ಕನ್ನಡ ‌ಹಾಡಿಗೆ ಮೈಕುಣಿಸಿ ಎಡವಟ್ಟು ಮಾಡಿಕೊಂಡ ನಿವೇದಿತಾ ಗೌಡ, ಉಗಿದು ಕಳುಹಿಸಿದ ಕನ್ನಡಿಗರು

 | 
ಸ್
ಬಿಗ್​ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ಡಿವೋರ್ಸ್ ನಂತರ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೆ ಆ್ಯಕ್ಟಿವ್ ಆಗಿದ್ದಾರೆ. ಡಿವೋರ್ಸ್ ಮೊದಲೂ ಕೂಡಾ ಅವರು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದರು. ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದರು. ಈಗ ಅವರು ಮತ್ತಷ್ಟು ರೀಲ್ಸ್ ಮಾಡಿ ಶೇರ್ ಮಾಡುತ್ತಿದ್ದಾರೆ.
ಇತ್ತೀಚೆಗೆ ನಿವೇದಿತಾ ಗೌಡ ಅವರು ಬ್ಲೂ ಟಾಪ್ ಧರಿಸಿ ರೀಲ್ಸ್ ಮಾಡಿದ್ದಾರೆ. ಆ ರೀಲ್ಸ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಈ ಸಲ ಅವರ ವಿಡಿಯೋ ನೆಟ್ಟಿಗರಿಗೆ ಇಷ್ಟವಾಗಿಲ್ಲ. ಹಾಗಾಗಿ ಖರಾಬು ಡ್ಯಾನ್ಸ್ ಮಾಡಿ ಸಾಂಗ್ ಹಾಳು ಮಾಡಿದ್ರಿ ಎಂದ ಜನರು ಡ್ಯಾನ್ಸ್ ಮಾಡಿ ಬೇಡ ಅನ್ನೋದೇ ಇಲ್ಲ. ಆದ್ರೆ ಇಷ್ಟು ಕೆಟ್ಟದಾಗಿ ಮಾಡ್ಬೇಡಿ ಎಂದಿದ್ದಾರೆ 
ನಿವೇದಿತಾ ಗೌಡ ಅವರು ಕುಣಿದ ರೀತಿಯನ್ನು ನೋಡಿದ ಕನ್ನಡ ಸಿನಿ ಪ್ರೇಮಿಗಳು ಅಷ್ಟೊಳ್ಳೆ ಹಾಡಿಗೆ ಈ ರೀತಿ ಕುಣಿದು ಹಾಡನ್ನೇ ಹಾಳು ಮಾಡಿದ್ರಲ್ಲ ಮೇಡಂ ಎಂದಿದ್ದಾರೆ. ಅಷ್ಟೇ ಅಲ್ಲದೆ ಈ ಹಾಡಿಗೆ ಎಂಥಾ ರೀಲ್ಸ್ ಮಾಡ್ಬೇಕು ಗೊತ್ತಾ ಎಂದಿದ್ದಾರೆ.ಎಷ್ಟೊಳ್ಳೆ ಹಾಡು ಇದು. ಇದಕ್ಕೆ ಈ ರೀತಿ ರೀಲ್ಸ್ ಮಾಡ್ತಾರಾ ಎಂದಿದ್ದಾರೆ ನೆಟ್ಟಿಗರು. ನಿವೇದಿತಾ ಗೌಡ ಅವರು ಬ್ಲ್ಯಾಕ್ ಮಿನಿ ಸ್ಕರ್ಟ್ ಧರಿಸಿ ಬ್ಲೂ ಟಾಪ್ ಧರಿಸಿ ಡ್ಯಾನ್ಸ್ ಮಾಡಿದ್ದಾರೆ. ಅವರು ಕೂದಲು ಫ್ರೀಯಾಗಿ ಬಿಟ್ಟಿದ್ದರು.
ಇನ್ನು ಬೆಳ್ಳಿ ಮೋಡ ಇವಳ ಮನಸು, ಮನಸುಮಿಂಚು ಬಳ್ಳಿ ಇವಳ ಮುನಿಸು.. ಎಂಬ ಹಾಡಿಗೆ ನಿವೇದಿತಾ ಗೌಡ ಡ್ಯಾನ್ಸ್ ಮಾಡಿ ವಿಡಿಯೋ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಎಷ್ಟು ಚಂದದ ಹಾಡು ಇದು, ಎಷ್ಟೊಳ್ಳೆ ಸಾಹಿತ್ಯ ಸಂಗೀತ ಇರುವಂತಹ ಹಾಡು. ಇಂಥಹ ಹಾಡಿಗೆ ಈ ರೀತಿ ಡ್ಯಾನ್ಸ್ ಮಾಡಿದ್ಯಲ್ಲಮ್ಮಾ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.