ಹುಡುಗಿಯನ್ನೇ ಮದುವೆಯಾಗಲು ನಿರ್ಧರಿಸಿದ ನಿವೇದಿತಾ ಗೌಡ, ಚಂದನ್ ಶೆಟ್ಟಿಗೆ ಮೌನ

 | 
Ghu
ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ನಟ ಚಂದನ್ ಶೆಟ್ಟಿ ಹಾಗೂ ಕಿರುತೆರೆ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದಿರುವ ನಿವೇದಿತಾ ಗೌಡ ವಿಚ್ಛೇದನ ಪಡೆದುಕೊಂಡು ವರ್ಷಗಳು ಕಳೆಯುತ್ತಾ ಬಂದರೂ, ಚೆನ್ನಾಗಿದ್ದ ಈ ಜೋಡಿ ದಿಢೀರ್‌ ದೂರಾಗಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ಕಳೆದ ವರ್ಷ ಜೂನ್‌ ತಿಂಗಳಲ್ಲಿ ವಿಚ್ಛೇದನ ಪಡೆದುಕೊಂಡರು.
ಸದ್ಯ ಚಂದನ್ ಶೆಟ್ಟಿ ತಮ್ಮ ಕಾಟನ್‌ ಕ್ಯಾಂಡಿ ಹಾಡಿನ ಯಶಸ್ಸಿನಲ್ಲಿದ್ದರೆ, ನಿವೇದಿತಾ ಗೌಡ ಮತ್ತೆ ಕಿರುತೆರೆಗೆ ಕಂಬ್ಯಾಕ್‌ ಮಾಡಿ ಬಾಯ್ಸ್‌ ಆ್ಯಂಡ್‌ ಗರ್ಲ್ಸ್ ಕಾರ್ಯಕ್ರಮದ ಸ್ಪರ್ಧಿಯಾಗಿದ್ದಾರೆ. ಸದ್ಯ ತಮ್ಮ ತಮ್ಮ ಜೀವನದಲ್ಲಿ ಬ್ಯೂಸಿಯಾಗಿರುವ ಈ ಮಾಜಿ ಜೋಡಿಯ ಬಗ್ಗೆ ಆಗಾಗ ಗಾಸಿಪ್‌ಗಳು ಹರಿದಾಡುತ್ತಲೇ ಇರುತ್ತದೆ.
ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಡಿವೋರ್ಸ್ ವಿಚಾರದಲ್ಲಿ ಅನೇಕ ಗಾಳಿ ಸುದ್ದಿಗಳು ಕೇಳಿಬಂದಿದ್ದವು. ವಿಚ್ಛೇದನ ಬಳಿಕ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಹೆಸರುಗಳು ಕೆಲ ನಟ ನಟಿಯರ ಜೊತೆ ತಳುಕು ಹಾಕಿಕೊಂಡಿತ್ತು. ಆದರೆ ಅದು ಸತ್ಯಕ್ಕೆ ಬಹು ದೂರಾದ ವಿಚಾರವಾಗಿತ್ತು. ಆದರೂ ಕೆಲವರು ಚಂದನ್ ಶೆಟ್ಟಿ ಹೆಸರನ್ನು ಸಲಗ ಸಿನಿಮಾ ಖ್ಯಾತಿಯ ನಟಿ ಸಂಜನಾ ಆನಂದ್‌ ಅವರ ಜೊತೆ ತಳುಕು ಹಾಕಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದ್ದರು.
ನೋಡಿದ ಎಂತವರಿಗಾದರೂ ಇದೊಂದು ಸುಳ್ಳು ಸುದ್ದಿ ಎಂದು ಗೊತ್ತಾಗುತ್ತಿದ್ದರೂ, ಕೆಲವು ಪೋಸ್ಟ್‌ಗಳು ವೈರಲ್‌ ಆಗುತ್ತಲೇ ಇದ್ದವು. ಈ ಬಗ್ಗೆ ಫಿಲ್ಮಿಬೀಟ್‌ ಕನ್ನಡದ ಜೊತೆ ಮಾತನಾಡಿದ್ದ ಸಂಜನಾ ಆನಂದ್‌, 'ಇತ್ತೀಚಿಗೆ ನನಗೆ ಮತ್ತು ಚಂದನ್‌ ಶೆಟ್ಟಿ ಅವರಿಗೆ ಮದುವೆಯಾಗಿತ್ತು ಎನ್ನುವ ಗಾಸಿಪ್‌ ಹಡಿದಾಡಿತ್ತು. ಅಷ್ಟೇ ಅಲ್ಲದೇ ಅವರ ಡಿವೋರ್ಸ್‌ಗೆ ನಾನು ಕಾರಣ ಅಂತಾ ಆಯ್ತು. ಮೊದಲು ನನಗೆ ಆ ಸುದ್ದಿ ಗೊತ್ತೇ ಇರಲಿಲ್ಲ. ಇದೆಲ್ಲಾ ಇಷ್ಟು ದೊಡ್ಡದಾಗಿ ಯಾವಾಗ ಆಯ್ತು ಅಂತಾ ಅನಿಸಿಬಿಡ್ತು. 
ಎಲ್ಲಿಯವರೆಗೂ ಅಂದರೆ ಎಐನಲ್ಲಿ ನಮ್ಮಿಬ್ಬರಿಗೂ ಮದುವೆ ಡ್ರೆಸ್‌ ಹಾಕಿಸಿದ್ದರು. ಮಂಗಳೂರಿನಲ್ಲಿ ಮದುವೆ ಅಂತೆಲ್ಲಾ ಹಾಕಿದರು. ಆಗ ಸ್ವಲ್ಪ ಗಂಭೀರವಾಗಿ ತೆಗೆದುಕೊಂಡು ಇದೆಲ್ಲಾ ಸುಳ್ಳು ಅಂತಾ ಸ್ಪಷ್ಟನೆ ಕೊಟ್ಟೆ' ಎಂದು ಸಂಜನಾ ಆನಂದ್‌ ಹೇಳಿದ್ದರು. ಈ ಮೂಲಕ ತಮ್ಮ ಬಗ್ಗೆ ಬಂದಿದ್ದ ಬಹುದೊಡ್ಡ ಗಾಸಿಪ್‌ಗೆ ಸಂಜನಾ ಆನಂದ್‌ ಸ್ಪಷ್ಟನೆ ನೀಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.