ಮೇಕಪ್ ಮಾಡಿಸಿಕೊಂಡು ವಿಡಿಯೋ ಶೇರ್ ಮಾಡಿದರೆ, ನಿನ್ನ ವೈಯಾರ,ನಿನ್ನ ಸ್ವಭಾವ ನೋಡಿದ್ರೆ ವಾಕರಿಕೆ ಬರುತ್ತೆ ಎಂದು ನೆಟ್ಟಿಗರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ.

ಸ್ಯಾಂಡಲ್‌ವುಡ್ ಕ್ಯೂಟ್ ಕಪಲ್ ಆಗಿದ್ದ ಚಂದನ್ ಶೆಟ್ಟಿ - ನಿವೇದಿತಾ ಗೌಡ ದಾಂಪತ್ಯದಿಂದ ದೂರವಾಗಿ ತಿಂಗಳು ಕಳೆದಿದೆ. ಸ್ವತಃ ದಂಪತಿಯೇ ದೂರವಾಗಿ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ನೆಟ್ಟಿಗರು ಮಾತ್ರ ಇಬ್ಬರ ಮೇಲಿನ ಕೋಪವನ್ನು ಮಾತ್ರ ಮರೆಯುತ್ತಿಲ್ಲ. ಸಿನಿಮಾ ಪಾತ್ರವೊಂದಕ್ಕೆ ಮೇಕಪ್ ಮಾಡಿಸಿಕೊಳ್ಳುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಅದಕ್ಕೆ ಅಭಿಮಾನಿಗಳು ನಿನ್ನ ವೈಯಾರ,ನಿನ್ನ ಸ್ವಭಾವ ನೋಡಿದ್ರೆ ವಾಕರಿಕೆ ಬರುತ್ತೆ ಎಂದು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಟಿಕ್‌ಟಾಕ್ ಆಪ್ ಇದ್ದಾಗ ಮಾರುದ್ದ ಜಡೆ, ತೆಳ್ಳಗಿನ ಮೈಕಟ್ಟು, ದಂತದ ಗೊಂಬೆಯಂತೆ ತಿದ್ದಿ ತೀಡಿ ಆರ್ಡರ್ ಕೊಟ್ಟು ಮಾಡಿಸಿದಂತಹ ಸುಂದರಿ ಆಗಿದ್ದ ನಿವೇದಿತಾ ಗೌಡ ಅಷ್ಟೇ ಮುಗ್ದೆಯೂ ಆಗಿದ್ದಳು. ನಿವೇದಿತಾ ಗೌಡ ವಿಡಿಯೋ ಮಾಡಿ ಶೇರ್ ಮಾಡಿದರೆ ಲಕ್ಷಾಂತರ ಜನರು ನೋಡಿ ಲೈಕ್ ಮಾಡುತ್ತಿದ್ದರು. 

ಆದರೆ, ಟಿಕ್‌ಟಾಕ್ ಬ್ಯಾನ್ ಆದ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತಾ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದರು. ಹೀಗಿರುವಾಗ ಬಿಗ್‌ಬಾಸ್ ಮನೆಗೆ ಸೆಲೆಬ್ರಿಟಿಗಳು ಮಾತ್ರವಲ್ಲ ಸಾಮಾನ್ಯ ಸಾರ್ವಜನಿಕರಿಗೂ ಅವಕಾಶ ನೀಡಲಾಗುತ್ತದೆ ಎಂಬ ಥೀಮ್‌ನಲ್ಲಿ ಟಿಕ್‌ಟಾಕ್ ರೀಲ್ಸ್‌ನಿಂದ ಫೇಮಸ್ ಆಗಿದ್ದ ನಿವೇದಿತಾ ಗೌಡಗೂ ಅವಕಾಶ ಸಿಕ್ಕಿತ್ತು.

ಬಿಗ್‌ಬಾಸ್ ಮನೆಗೆ ಬಂದ ನಿವೇದಿತಾ ಗೌಡ ಮೇಲೆ ರ್ಯಾಪರ್ ಚಂದನ್ ಶೆಟ್ಟಿಗೆ ಕ್ರಶ್ ಆಗಿತ್ತು. ಆದರೆ, ಬಿಗ್‌ಬಾಸ್ ಮನೆಯಲ್ಲಿ ಇದನ್ಯಾವುದನ್ನೂ ತೋರ್ಪಡಿಸದೇ ಸೈಲೆಂಟ್ ಆಗಿದ್ದ ಜೋಡಿ, ಬಿಗ್‌ಬಾಸ್ ರಿಯಾಲಿಟಿ ಶೋ ಮುಗಿಯುತ್ತಿದ್ದಂತೆಯೇ ಒಟ್ಟಿಗೆ ಕಾಣಿಸಿಕೊಂಡು ಪ್ರೀತಿಯಲ್ಲಿ ಬಿದ್ದಿರುವುದನ್ನು ಹೊರಗೆಡವಿದ್ದಾರೆ. ಇದಾದ ನಂತರ ಮೈಸೂರು ದಸರಾ ಮಹೋತ್ಸವದಲ್ಲಿ ಇಬ್ಬರೂ ಪ್ರೇಮ ನಿವೇದನೆ ಮಾಡಿಕೊಂಡು, ಮನೆಯವರ ಒಪ್ಪಿಗೆ ಪಡೆದು ಅದ್ಧೂರಿಯಾಗಿ ಮದುವೆಯಾಗಿ ಕೆಲ ವರ್ಷ ಸಂಸಾರವನ್ನೂ ಮಾಡಿದ್ದಾರೆ.

ದಂತದ ಗೊಂಬೆಯಂಥಿದ್ದ ನಿವೇದಿತಾ ಗೌಡಳನ್ನು ಮದುವೆಯಾದ ಚಂದನ್‌ಶೆಟ್ಟಿ ಅದೃಷ್ಟವಂತ ಎಂದು ಹೇಳುವವರೂ ಸಾಕಷ್ಟಿದ್ದರು. ಇದಾದ ನಂತರ ಕೆಲವು ರಿಯಾಲಿಟಿ ಶೋಗಳು, ಕಿರುತೆರೆ ಕಾರ್ಯಕ್ರಮಗಳನ್ನು ಕಾಣಿಸಿಕೊಂಡ ನಿವೇದಿತಾ ಗೌಡಗೆ ಮದುವೆ ಆಗಿದ್ದರೂ ಸಂಸಾರ ನಡೆಸುವ ಕಲೆ ಸಿದ್ಧಿಸಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಆಗ ನಿವೇದಿತಾ ಗೌಡಗೆ ಚಂದನ್‌ಶೆಟ್ಟಿಯಂತಹ ಗಂಡ ಸಿಕ್ಕಿರುವುದು ಆಕೆಯ ಪುಣ್ಯ ಎಂದು ಹೇಳುತ್ತಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.