ದೊಡ್ಡ ಎಡವಟ್ಟು ಮಾಡಿಕೊಂಡ ನಿರಂಜನ್ ದೇಶಪಾಂಡೆ; ಈತನ ಕೊಬ್ಬು ಇಳಿಸಿದ ಕನ್ನಡಿಗರು

 | 
Hui

ನಟ, ನಿರೂಪಕ ನಿರಂಜನ್ ದೇಶಪಾಂಡೆ ಕನ್ನಡ ಹೋರಾಟಗಾರರ ಕ್ಷಮೆ ಕೇಳಿದ್ದಾರೆ. ಇರಲಾರದೇ ಇರುವೆ ಬಿಟ್ಟುಕೊಂಡೆ ಎನ್ನುವಂತೆ ಏನೋ ಮಾತನಾಡಲು ಹೋಗಿ ತಪ್ಪಾಯಿತು. ಕ್ಷಮಿಸಿ ಎಂದು ಇನ್‌ಸ್ಟಾಗ್ರಾಮ್‌ ಲೈವ್ ಬಂದು ಮಾತನಾಡಿದ್ದಾರೆ. ಇತ್ತೀಚೆಗೆ ಕನ್ನಡಪರ ಹೋರಾಟಗಾರರ ಅರ್ಹತೆ ಬಗ್ಗೆ ನಿರಂಜನ್ ದೇಶಪಾಂಡೆ ಲಘುವಾಗಿ ಮಾತನಾಡಿದ್ದರು.

ಶುಕ್ರವಾರ ಮೈಸೂರಿನಲ್ಲಿ ಚಾಮುಂಡಿ ತಾಯಿ ದರ್ಶನ ಪಡೆಯುವ ಮುನ್ನ ನಿರಂಜನ್ ಇನ್‌ಸ್ಟಾ ಲೈವ್ ಬಂದಿದ್ದಾರೆ. ನನ್ನ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಕಷ್ಟು ಜನ ನನ್ನ ಮಾತಿಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈಗಷ್ಟೇ ಮಂಡ್ಯದ ಕನ್ನಡ ಹೋರಾಟಗಾರಾದ ಲೋಕೇಶ್ ಅವರೊಟ್ಟಿಗೆ ಮಾತನಾಡಿದೆ. ಅವರು ನಾನು ಆಡಿದ ಮಾತು ಎಷ್ಟು ತಪ್ಪು ಎಂದು ತಿಳಿ ಹೇಳಿದರು. 

ನನಗೆ ರೂಪೇಶ್ ರಾಜಣ್ಣ ಸೇರಿದಂತೆ ಹಲವು ಕನ್ನಡಪರ ಹೋರಾಟಗಾರರು ಗೊತ್ತು. ಅವರೊಟ್ಟಿಗೆ ಒಳ್ಳೆ ಒಡನಾಟವಿದೆ. ನಾನು ಆ ರೀತಿ ಮಾತನಾಡಬಾರದಿತ್ತು ಎಂದಿದ್ದಾರೆ.ಇತ್ತೀಚೆಗೆ ನಿರಂಜನ್ ದೇಶಪಾಂಡೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಕನ್ನಡ ಹೋರಾಟಗಾರರು ಮಾತೆತ್ತಿದರೆ ಸಾಕು ಹೋರಾಟ ಎಂದು ಬಂದುಬಿಡ್ತಾರೆ. ಕೆಲವರು ಕನ್ನಡ ಚೆನ್ನಾಗಿ ತಿಳಿದು ಮಾತನಾಡುತ್ತಾರೆ. ಒಳ್ಳೆ ರೀತಿಯಲ್ಲಿ ಹೋರಾಟಗಳನ್ನು ಮಾಡುತ್ತಾರೆ.

ಇನ್ನು ಕೆಲವರು ಹೋರಾಟಕ್ಕೆ ಬರ್ತಾರೆ, ಅವರಿಗೆ ಕನ್ನಡ ಸರಿಯಾಗಿ ಮಾತನಾಡಲು ಬರಲ್ಲ. ಕೆಲವರಿಗೆ ಉಗ್ರ ಹೋರಾಟ ಎಂದು ಸರಿಯಾಗಿ ಹೇಳೋಕೆ ಬರಲ್ಲ, ಹೋರಾಟ ಮಾಡುವ ಮುನ್ನ ಕನ್ನಡದ ಬಗ್ಗೆ ಜ್ಞಾನ ತುಂಬಿಕೊಳ್ಳಿ ಎಂದಿದ್ದರು. ನಿರಂಜನ್ ಹೇಳಿಕೆಗೆ ಸಾಕಷ್ಟು ಜನ ಬೇಸರ ವ್ಯಕ್ತಪಡಿಸಿದ್ದರು. ಕನ್ನಡದ ಬಗ್ಗೆ ಅಭಿಮಾನ, ಪ್ರೀತಿ ಇರಬೇಕು. ಕನ್ನಡ ಹೋರಾಟ ಮಾಡಲು ಭಾಷೆಯಲ್ಲಿ ಪಾಂಡಿತ್ಯ ಸಾಧಿಸಬೇಕಿಲ್ಲ. ಅಭಿಮಾನ ಇರುವ ಪ್ರತಿಯೊಬ್ಬರು ಕೂಡ ಕನ್ನಡ ಹೋರಾಟಗಾರರೇ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.