ಮದುವೆಯಾದ ತಿಂಗಳ ಮುನ್ನವೇ ಸಿಹಿಸುದ್ದಿ ಕೊಟ್ಟ ನಿಖಿಲ್ ಹಾಗೂ ಮಧು; ಕನ್ನಡಿಗರು ಫಿದಾ
Nov 19, 2024, 19:14 IST
|
ದಿನದಿಂದ ದಿನಕ್ಕೆ ಯುಟ್ಯೂಬ್‌ನಲ್ಲಿ ಕನ್ನಡ ವಿಡಿಯೋಗಳನ್ನು ಕ್ರಿಯೇಟ್ ಮಾಡುವ ಕ್ರಿಯೇಟಿವ್ ಮೈಂಡ್‌ಗಳು ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಸ್ನೇಹಿತರು, ಅಮ್ಮ ಮಗಳು, ಗಂಡ ಹೆಂಡತಿ ಅಥವಾ ಗರ್ಲ್ ಫ್ರೆಂಡ್ ಬಾಯ್‌ಫ್ರೆಂಡ್ ಸೇರ್ಕೊಂಡು ವಿಡಿಯೋ ಮಾಡ್ತಾರೆ...ಆದರೆ ಇಲ್ಲಿ ಅಣ್ಣ ತಂಗಿ ವಿಡಿಯೋ ಮಾಡಿ ಫೇಮಸ್ ಆಗಿದ್ದಾರೆ.
ಬೇರೆಯವರ ಬಗ್ಗೆ ಅಪಹಾಸ್ಯ ಮಾಡುವ ಈ ಕಾಲದಲ್ಲಿ ತಮ್ಮ ಬಗ್ಗೆ ತಾವೇ ಹಾಸ್ಯ ಮಾಡಿಕೊಂಡು ಜನರು ನಗಿಸುತ್ತಾರೆ.ಕೊರೋನಾ ಲಾಕ್ ಡೌನ್ ಸಮಯದಲ್ಲಿ ನಿಖಿಲ್ ರವೀಂದ್ರ ಮತ್ತು ನಿಶಾ ರವೀಂದ್ರ ವಿಡಿಯೋಗಳು ಸಖತ್ ವೈರಲ್ ಆಯ್ತು. ಈಗ ಲಕ್ಷಾಂತ ಫಾಲೋವರ್ಸ್ ಹೊಂದಿದ್ದಾರೆ. ಹೌದು! ಯುಟ್ಯೂಬ್‌ನಲ್ಲಿ ಸುಮಾರು 9 ಲಕ್ಷದ 55 ಸಾವಿರ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದು, ಇನ್‌ಸ್ಟಾಗ್ರಾಂನಲ್ಲಿ 1 ಲಕ್ಷ ಮೂವತ್ತು ಸಾವಿರ ಫಾಲೋವರ್ಸ್ ಇದ್ದಾರೆ.
ಹೀಗಾಗಿ ಅಣ್ಣ ತಂಗಿ ಕ್ರಿಯೇಟ್ ಮಾಡುವ ಪ್ರತಿಯೊಂದು ವಿಡಿಯೋ ಮಿಲಿಯನ್ ಅಂದ್ರೆ 10 ಲಕ್ಷಕ್ಕೂ ಕಡಿಮೆ ವೀಕ್ಷಣೆ ಇರುವುದಿಲ್ಲ. ಈ ಆದಾಯದಿಂದ ಅಣ್ಣ ತಂಗಿ ಮೈಸೂರಿನಲ್ಲಿ ಎರಡು ಅಂತಸ್ತಿನ ಮನೆ ಖರೀದಿಸಿದ್ದಾರೆ. ಮನೆ ಪಕ್ಕದಲ್ಲಿ ಸಣ್ಣದಾಗಿ ಗಾರ್ಡನ್ ಮಾಡಿಕೊಂಡು ಎರಡು ನಾಯಿಗಳನ್ನು ಸಾಕುತ್ತಿದ್ದಾರೆ. ಇದನ್ನು ಹೊರತಾಗಿ ಫಾರ್ಮಸಿ ಕೂಡ ಹೊಂದಿದ್ದಾರೆ. ಸದ್ಯದಲ್ಲಿ ಬೆಂಗಳೂರಿನಲ್ಲಿ ಜಿಮ್ ಓಪನ್ ಮಾಡುವ ಪ್ಲ್ಯಾನ್ ಕೂಡ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ನಿಖಿಲ್ ಮತ್ತು ಯುಟ್ಯೂಬರ್ ಮಧು ಗೌಡ ಮದುವೆ ಕೂಡಾ ನಡೆದಿತ್ತು. ಇದೀಗ ನಿಶಾ ಸರದಿ.ಅವರೊಂದಿಗೆ ಆಗಾಗ ವಿಡಿಯೋ ಗಳಲ್ಲಿ ಕಾಣಿಸಿಕೊಳ್ಳುವ ಹುಡುಗನ ಜೊತೆಗೆ ಇನ್ನು ಕೆಲವೇ ತಿಂಗಳಿನಲ್ಲಿ ನಿಶಾ ಮದುವೆ ನಡೆಯಲಿದೆ ಎಂದು ಹೇಳಲಾಗ್ತಿದೆ. ಆದರೆ ಇಷ್ಟು ಬೇಗ ಮದುವೆ ಬೇಡ ಅನ್ನುತ್ತೀರೋ ನಿಶಾ ಇನ್ನೆರಡು ವರ್ಷ ಸಮಯ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.