ಗಂಡ ಡಿ ವೋರ್ಸ್ ಕೊಟ್ಟ ಬೆನ್ನಲ್ಲೇ ಮನೆಯಲ್ಲಿ ಪಾರ್ಟಿ ಮಾಡಿದ ನಿವೇದಿತಾ ಗೌಡ;

 | 
J

ʼಬಿಗ್‌ಬಾಸ್ʼ ಕನ್ನಡ ಸೀಸನ್ 5ರಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಡಿವೋರ್ಸ್ ಸುದ್ದಿ ಇದೀಗ ಸಖತ್‌ ಸೌಂಡ್‌ ಮಾಡುತ್ತಿದೆ. ಬಿಗ್‌ಬಾಸ್ ರಿಯಾಲಿಟಿ ಶೋನಿಂದಲೇ ಈ ಜೋಡಿ ಪ್ರೀತಿ ಶುರು ಮಾಡಿಕೊಂಡಿತ್ತು. 2019ರ ಮೈಸೂರು ಯುವ ದಸರಾ ವೇದಿಕೆಯಲ್ಲೇ ನಿವೇದಿತಾಗೆ ಚಂದನ್ ಶೆಟ್ಟಿ ಪ್ರಪೋಸ್ ಮಾಡಿದ್ದರು. 

ಇದಕ್ಕೆ ನಿವೇದಿತಾ ಯಸ್‌ ಅಂತಾ ಹೇಳಿದ್ದರು. ಇದು ದೊಡ್ಡ ವಿವಾದಕ್ಕೂ ಕಾರಣವಾಗಿತ್ತು. ಆಗ ಸರ್ಕಾರಿ ಕಾರ್ಯಕ್ರಮದ ವೇದಿಕೆಯನ್ನು ಲವ್‌ ಪ್ರಪೋಸ್‌ಗೆ ಬಳಸಿಕೊಂಡಿದ್ದಕ್ಕೆ ರಾಜ್ಯ ಸರ್ಕಾರವು ಈ ಜೋಡಿಯ ಮೇಲೆ ನಿಷೇಧ ಹೇರಿತ್ತು. ಚಂದನ್‌ ಶೆಟ್ಟಿ ತಮ್ಮ ವಿಭಿನ್ನ ಹಾಡುಗಳ ಮೂಲಕವೇ ಕನ್ನಡಿಗರ ಮನಸ್ಸು ಗೆದ್ದಿದ್ದರು. ಪರಸ್ಪರ ಪ್ರೀತಿಸಿ 2020ರಲ್ಲಿ ಮದುವೆಯಾಗಿದ್ದ ನಿವೇದಿತಾ ಮತ್ತು ಚಂದನ್‌ ನೂರಾರು ಕಾಲ ಸುಖವಾಗಿ ಬಾಳುತ್ತೇವೆ ಅಂತಾ ಹೇಳಿಕೊಂಡಿದ್ದರು.

 ಅದರಂತೆ ಇಷ್ಟು ದಿನ ಎಲ್ಲವೂ ಚೆನ್ನಾಗಿತ್ತು. ರೀಲ್ಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿಗೆ ಸೋಷಿಯಲ್‌ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್‌ ಕೂಡ ಇದ್ದಾರೆ. ತುಂಬಾ ಇಷ್ಟಪಟ್ಟು ಮದುವೆಯಾಗಿದ್ದ ಈ ಜೋಡಿಯ ಜೀವನ ಇದೀಗ ಉಲ್ಟಾ ಆಗಿದೆ. ಈ ಹಿಂದೆ ಸೃಜನ್ ಲೋಕೇಶ್ ಸಾರಥ್ಯದ ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಬಂದಿದ್ದ ನಿವೇದಿತಾ ಗೌಡ ಅವರು ರಾಗಿಮುದ್ದೆಯನ್ನು ಫೋರ್ಕ್‌ನಲ್ಲಿ ತಿಂದಿದ್ದರು. ಅದು ಸೋಷಿಯಲ್ ಮೀಡಿಯಾ ಅಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.

ಅದರ ಬೆನ್ನಲ್ಲೇ ಇದೀಗ ನಿವೇದಿತಾ ಅವರು ಸಕತ್ತಾಗಿ ದೋಸೆ ಮಾಡುವ ವಿಡಿಯೋ ಒಂದು ವೈರಲ್ ಆಗಿದ್ದು ಅದರಲ್ಲಿ ನಿವೇದಿತಾ ಗೌಡ ಅವರು ಸಕತ್ತಾಗಿ ದೋಸೆ ಮಾಡಿದ್ದಾರೆ.ನಾಲ್ಕು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಚಂದನ್ ಶೆಟ್ಟಿ - ನಿವೇದಿತಾ ಗೌಡ ಇದೀಗ ದೂರಾಗಲು ನಿರ್ಧರಿಸಿದ್ದಾರೆ. ವಿಚ್ಛೇದನ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿ ದೂರ ಆಗ್ತಿರೋದು ಬೇಸರದ ಸಂಗತಿ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.