ಸಂಪೂರ್ಣ ರೀಲ್ಸ್ ರಾಣಿಯಾಗಿ ಬದಲಾದ ನಿವೇದಿತಾ ಗೌಡ
Mar 29, 2025, 13:20 IST
|

ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ರೀಲ್ಸ್ ಮೂಲಕವೇ ಸಾಕಷ್ಟು ಸುದ್ದಿಯಲ್ಲಿ ಇರುತ್ತಾರೆ. ಈಗಾಗಲೇ ರ‍್ಯಾಪರ್ ಚಂದನ್ ಶೆಟ್ಟಿ ಜತೆ ನಿವೇದಿತಾ ಗೌಡ ವಿಚ್ಛೇದನ ಪಡೆದಿದ್ದಾರೆ. 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಈ ಜೋಡಿ ಫೇಮಸ್ ಆಗಿದ್ದೇ ರೀಲ್ಸ್ಗಳಿಂದ. ಡಿವೋರ್ಸ್ ಬಳಿಕ ಸೋಶಿಯಲ್ ಮೀಡಿಯಾದಿಂದ ಕೆಲ ಕಾಲ ದೂರ ಉಳಿದಿದ್ದ ನಿವೇದಿತಾ ಗೌಡ ಇತ್ತೀಚಿಗೆ ಫುಲ್ ಆ್ಯಕ್ಟಿವ್ ಆಗಿದ್ದಾರೆ. ಈಗೀಗ ಬ್ಯಾಕ್ ಟು ಬ್ಯಾಕ್ ಹೊಸ ರೀಲ್ಸ್ ಮಾಡಿ ಇನ್ಸ್ಟಾದಲ್ಲಿ ಶೇರ್ ಮಾಡುತ್ತಿದ್ದಾರೆ. ಈ ಬಾರಿ ಸೀರೆಯುಟ್ಟ ನಿವಿ, ನಾಚಿ-ನಲಿದಿದ್ದಾರೆ.
ಒಲವೇ, ಒಲವೇ, ಒಲವೇ.. ಈ ನದಿಗೆ ಕಡಲಾಗಿರುವೆ.. ಎಂಬ ಸುಂದರವಾದ ಹಾಡಿಗೆ ನಿವೇದಿತಾ ಗೌಡ ಬ್ಯೂಟಿಫುಲ್ ಆಗಿಯೇ ರೀಲ್ಸ್ ಮಾಡಿದ್ದಾರೆ. ವೈಟ್ ಕಲರ್ ಟ್ರ್ಯಾನ್ಪರೆಂಟ್ ಸೀರೆಯುಟ್ಟು ನಿವೇದಿತಾ ಗೌಡ ಮಿಂಚಿದ್ದಾರೆ. ನಿವಿಯ ಅಂದದ ಲುಕ್ಗೆ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.ಸೀರೆಯುಟ್ಟು, ಹಣೆಗೆ ಬಿಂದಿಯಿಟ್ಟು, ನಾಚುತ್ತಾ- ನಲಿಯುತ್ತಾ ಕುಣಿದಾಡಿದ ನಿವೇದಿತಾ ಅವರನ್ನು ನೋಡಿದ ನೆಟ್ಟಿಗರು ಲೈಕ್ಗಳ ಸುರಿಮಳೆಗೈದಿದ್ದಾರೆ.
ಹಾರ್ಟ್ ಇಮೋಜಿಯಿಂದ ಕಮೆಂಟ್ ಬಾಕ್ಸ್ ತುಂಬಿದೆ. ಒಳ್ಳೆಯ ರೀಲ್ಸ್, ಎಷ್ಟು ಚೆಂದ ನಿವಿ, ನೀನು ಅಂದದ ಗೊಂಬೆ ಅಂಥೆಲ್ಲ ಜನರು ಕಮೆಂಟ್ ಮಾಡ್ತಿದ್ದಾರೆ. ಜೂನ್ 7ರಂದು ಕಾನೂನು ಬದ್ಧವಾಗಿ ಪರಸ್ಪರ ಒಪ್ಪಂದದಿಂದ ಚಂದನ್ ಹಾಗೂ ನಿವೇದಿತಾ ಗೌಡ ವಿಚ್ಛೇದನ ಪಡೆದಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 5 ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿ, ಸ್ನೇಹ ನಂತರ ಪ್ರೀತಿಯಾಗಿ ಬದಲಾಯಿತು.
2017ರಲ್ಲಿ ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಶೆಟ್ಟಿ ಅವರು ಪ್ರಪೋಸ್ ಮಾಡಿದ್ದರು. ಬಳಿಕ ಅವರಿಬ್ಬರು 2020 ಫೆಬ್ರವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.ಬಿಗ್ ಬಾಸ್ ರಿಯಾಲಿಟಿ ಶೋ ಮಾಜಿ ಸ್ಪರ್ಧಿಯಾಗಿದ್ದ ನಿವೇದಿತಾ ಗೌಡ ಹೊರಗೆ ಬಂದ್ಮೇಲೆ ಫುಲ್ ಫೇಮಸ್ ಆದ್ರು. ಹೊಸ ಹೊಸ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ರು. ಬಳಿಕ ಕೊಂಚ ಗ್ಯಾಪ್ ತೆಗೆದುಕೊಂಡಿದ್ರು. ಇದೀಗ ಮತ್ತೆ ಕಿರುತೆರೆ ರೀ ಎಂಟ್ರಿ ಕೊಟ್ಟಿದ್ದಾರೆ. ಹೀಗೆ ಚಂದದ ವಿಡಿಯೋ ರೀಲ್ ಮಾಡಿ ಎಂದು ಅಭಿಮಾನಿಗಳು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.