ನಿವೇದಿತಾ ನಿಜಬಣ್ಣ ಬಯ ಲು; ಹೈದಾರಬಾದ್ ವ್ಯಕ್ತಿ ಲಿಂಕ್

 | 
Js

ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ತಮ್ಮ ಫ್ಯಾನ್ಸ್ ಶಾಕ್ ಕೊಟ್ಟಿದ್ದಾರೆ. ಇವರಿಬ್ಬರೂ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇವರಿಬ್ಬರು ಬೇರೆ ಬೇರೆಯಾಗಿದ್ದು ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಏನೇನೋ ಕಾರಣಗಳು ಹರಿದಾಡುತ್ತಿವೆ.

ಈ ಮಧ್ಯೆ ಚಂದನ್ ಶೆಟ್ಟಿ ಗೆಳೆಯ ಹಾಗೂ ಬಿಗ್‌ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಜೊತೆಗಿರಲು ಗಟ್ಟಿಯಾದ ಭರವಸೆ ಬೇಕು. ದೂರವಾಗಲು ಚಿಕ್ಕದಾದ ಸಂಶಯ ಸಾಕು ಎಂದು ಹೇಳಿದ್ದರು. ಈಗ ಗ್ಯಾರಂಟಿ ನ್ಯೂಸ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಕೆಲವು ವಿಷಯಗಳನ್ನು ಬಹಿರಂಗ ಪಡಿಸಿದ್ದಾರೆ.

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಬಗ್ಗೆ ತನಗೆ ಒಂದು ವರ್ಷದ ಹಿಂದೇನೆ ವಿಷಯ ಗೊತ್ತಿತ್ತು ಎಂದು ಹೇಳಿಕೊಂಡಿದ್ದಾರೆ. ಚಂದನ್ ಶೆಟ್ಟಿ ಆತ್ಮೀಯ ಗೆಳೆಯ. ಚಂದನ್ ಶೆಟ್ಟಿ ಬಿಗ್ ಬಾಸ್ ಸ್ಪರ್ಧಿ. ಚಂದನ್ ಶೆಟ್ಟಿ ನಾವು ಮಾಡಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾದಲ್ಲಿ ಆತ ಹೀರೊ. 15 ದಿನ ನಾವು ಶೂಟಿಂಗ್ ಮಾಡಿದ್ದೇವೆ. ಫೈಟಿಂಗ್ ಮಾಡಿದ್ದೇವೆ. ಹೊಡೆದಾಡಿದ್ದೇವೆ. ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ಯಾರು ಅಂದರೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಹೆಸರು ಬರುತ್ತೆ. ಆದ್ರೀಗ ಎಲ್ಲರಿಗೂ ಶಾಕ್ ಆಗಿದೆ. ಆದರೆ, ನನಗೆ ಒಂದು ವರ್ಷದ ಹಿಂದೇನೆ ಈ ವಿಷಯ ಬಂದಿತ್ತು ಎಂದಿದ್ದಾರೆ.

ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಅನೇಕ ಪ್ರಶ್ನೆಗಳು ಬರುತ್ತವೆ. ನಾನು ಕರಿಯರ್‌ಗೋಸ್ಕರ್ ತೆಲುಗು ಪಿಕ್ಚರ್‌ಗೆ ಹೋಗುತ್ತಿದ್ದೇನೆ. ಅಲ್ಲಿ ನನಗೆ ಮದುವೆ ಆಗಿದೆ ಅಂದರೆ, ಅವಕಾಶ ಸಿಗೋದಿಲ್ಲ. ಡಿವೋರ್ಸ್ ಆಗಿದ್ದರೆ ಅವಕಾಶ ಸಿಗುತ್ತೆ ಅನ್ನೋದು ಒಂದು ವದಂತಿ. ನಾವಿಬ್ಬರು ಬೇರೆಯಾಗೋಣ, ನನ್ನ ಜೀವನದಲ್ಲಿ ಯಾರೋ ಬಂದಿದ್ದಾರೆ. ನಿನ್ನ ಜೀವನದ ಶೈಲಿ ನನಗೆ ಇಷ್ಟ ಆಗುತ್ತಿಲ್ಲ. ನನ್ನ ಜೀವನದಲ್ಲಿ ಬೇರೆ ಲೈಫ್ ಸ್ಟೈಲ್ ಬೇಕು ಅಂತ ನಿವೇದಿತಾ ಬಿಟ್ಟು ಹೋಗಿರೋದು ಈ ಎಲ್ಲಾ ಊಹಾ ಪೋಹಗಳನ್ನು ನೋಡಿದಾಗ ಚಂದನ್‌ಗೆ ನಿಜವಾಗಲೂ ಬೇಜಾರಾಗಿದೆ ಎಂದಿದ್ದಾರೆ.

https://www.youtube.com/live/9Z1CQ1j_cZE?si=t9htyXjBbACMvx0A

ನಾವೂ ಏರ್‌ಪೋರ್ಟ್‌ಗೆ ಹೋಗುತ್ತೇವೆ. ನಾವೂ ಟ್ರಾವೆಲ್ ಮಾಡುತ್ತೇವೆ. ನಾವೂ ಏನೋ ನೋಡಬಾರದ್ದನ್ನು ನೋಡುತ್ತೇವೆ. ಆಗ ನಮಗೊಂದು ಸೂಕ್ಷ್ಮತೆ ಇರುತ್ತೆ. ಪ್ರೊಷೆನಲ್ ಸೂಕ್ಷ್ಮತೆ ಗೊತ್ತಿರುತ್ತೆ. ಹಾಗೇ ಪರ್ಸನಲ್ ಸೂಕ್ಷ್ಮತೆಯನ್ನೂ ನೋಡಿರುತ್ತೇವೆ. ಆಗ ನಾವು ಅವರನ್ನು ಕರೆದು ಎಲ್ಲಾ ಸರಿಯಾಗಿದೆಯಾ? ನಿಂದೂ ಅವರದ್ದು ಹೇಗಿದೆ? ಅಂತ ಕೇಳಿದ್ದೆ. 

ಯಾಕಂದ್ರೆ, ಮೂರನೇ ವ್ಯಕ್ತಿ ಹೈದರಾಬಾದ್‌ನಲ್ಲಿ ಒಂದು ವಿಷಯ ಹೇಳುತ್ತಾರೆ ಅಂದರೆ, ಅದನ್ನು ಗೆಳೆಯನಾಗಿ ನಾನು ಹೇಳಲೇಬೇಕು. ಅದನ್ನು ಅಸ್ಟ್ರಾಲಿಜಿ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವು. ಎನ್‌ ಮತ್ತು ಸಿ ಹೊಂದುವುದಿಲ್ಲ ಎಂದು ಹುಬ್ಬಳ್ಳಿಯಲ್ಲಿ ಒಬ್ಬರು ಹೇಳಿದ್ದರು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.