ನಿರ್ಮಲಾ ಸೀತಾರಾಮನ್ ಗಂಡನಿಂದ ಮೋದಿಗೆ ನಿಂದನೆ, ಕಾರಣ ಕೇಳಿ ಭಕ್ತರ ಕಣ್ಣಲ್ಲಿ ಕ.ಣ್ಣೀರು

 | 
Hhhn

ಆರ್ಥಿಕ ತಜ್ಞ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗಂಡ ಪರಾಕಲ ಪ್ರಭಾಕರ್ ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ಸರ್ಕಾರ ಸೂಕ್ತ ನೀತಿ ಜಾರಿಗೊಳಿಸುವಲ್ಲಿ ವಿಫಲಗೊಂಡಿದೆ ಎಂದು ಕಿಡಿ ಕಾರಿರುವ ಪ್ರಭಾಕರ್, ಸರ್ಕಾರ ಇನ್ನಾದರೂ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.

ಆಂಗ್ಲ ಪತ್ರಿಕೆಯೊಂದಕ್ಕೆ ಬರೆದ ಅಂಕಣದಲ್ಲಿ ಈ ಕುರಿತು ಬರೆದಿರುವ  ಪರಾಕಲ ಪ್ರಭಾಕರ್ 'ಭಾರತದ ಅರ್ಥ ವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಈ ಮಾತನ್ನು ನಿರಾಕರಿಸಿದರೂ, ಅಂಕಿ ಅಂಶಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ಹಲವಾರು ಕ್ಷೇತ್ರಗಳು ಸಂಕಷ್ಟದಲ್ಲಿರುವುದು ಸ್ಪಷ್ಟವಾಗಿದೆ ಎಂದಿದ್ದಾರೆ. ಇದೇ ವೇಳೆ ಲೋಕಸಭಾ ಚುನಾವಣೆ ಕುರಿತಾಗಿಯೂ ಉಲ್ಲೇಖಿಸಿರುವ ಪ್ರಭಾಕರ್ ಆರ್ಥಿಕ ಕುಸಿತವನ್ನು ಸರಿಪಡಿಸಲು ಸರ್ಕಾರದ ಬಳಿ ಯೋಜನೆಗಳಿವೆ ಎಂಬುವುದಕ್ಕೆ ಯಾವುದೇ ಸಾಕ್ಷಿ ಇಲ್ಲ. 

ಬಹುಶಃ ಬಿಜೆಪಿ ಪಕ್ಷದ ನಾಯಕರಿಗೆ ಈ ಸತ್ಯ ತಿಳಿದಿತ್ತು. ಇದೇ ಕಾರಣದಿಂದ ಲೋಕಸಭಾ ಚುನಾವಣಾ ಪ್ರಚಾರದಕಲ್ಲಿ ಪಕ್ಷ ಎಲ್ಲಿಯೂ ಆರ್ಥಿಕ ವಿಚಾರವನ್ನು ಪ್ರಸ್ತಾಪಿಸಲಿಲ್ಲ. ಬುದ್ಧಿವಂತಿಕೆಯಿಂದ ಕೇವಲ ರಾಷ್ಟ್ರವಾದಿ ಹಾಗೂ ಭದ್ರತೆಯ ಅಂಜೆಂಡಾ ಮುಂದಿಟ್ಟಿತ್ತು ಎಂದು ಕಿಡಿ ಕಾರಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಆಗಾಗ್ಗೆ ಟೀಕೆ ಮಾಡುವ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ಅವರ ಪತಿ ಪರಕಾಲ ಪ್ರಭಾಕರ್‌ ಅವರು ಮತ್ತೆ ಮೋದಿ ಪ್ರಧಾನಿಯಾದರೆ ದೇಶಕ್ಕೆ ಅಪಾಯ ಎಂದು ಹೇಳಿದ್ದಾರೆ.

2014 ರ ಚುನಾವಣೆಯಲ್ಲಿ ಗೆಲ್ಲಲು ಬಳಸಿದ ಅಭಿವೃದ್ಧಿಯ ಹಲಗೆಯ ಮೇಲೆ ಗೆದ್ದ ಬಿಜೆಪಿಯು ಹಿಂದುತ್ವವನ್ನು ಕುತಂತ್ರದಿಂದ ಕಳ್ಳಸಾಗಣೆ ಮಾಡಿದೆ. 2024 ರಲ್ಲಿ ಮತ್ತೊಂದು ಬಾರಿ ಮೋದಿ ಸರ್ಕಾರ ಬಂದರೆ ಅದು ಆರ್ಥಿಕತೆಗೆ ಮಾತ್ರವಲ್ಲದೆ, ಒಟ್ಟಾರೆ ರಾಷ್ಟ್ರಕ್ಕೆ ವಿಪತ್ತು ತರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 2014ರಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿಯವರು ಉತ್ತಮ ಆಡಳಿತ, ಸ್ವಚ್ಛ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರ ಮತ್ತು ಅಭಿವೃದ್ಧಿ ಭರವಸೆ ನೀಡಿ ಮತ ಕೇಳಿದ್ದರು. 

ಹಿಂದೂ ರಾಷ್ಟ್ರ ಮತ್ತು ಹಿಂದುತ್ವದ ನಿಜವಾದ ಉದ್ದೇಶವನ್ನು ಮುಂದಿಟ್ಟು ನರೇಂದ್ರ ಮೋದಿ ಅವರು ಈ ಬಾರಿ ಮತ ಕೇಳುತ್ತಾರೆ. ಇಲ್ಲಿ ಟ್ರೋಜನ್‌ ಕುದುರೆಯಂತೆ ಅಭಿವೃದ್ಧಿ ಪದವನ್ನು ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.