ಮೊದಲ ಬಾರಿಗೆ ಕಿವಿ ಚುಚ್ಚಿಸಿಕೊಂಡ ನಿವೇದಿತಾ ಗೌಡ; ಬೆಚ್ಚಿಬಿ.ದ್ದ ಕನ್ನಡಿಗರು

 | 
Uu

ಕಿವಿಯೋಲೆ ಚುಚ್ಚಿದಾಗ ಇರುವೆ ಕಚ್ಚಿದಂತೆ ಆಗುವ ನೋವನ್ನು ಸಾಕಷ್ಟು ಜನರು ಅನುಭವಿಸಿರುತ್ತಾರೆ. ಮಗಳ ಕಿವಿಗೆ ಚುಚ್ಚಿದಾಗ ಅಪ್ಪ ಅಮ್ಮನ ಕಣ್ಣಲ್ಲಿ ನೀರು ಬರುವುದುಂಟು. ಆದರೆ, ಕಿವಿ ಚುಚ್ಚಿದ ಬಳಿಕ ಕಿವಿಯೋಲೆಯಲ್ಲಿ ಮುದ್ದಾಗಿ ಕಾಣಿಸಿದಾಗ ಹಿಗ್ಗುವುದುಂಟು. ಚಂದನವನದ ಗೊಂಬೆ ನಿವೇದಿತಾ ಗೌಡ ತನ್ನ ಜೋಡಿ ಕಿವಿಗಳಿಗೆ ಮತ್ತೆ ಕಿವಿಯೋಲೆ ಚುಚ್ಚಿಸಿಕೊಂಡಿದ್ದಾರೆ.

ಇದು ಎರಡನೇ ಕಿವಿಯೋಲೆ. ಈ ಜೋಡಿ ಕಿವಿಯೋಲೆ ಮೂಲಕ ಇನ್ನಷ್ಟು ಕ್ಯೂಟಾಗಿ ಕಾಣಿಸ್ತಾ ಇದ್ದಾರೆ ಚಂದನ್‌ ಶೆಟ್ಟಿ ಮಡದಿ.ಈ ರೀತಿ ಎರಡನೇ ಬಾರಿ ಕಿವಿಯೋಲೆ ಚುಚ್ಚಿದಾಗ ಆದ ನೋವಿನ ಅನುಭವವನ್ನು ನಿವೇದಿತಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. ಅಂದುಕೊಂಡಷ್ಟು ನೋವಾಗಲಿಲ್ಲ ಎಂದು ಬರೆದರೂ ಅವರು ಹಂಚಿಕೊಂಡ ವಿಡಿಯೋದಲ್ಲಿ ಆಆಆಆಓಓಓಓ ಎಂದು ಕಿರುಚಿದ್ದು ನೋಡಿದರೆ ಸಾಕಷ್ಟು ನೋವಾಗಿರುವುದು ಖಾತ್ರಿ. 

ಈ ವಿಡಿಯೋ ನೋಡಿ ಅಭಿಮಾನಿಗಳು ತೋಚಿದಂತೆ ಕಾಮೆಂಟ್‌ ಮಾಡಿದ್ದಾರೆ. ಒಂದಿಷ್ಟು ಬ್ಯಾಡ್‌ ಕಾಮೆಂಟ್‌ಗಳ ನಡುವೆ ಸಾಕಷ್ಟು ಜನರು ಕಿವಿಯೋಲೆಯಲ್ಲಿ ಇನ್ನಷ್ಟು ಕ್ಯೂಟಾಗಿ ಕಾಣಿಸುತ್ತಿದ್ದೀರಿ ಮುದ್ದಾಗಿ ಕಾಣಿಸುತ್ತಿದ್ದೀರಿ ಎಂದೆಲ್ಲ ಹೊಗಳಿದ್ದಾರೆ. ಅಯ್ಯೋ ನಿವೇದಿತಾ ಇನ್ನು ಯಾವ ಕಾಲದಲ್ಲಿ ಇದ್ದೀರಾ? ಈಗ ಗನ್‌ಶಾಟ್‌ ಮೂಲಕ ಕಿವಿಚುಚ್ಚಿಸಿಕೊಳ್ಳಬಹುದು. 

ಇದರಲ್ಲಿ ಯಾವುದೇ ನೋವು ಆಗದು ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಸಾಂಪ್ರದಾಯಿಕ ವಿಧಾನ ಯಾವತ್ತೂ ಬೆಸ್ಟ್‌ ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಅಯ್ಯೋ ಅಷ್ಟೊಂದು ಬೊಬ್ಬೆ ಹೊಡೆಯುವ ಅಗತ್ಯ ಇರಲಿಲ್ಲ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಆಆಆಆಓಓಓ ಅಕ್ಕಾ ನಿವೇದಿತಾ ಅಕ್ಕ ಎಂದೆಲ್ಲ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.