ಕಾರು ಬೈಕ್ ಇದ್ದವರಿಗೆ ಇವತ್ತಿನಿಂದ ಹೊಸ ರೂಲ್ಸ್ ಜಾರಿ, ಕಟ್ಟುನಿಟ್ಟಿನ ನಿಯಮ ಕೇಳಿ ರೊ ಚ್ಚಿಗೆದ್ದ ಜನರು
ಅಕ್ಟೋಬರ್ 1 ರಿಂದ ಕರ್ನಾಟಕ ಸರ್ಕಾರವು ಹೊಸ ಟ್ರಾಫಿಕ್ ಮತ್ತು ಆರ್‌ಟಿಓ ನಿಯಮಗಳ ಕಟ್ಟುನಿಟ್ಟಿನ ಜಾರಿ ಆರಂಭಿಸಿದೆ. ವಿಶೇಷವಾಗಿ ಹೈ-ಸಿಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳು ಅಂದರೆ HSRP ಬೋರ್ಡ್ ಕಡ್ಡಾಯವಾಗಿ ಅಳವಡಿಸದ ವಾಹನ ಮಾಲೀಕರ ವಿರುದ್ಧ ದಂಡ ವಿಧಿಸಲಾಗುವುದು.
ಹೈ-ಸಿಕ್ಯುರಿಟಿ ನಂಬರ್ ಪ್ಲೇಟ್‌ಗಳು ವಾಹನ ಕಳ್ಳತನ ತಡೆಗಟ್ಟಲು ಹಾಗೂ ರಸ್ತೆ ಸುರಕ್ಷತೆ ಹೆಚ್ಚಿಸಲು ಸಹಕಾರಿ. ಇವುಗಳಲ್ಲಿ ಲೇಸರ್ ಕೋಡ್ ಹಾಗೂ ಬಿಗಿಯಾಗಿ ಅಳವಡಿಸಿದ ಲಾಕ್ ಇರುತ್ತದೆ. ಇದರಿಂದ ಪ್ಲೇಟ್ ಅನ್ನು ಸುಲಭವಾಗಿ ತೆಗೆದು ಹಾಕುವುದು ಅಥವಾ ನಕಲಿ ಮಾಡುವುದು ಅಸಾಧ್ಯ. ಕರ್ನಾಟಕ ಸೇರಿ ಹಲವಾರು ರಾಜ್ಯಗಳು ಈಗ ಎಲ್ಲಾ ವಾಹನಗಳಿಗೆ HSRP ಕಡ್ಡಾಯಗೊಳಿಸಿವೆ
ಅಕ್ಟೋಬರ್ 1ರಿಂದ ಹೈ-ಸಿಕ್ಯುರಿಟಿ ನಂಬರ್ ಪ್ಲೇಟ್ HSRP ಇಲ್ಲದ ವಾಹನಗಳಿಗೆ ದಂಡ ವಿಧಿಸಲಾಗುವುದು. ದ್ವಿಚಕ್ರ ವಾಹನಗಳಿಗೆ ₹500 ದಂಡ ಹಾಗೂ ನಾಲ್ಕು ಚಕ್ರ ವಾಹನಗಳಿಗೆ ₹1,000 ದಂಡ ನಿಗದಿಯಾಗಿದೆ. ಇನ್ನು ಮುಂದೆ ಅಳವಡಿಸಲು ಕಾಯುತ್ತಿದ್ದೇನೆ ಎಂಬ ಕಾರಣವನ್ನು ಪೊಲೀಸರು ಸ್ವೀಕರಿಸುವುದಿಲ್ಲ.
ಅಷ್ಟಕ್ಕೂ HSRP ಪ್ಲೇಟ್ ಪಡೆಯುವುದು ತುಂಬಾ ಸರಳ. ವಾಹನ ಮಾಲೀಕರು ಅಧಿಕೃತ ಡೀಲರ್ ಅಥವಾ RTO ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿ, ಆನ್‌ಲೈನ್ ಮೂಲಕ ಪಾವತಿ ಮಾಡಬೇಕು. ನಂತರ ನಿಗದಿತ ದಿನಾಂಕದಲ್ಲಿ ಡೀಲರ್ ಅಥವಾ RTO ಕಚೇರಿಗೆ ಭೇಟಿ ನೀಡಿ ಪ್ಲೇಟ್ ಅಳವಡಿಸಿಕೊಳ್ಳಬಹುದು.