ಮಂಗಳೂರು ಬೀಚ್ ನಲ್ಲಿ ಕುಣಿದಾಡಿದ‌ ನಿವೇದಿತಾ ಗೌಡ, ಚಂದನ್ ಶೆಟ್ಟಿಗೆ ಅದೃಷ್ಟ ಇಲ್ಲ‌ ಎಂದ ನೆಟ್ಟಿಗರು

 | 
Yu
ಚಂದನ್ ಶೆಟ್ಟಿ ಡಿವೋರ್ಸ್ ಬಳಿಕ ದೇಶ ವಿದೇಶ ಸುತ್ತಾಡಿ ರೀಲ್ಸ್ ಮಾಡುತ್ತಿರುವ ನಿವೇದಿತಾ ಗೌಡ ಇದೀಗ ‌ನೇರ ಮಂಗಳೂರು ಬೀಚ್ ಕಡೆ ಕಾಲಿಟ್ಟಿದ್ದಾರೆ. ಹೌದು, ನಿವೇದಿತಾ ಗೌಡ ತನ್ನ ಮಾಜಿ ಗಂಡನ ತವರು ಮನೆಯ ಬೀಚ್ ಬಳಿ ಬೋಲ್ಡ್ ಲುಕ್‌ನಲ್ಲಿ ಮಂಗಳೂರಿಗರನ್ನು ನಿಬ್ಬೆರಗಾಗಿಸಿದ್ದಾರೆ. 
ನಿವೇದಿತಾ ಗೌಡ ಅವರು ತನ್ನ ರೀಲ್ಸ್ ಮೂಲಕವೇ ಸಾಕಷ್ಟು ಫೇಮಸ್ ‌ಆದವರು. ಹಾಗಾಗಿ ಸಿನಿಮಾ ಅವಕಾಶ ಬಿಟ್ಟು ರೀಲ್ಸ್ ಗಳಿಗೆ ಜಾಸ್ತಿ ಒತ್ತು ನೀಡುತ್ತಿದ್ದಾರೆ. ಇನ್ನು ಈ ಮೂಲಕ ಸಾಕಷ್ಟು ಹಣ ಕೂಡ ಸಂಪಾದನೆ ಮಾಡುತ್ತಿದ್ದಾರೆ. 
https://youtube.com/shorts/1daK7J3KF-4?si=Ay9jw5JlxvlwaiUl
ಇದರ ಜೊತೆಗೆ ನಿವೇದಿತಾ ಗೌಡ ಅವರು ಮಲಯಾಳಂ ಚಿತ್ರದಲ್ಲಿ ಕೂಡ ಬಣ್ಣ ಹಚ್ಚಲು ತಯಾರಿ ನಡೆಸುತ್ತಿದ್ದಾರೆ. ಇಷ್ಟು ಮಾತ್ರವಲ್ಲದೇ ಯೂಟ್ಯೂಬ್ ಮೂಲಕ ದೈನಂದಿನ ಜೀವನದ ಬಗ್ಗೆ ಹಾಗೂ ತನ್ನ ಪ್ರಯಾಣದ ಜೊತೆಗೆ ಕೂಡ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. 
ಇನ್ನು ಯೂಟ್ಯೂಬ್ ರೀಲ್ಸ್ ಹಾಗೂ ಕೆಲವೊಂದು ಜಾಹಿರಾತು ಮೂಲಕ ನಿವೇದಿತಾ ಗೌಡ ಅವರು ಪ್ರತಿ ತಿಂಗಳಿಗೆ 5 ಲಕ್ಷದವರೆಗೆ ಸಲಿಸಾಗಿ ಸಂಪಾದನೆ ಮಾಡುತ್ತಿದ್ದಾರೆ ಎನ್ನಲಾಗಿದೆ‌.