ನಿಖಿಲ್ ಹಾಗೂ ಮಧು ಮದುವೆ ಫಿಕ್ಸ್; ಮೊದಲ ರಾತ್ರಿ ಯಾವ ದೇಶದಲ್ಲಿ ನಡೆಯಲಿದೆ ಗೊ.ತ್ತಾ

 | 
Hh

ಮುದ್ದು ಮುಖದ ಚಲುವೆ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ತಮ್ಮ ರೀಲ್ಸ್‌ ಮೂಲಕವೇ ಸಾಕಷ್ಟು ಮಂದಿ ಫೇಮಸ್‌ ಆದವರಿದ್ದಾರೆ. ಅಷ್ಟೇ ಅಲ್ಲ ಹಾಗೇ ಜನರಿಂದ ನೇಮು ಫೇಮು ಗಿಟ್ಟಿಸಿಕೊಂಡು ಪ್ರೀತಿ, ಪ್ರೇಮದ ವಿಚಾರವನ್ನೂ ಬಹಿರಂಗವಾಗಿ ಹೇಳಿಕೊಂಡು ಮದುವೆ ಆಗುವ ಹಂತಕ್ಕೆ ಹೋದ ಉದಾಹರಣೆಗಳಿವೆ. ಇದೀಗ ರೀಲ್ಸ್‌ನಿಂದಲೇ ಪರಿಚತರಾದ ನಿಖಿಲ್‌ ಮತ್ತು ಮಧು ಜೋಡಿಯೂ ಮದುವೆ ಆಗುವ ತಯಾರಿಯಲ್ಲಿದೆ.

ಹೌದು ಅದ್ದೂರಿಯಾಗಿ ಮನೆಯವರ ಎಲ್ಲರ ಸಮ್ಮುಖದಲ್ಲಿ ಎಂಗೇಜ್ಮೆಂಟ ಮಾಡಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಈ ಜೋಡಿ ತಮ್ಮ ಅಧಿಕೃತ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಈ ಖುಷಿಯ ವಿಚಾರವನ್ನು ಪೋಸ್ಟ್‌ ಮಾಡಿದೆ. ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ರೀಲ್ಸ್‌ ಮೂಲಕವೇ ಫೇಮಸ್‌ ಆಗಿದ್ದ ನಿಖಿಲ್‌ ರವೀಂದ್ರ ಮತ್ತು ಮಧು ಗೌಡ ಇದೀಗ ಮದುವೆಗೆ ಸಿದ್ಧರಾಗಿದ್ದನ್ನು ನೋಡಿ ಅಭಿಮಾನಿಗಳು ಖುಷಿ ಆಗಿದ್ದಾರೆ.

ನಿಖಿಲ್‌ ರವೀಂದ್ರ ಮತ್ತು ಮಧು ಗೌಡ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ. ಇದೀಗ ಆ ಪ್ರೀತಿಗೆ ಮದುವೆ ಮುದ್ರೆ ಬಿದ್ದಿದೆ. ಎರಡೂ ಮನೆಯವರ ಸಮ್ಮುಖದಲ್ಲಿ ಹೂವು ಮುಡಿವ ಶಾಸ್ತ್ರ ಮಾಡಿಕೊಂಡಿರುವ ಈ ಜೋಡಿ, ಫಲಸಿತು ನಾಲ್ಕು ವರ್ಷದ ಪ್ರೀತಿ ಎಂದಿದೆ. ಎಲ್ಲರ ಸಮ್ಮುಖದಲ್ಲಿ ಈ ಜೋಡಿ ಎಂಗೇಜ್ ಆಗಿದೆ.

ಎಲ್ಲರಿಗೂ ನಮಸ್ಕಾರ ನಮ್ಮ4 ವರ್ಷದ ಪ್ರೀತಿ ಕನಸು ನನಸಾಯಿತು. ಇವತ್ತು ಅಫೀಷಿಯಲ್ ಎಂಗೇಜ್ ಮೇಂಟ್ ಆಯಿತು. ನಿಮ್ಮ ಪ್ರೀತಿ ನಮ್ಮ ಪ್ರೀತಿಯ ಮೇಲೆ ಸದಾ ಹೀಗೆ ಇರಲಿ ಎಂದಿದ್ದಾರೆ ಮಧು ಗೌಡ. ಈ ವರೆಗೂ ಇಬ್ಬರೂ ಒಟ್ಟಿಗೆ ಒಂದೇ ರೀಲ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಧು ಮತ್ತು ನಿಖಿಲ್‌ ಬಗ್ಗೆ, ನೀವು ಪ್ರೇಮಿಗಳಾ ಎಂದು ಸಾವಿರಾರು ಕಾಮೆಂಟ್‌ಗಳು ಹರಿದು ಬಂದಿದ್ದವು. ಆದರೆ, ಅದ್ಯಾವುದಕ್ಕೂ ಉತ್ತರ ಕೊಟ್ಟಿರಲಿಲ್ಲ ಈ ಜೋಡಿ. ಇದೀಗ ಈ ಜೋಡಿ ಎಲ್ಲೆಡೆ ವೈರಲ್ ಆಗಿದ್ದು ಅಭಿಮಾನಿಗಳು ಹಾರೈಸಿದ್ದಾರೆ.